ಪುಟ:ವತ್ಸರಾಜನ ಕಥೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಮಹಾಜನ: ಕಥೆ, - 44 ಭೇದಕವಾದಂಥ ಮಾತುಗಳನ್ನೇ ಆಡುತ್ತಲಿರುವಳು, ಈಗ ರಾಯನಲ್ಲಿ ಅನುರಾಗ ಪ್ರಟ್ಟಿರುವ ಸಂಗತಿಯನ್ನು ದೇವಿಯಾಗಲಿ, ಕಾಂಚನಮಾಲೆಯಾಗಲಿ, ತಿಳಿದಲ್ಲಿ ದೇಹಾಂತವಾದ ಶಿಕ್ಷೆಯನ್ನು ಮಾಡಿಸದೆ ಬಿಡರು, ಯಾವುದಕ್ಕೂ ಸ್ವಾತಂತ್ರವಿಲ್ಲದ ಸ್ತ್ರೀಯರಿಗೂ, ದರಿದ್ರರಾದ ಪುರುಷರಿಗೂ ಬಂದ ಯೌವನವು ಕೃಪಣನ ದ್ರವ್ಯ ದಂತೆ ವ್ಯರ್ಥವಾಗುವುದು, ಎನ್ನ ನ್ನು ನಿರ್ಮಾಣವಂ ಗೈದ ಬ್ರಹ್ಮನಿಗೆ ಆಯಾಸ ಮಾತ್ರವೇ ಫಲವಲ್ಲದೆ ಇನ್ನೊ೦ದು ಫಲವನ್ನೂ ಕಾಣೆನು ?” ಎಂದು ನುಡಿದು ತನ್ನ ಮನಸ್ಸನ್ನು ಕುರಿತು ಎಲೆ, ಮನವೇ ! ಹಾಸವಂ ಗೆಯ್ಯದೆ ಇದ್ದರೂ ಕಮಲದಳಗಳಂತೆ ಕಾಂತಿಯನ್ನುಳ್ಳ ಕರ್ಣಾ೦ತವಂ ಸೇರಿರುವ ಕಣ್ಣುಗಳ ಕೊನೆಗೆ ೪೦ದ ಕೊನಬುದೋರುವಂತೆ ಕ್ಷಣಮಾತ್ರವಾದರೂ ಎನ್ನ ಮುಖವಂ ನೋಡದೆ ಇದ್ದರೂ, ತನಗೆ ಆಪ್ತಳಾದ ಸಖಿಯೊಡನೆ ಮನೋಹರವಾಗಿ ಸವಿಯಾದ ಸರಸೋ ಕಿಯನ್ನಾಡದೆ ಇದ್ದರೂ, ಇಲ್ಲಿ ಈಗ ಕ್ಷಣಕಾಲವು ರಾಯನನ್ನು ನೋಡಿದ ಮಾತ್ರ ದಿಂದಲೇ ಬಾಲ್ಯದಿಂದ ಸಂಗಡಲೇ ವೃದ್ದಿಯಂ ಹೊಂದಿದ ಎನ್ನ೦ ಬಿಟ್ಟು ಆ ರಾಯನ ನೈ ಸೇರುವುದು ನಿನಗೆ ನ್ಯಾಯವೆ ಸೇಳು ? ದೊರೆಗಳಾದವರು ಐಶ್ವರದಿಂದ ಮತ್ತ ರಾಗಿ ಬಹುಜನ ಸ್ತ್ರೀಯರಿಗೆ ವಲ್ಲಭರಾಗಿರುವರು ಎಂಬ ಪರಿಯನ್ನೂ ಪರೀಕ್ಷಿಸದೆ ಬಯಲ ಭ್ರಾಂತಿಯಂ ಪೊಂದಿ ಬಳಲುತ್ತಿರುವುದು ನ್ಯಾಯವೆ ಪೇಳು ? ” ಎಂದು ನುಡಿದು, ತಂಗಾಳಿಯ ಸೋಂಕಿನಿಂದಲೂ, ಕರ್ಣಗಳಿಗೆ ಶೂಲವನ್ನಿಟ್ಟಂತೆ ಅಧಿಕ ವ್ಯಥೆಯನ್ನು ಹೊಂದಿಸುತ್ತಿರುವ ಶುಕಪಿಕ ಮಯೂರ ಮೊದಲಾದ ಪಕ್ಷಿಗಳ ಕಲಕಲ ಧ್ವನಿಯನ್ನು ಕೇಳಿ, ಕ್ಷಣಕೊಂದು ಸರಿಯಾಗಿ ಬರುವ ವೃದ್ದಿಯಂ ಸಹಿಸಲಾರದೆ, ಉನ್ನತಾವಸ್ಥೆಯಂ ಪೊಂದಿ, ಸುತ್ತು ಗೊಂಡಿರುವ ಮಲ್ಲಿಗೆಯ ಬಳ್ಳಿಗಳಿಂದ ಮನೋ ಹರವಾದ ಮಾವಿನ ಮರದ ಸವಿಾಪವಂ ಸೇರಿ, ( ಎಲೆ ಮಾಕಂದಪ್ಪ ಕ್ಷವೇ ! ಮನವಂ ಮಧಿಸುತ್ತಿರುವ ಮನ್ಮಥನ ಬಾಧೆಗೆ ಈಡಾಗಿರುವ ಎನ್ನ ನ್ನು ಪ್ರಾಣಕಾಂತ ನಾದ ವತ್ವ ರಾಜನೊಡನೆ ಕೂಡಿಸದೆ ನೀನು ಮಾತ್ರ ಈ ಲತೆಯೆಂಬ ಕಾಂತೆಯನ್ನು ಆಲಿಂಗಿಸಿ ಅಧಿಕಸಂತೋಷವನ್ನು ಪೊಂದುವುದು ನ್ಯಾಯವೇ ಪೇಳು ? ಎಲೆ ಸುರ ಹೊನ್ನೆ ಯೇ, ಈ ಕನ್ನೆ ಯಾಕಾಯಜನ ಬಾಣದಿಂದ ಕಂದುವಳೆಂಬ ಸಂದೇಹವು ಒಂದು ಬಾರಿಯೂ ಯೋಚಿಸದೆ ಪಷ್ಟಗಳೆಂಬ ವ್ಯಾಜದಿಂದ ಮ೦ದಹಾಸವಂ ಗೆಯ್ಯುವುದು ಅಂದವೇ ಪೇಳು ? ಎಲೆ ಲತೆಗಳಿರಾ, ನೀವು ನಿಮಗೆ ಒಂದೊಂದು ಬೇಕಾದ ಪುಷ್ಪಗಳನ್ನು ಅವಲಂಬಿಸಿ ವೃದ್ದಿಯಂ ಪೊಂದಿ ನಿರಾಲಂಬಳಾದ ಎನ್ನನ್ನು ನೋಡಿ ತಲೆಗಳಂ ತೂಗುತ್ತ ಭ್ರಮರಧ್ವನಿಗಳೆಂಬ ಮಾತುಗಳಿಂದ ಹಾಸ್ಯವಂ ಗೆಯ್ಯುದು ಯುಕ್ತವೆ, ಪೇಳಿ ? ಎಲೆ ಶುಕಏಕಮಯೂರಗಳಿರಾ ! ಎನ್ನ ವಾಕ್ಯ ದಲ್ಲಿಯೂ ಸ್ವರದಲ್ಲಿಯ ಕೇಶಕಲಾಪದಲ್ಲಿಯೂ ದ್ವೇಷವನ್ನಾ೦ತು ನಿಮ್ಮ ನಿಮ್ಮ ಸ್ವರಂಗಳೆಂಬ ತಸ್ಯನಾರಾಚಗಳನ್ನು ಎನ್ನ ಕಿವಿಗೆ ಪುಗಿಸಿ ವ್ಯಥೆಯನ್ನುಂಟುಮಾಡುವ