ಪುಟ:ವತ್ಸರಾಜನ ಕಥೆ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, ... ೩೯ ಅಷ್ಟರಲ್ಲೇ ಪಶ್ಚಿಮದಿಕ್ಕಂತೆಗೆ ಸಾಗರಿಕೆಯ ವಿರಹವ್ಯಥೆಯಂ ವಿವರಿಸಲು ಪೋಗುವನೋ ಎಂಬಂತೆ, ಅಸ್ತ ಸರತದಲ್ಲಿ ಬೆಳೆದ ತಾಳಫಲವು ವಾಯುವಿನ ಸಂಘ ರ್ಷಣೆಯಂದ ಕಿತ್ತು ಪಶ್ಚಿಮ ಸಮುದ್ರದಲ್ಲಿ ಬೀಳುವುದೋ ಎಂಬಂತೆ, ಸೂರಕಿರಣದ ಸೆಕೆಯಿಂದ ಬೆಮರಿದ ಗಗನಲಕ್ಷ್ಮಿಯ ಫಲದಿಂದ ಜಾರಿ ಬೀಳುವ ಮಾಣಿ ಕದ ಬೊಳ್ಳೋ ಎಂಬಂತೆ, ಡಮರಗಿರಿಯ ತಪ್ಪಲಿನಲ್ಲೊಪ್ಪುವ ವ್ಯಾಧರುಗಳ ಬಾಣದಿಂ ನಿಕೃತವಾಗಿ ರಕ್ತಸಿಕ್ತವಾದ ಗಜದ ಕುಂಭಸ್ಪಳವೋ ಎಂಬಂತೆ, ದಿವಸವೆಂಬ ವಿಟ ಪುರುಷನು ಪಶ್ಚಿಮದಿಕಾಂತೆಯ ಅಲಂಕಾರಕೋಸುಗ ಕಲಸಿ ಸಮುದ್ರ ತೀರದಲ್ಲಿ ಮಡಗಿರುವ ಕುಂಕುಮದ ಉಂಡೆಯೋ ಎಂಬಂತೆ, ಪತಿ ಮದಿಕ್ಕಿನ ಬೆಟ್ಟದ ಬೇಗೆ ಯಿಂದ ಸಿಡಿದು ಬೀಳುವ ದುಂಡಾಗಿರುವ ಕೆಂಡವೋ ಎಂಬಂತೆ, ಆಕಾಶವೆಂಬ ಕುಲಾ ಲನು ವರುಣನ ಕರಣಿಗೆ ವಿಚಿತ್ರತರವಾದ ಘಟಗಳಂ ವಿರಚಿಸಲೋಸುಗ ತೆಗೆದು ಕೊಂಡುಪೋದ ಕುರುವಿಂದದ ಕತ್ರವೋ ಎ೦ಬ೦ತೆ, ರಾಜಪ್ರೀತಿಕರವಾದ ಕನೆ ದಿಲೆಗಳಂ ಕ೦ದಿಸುತ್ತಲಿದ್ದುದರಿಂದಲೂ ಸಮಸ್ತ ಪ್ರಾಣಿಗಳಿಗೂ ಪುಟ್ಟಿದ ಪಾತಕ ವನ್ನು ಸಮುದ್ರಸ್ನಾನದಿಂದ ಪೋಗಲಾಡಿಸುವುದಕ್ಕೋಸುಗ ಪೋಗುವನೋ ಎಂಬಂತೆ, ಸೂರನು ಪತ್ತಿಮಗಿರಿಯಿಂದ ಮರೆಯಾಗಿ ಸಮುದ್ರವಂ ಪ್ರವೇಶಿಸಲು; ನಿಜಪತಿಯು ಪೋದಮೇಲೆ ಹೃದಯದಲ್ಲಿದ್ದು ಪ್ರಯೋಜನವೇನೆಂದು ಹೊರ ಚೆಲ್ಲಿದ ಕಮಲಲತೆಗಳ ಅನುರಾಗವ ಜಗವಂ ವ್ಯಾಪಿಸಿತೋ ಎಂಬಂತೆ, ಕಾಲ ನೆಂಬ ಶಿಲ್ಪಿ ಯು ಮನ್ಮಧಮಹಾರಾಜನಿಗೆ ಕೊಟ್ಟ ಕೆಂಪು ಸುರಿಪುದದ ಗೂಡಾ ರವೋ ಎಂಬಂತೆ, ಪಶ್ಚಿಮದಿಕಾಂತೆಯಲ್ಲಿ ಅನುರಕ್ತನಾಗಿ ಸೂರನೆಂಬ ಪರಮ ಹಂಸನು ಉಟ್ಟಿದ್ದು ಬಿಟ್ಟು ಹೋದ ಕಾನಿಯ ಒಟ್ಟಿಯು ಆಕಾಶದಲ್ಲಿ ವ್ಯಾಪಿಸಿತೋ ಎ೦ಬ೦ತೆ, ಸಂಧ್ಯಾ ತಾಂಡವ ನಾವೇಗದಿಂದ ಪುಟನೆಗೆದು ಗಗನವಂ ವ್ಯಾಪಿಸಿದ ಗಂಗೆಯ ಬೈ ತಲೆಯ ತ೦ದ್ರ ಮೋ ಎಂಬಂತೆ, ಸಂಧ್ಯಾ ಕಾಲವಾದ ಆ ಬಳಿಕ ಅಗ್ನಿ ಯಂ ಪೊಂದುವುದಕ್ಕೋಸುಗ ಬರುವ ಸೂಕ್ಯನ ತೇಜಸ್ಸು ಗಳೋ ಎಂಬಂತೆ, ಸೂರಕರಣಗಳಿ೦ಗೆ ಸುಡಲ್ಪಟ್ಟ ಆಕಾಶಮಂ ತಂಪುಗೆಯ್ಯಲೋಸುಗ ದಿಗಂಗನೆಯರು ಚಿರ್ಕೊಳವೆಗಳಿ೦ ಚೆಲ್ಲಿದ ಕುಂಕುಮಜಲವೋ ಎಂಬಂತೆ, ದೇವಾಂಗನೆಯರು ನಾಟ್ಯಪ್ರಿಯನಾದ ಪರಶಿವನ ತಿರಸ್ಸಿಗೆ ಪುಷ್ಪಾಂಜಲಿಯಂ ಗೆಯ್ದ ಕೆ೦ಪುದಾಸವಾ ಳದ ಪುಷ್ಪದ ಪುಂಜವೋ ಎಂಬಂತೆ, ನೀಲನಭವೆಂದು ಹೇಳುವ ಕವಿಗಳ ವಾಕ್ಯ ವನ್ನೂ ಆಕಾಶವು ಪ್ರತ್ಯಕ್ಷವಲ್ಲವೆಂದು ನುಡಿಯುವ ತಾರ್ಕಿಕರ ಚಾಳ್ಮೆಯನ್ನೂ ಸಹ ಅಬದ್ಧವಂ ಗೆಯ್ಯಲೋಸುಗ ನಿರ್ಮಿಸಿದ ರಜೋಗುಣವೋ ಎಂಬಂತೆ, ಬ್ರಹ್ಮಾಂ ಡವು ಸೂ ಕಿರಣಗಳಿಂದ ಕೆಂಪೇರಿದುದೋ ಎಂಬಂತೆ, ವಾಸರಲಕ್ಷ್ಮಿಯು ಉಟ್ಟ ಚಂದ್ರಗಾವಿಯ ಸೀರೆಯೋ ಎಂಬಂತೆ, ಜಗವೆಲ್ಲವಂ ರಕ್ತಮಯವೆನಿಸಿ, ವಜಗ ಇಲ್ಲಿ ಕುರುವಿಂಗರ ಮಣಿಯ ಶಂಕೆಯಂ ನೆಲೆಗೊಳಿಸಿ, ವಿರಹಗಿಂ ಕೊರಗುವ ತರು