ಪುಟ:ವತ್ಸರಾಜನ ಕಥೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ - ಕರ್ನಾಟಕ ಕಾವ್ಯಕಲಾನಿಧಿ, - ಣಿಯರ ಕಡೆಗಣ್ಣ ಕೆಂಪಿಗೆ ಕೈಲಾಗವ೦ ಕೊಟ್ಟು ಸಂಧ್ಯಾ ರಾಗವೆಲ್ಲವೂ ಜಗವೆಲ್ಲವಂ ತುಂಬಿಕೊಂಡಿರಲು ; ಆ ಕಾಲದಲ್ಲಿ ಸಕ್ಕರೆಗಿಂತಲೂ ಸವಿಯಾದ ಗುಟುಕುಗಳು ಕೊಕ್ಕಿನಲ್ಲಿ ಕಚ್ಚಿ, ಅಕ್ಕರೆಯಿಂದ ಸಕ್ಕರೆಗಳಂ ಪಸರಿಸಿ, ಗರಿಗಳಂ ಕೆದರಿ, ಮರಗಳಿ ರುವ ಗೂಡುಗಳಂ ಸೇರುತ್ತಲಿರುವ ಪಲಬಗೆಗಳಾದ ಪಕ್ಷಿಗಳ ಕಲಕಲಧ್ವನಿಗಳು ದಿಕ್ಕುದಿಕ್ಕುಗಳ೦ ವ್ಯಾಪಿಸುತ್ತಿರಲು ; ಜಾರಕಾಂತೆಯರು ಮಾರನಿಗಿಂತಲೂ ಕ್ರೂರ ನಾಗಿದ್ದ ಸೂರನು ನಮಗೆ ಸಂತಾಪವನ್ನು ೦ಟುಮಾಡಿದುದಕ್ಕೆ ತಕ್ಕ ಫಲವನ್ನುಂಟು ಮಾಡಿದರೂ, ಈ ಸಂಜೆಗೆಂಪು ಮೊತ್ತವಾಗಿ ಸುತ್ತಿ ಬರುವ ಕತ್ತಲೆಗೆ ಸ್ಥಳವನ್ನಿ ಯದೆ ಬೆಳಕುದೋರುತ್ತಲಿರುವುದೆಂದು ಪ ಮ ದಿಕ್ಕನ್ನೆ ರೆಪ್ಪಿಯ `ಮುಚ್ಚದೆ ಕರನೆಟ್ಟಿಗೆಯಂ ಮುರಿಯುತ್ತ, ಮನದಲ್ಲಿ ಮರುಗುತ್ತಿರಲು ; ಅಲ್ಲಲ್ಲಿ ರಾಜಬೀದಿಗಳು ಸೋಜಗಮಂ ಬೀರುವ ಆಭರಣವಸ್ತ್ರಗಳಂ ಧರಿಸಿ ಸಂಚರಿಸುವ ವಿಟಪುರುಷರು ಗಳ ಸಂದಣಿಗಳಿಂದ ಸುಂದರವಾಗಿ ತೋರುತ್ತಿರಲು ; ತೋರಿ ಮರೆಯಾಗುವ ದುರ್ಜನನ ಐಶ್ವ ರದಂತೆ ಸಂಧ್ಯಾ ರಾಗವು ಬಾರಿಪೋಗಲು ; ಕಮಲಲತೆಗಳು ತೇಜೋನಿಧಿಯಾದ ಪತಿಯ ಪೋದನೆಂಬ ವ್ಯಸನದಿಂದ ಮಕರಂದವೆಂಬ ಕಣ್ಣೀ ರುಗಳಂ ಬಿಡುತ್ತ ಕಮಲಗಳೆ೦ಬ ನೇತ್ರಗಳ೦ ಮುಚ್ಚಿ, ಭೈಂಗವ್ವನಿಗಳೆ೦ಬ ರೋದ ನವಂ ಗೆಯ್ಯುವುವೋ ಎಂಬಂತೆ ಕಾಣುತ್ತಿರಲು ; ಜಾರಟೋರರುಗಳಿಗೆ ಸಿದ್ಧಾಂಜ ನವೋ ಎಂಬಂತೆ, ನಾಟ್ಯವಂ ಗೆಯ್ಯುವ ಪರಶಿವನು ಪೊದ್ದಿರ್ದ ಗಜಚರ್ಮವು ಹಾರಿ ಜಗನಂ ವ್ಯಾಪಿಸಿತೋ ಎಂಬಂತೆ, ಸಂಧ್ಯಾ ರಾಗವೆಂಬ ಕಾಳ್ಳಿಚ್ಚಿನ ಸೆಕೆ ತಟ್ಟಿ ಬ್ರಹ್ಮಾಂಡಕಟಾಹವ ಕಪ್ಪುದೋರಿದುದೋ ಎಂಬಂತೆ, ಸಂಧ್ಯಾಂಗನೆಯು ರಾತ್ರಿ ಯಲ್ಲಿ ಸಂಚರಿಸಲೋಸುಗವಾಗಿ ಉಟ್ಟರ್ವ ನೀಲಾಂಬರವೋ ಎಂಬಂತೆ, ಸೂರ ನಿಂದೆ ಸಂಸ್ಕೃತರಾದ ಮಂದೇಹರಾಕ್ಷಸರ ಹೃದಯದಲ್ಲಿರ್ದ ಪಾಶಬಾಲವೋ ಎಂಬಂ ತೆ, ಚಾರಿಣಿಯರು ಸೂರನು ಆಸ್ತಮಂ ಪೊಂದಲೆಂದು ಶಪಿಸಿದ ಶಾಸ್ತಾಕ್ಷರಗಳು ರೂಪುಗೊಂಡು ಆಕಾಶವಂ ವ್ಯಾಪಿಸಿದುವೋ ಎಂಬಂತೆ, ಮಾರನೆಂಬ ಮಾಯಾ ವಿಯು ಸಮಸ್ತ ಪ್ರಾಣಿಗಳ ನೇತ್ರಗಳಂ ಹೊರತಟ್ಟಿ ಜನರ ಮನವನ್ನು ಅಪಹರಿಸ ಲೋಸುಗ ಕಲ್ಪಿಸಿದ ಮಾಯಾಜಾಲವೋ ಎಂಬಂತೆ, ಸೂರನ ಸಂಗದಿಂದ ಬಿಚ್ಚಿದ ಗಗನಲಕ್ಷ್ಮಿಯ ಕೇಶಪಾಶವೋ ಎಂಬಂತೆ, ಪ್ರಾತಃಕಾಲವಾದ ಬಳಿಕ ಪರೆದು ಪೋಗುವ ರಾಕ್ಷಸರ ಸಮೂಹವೋ ಎಂಬಂತೆ, ಪತಿಯಾದ ಪರಶಿವನ ನಾಟ್ಯೂ ತೃವವಂ ನೋಡಲೋಸುಗ ಬಂದಿರ್ಪ ಭೂತ ಜಾತವೋ ಎಂಬಂತೆ, ಕಮಲಕುಮುದ ಗಳಲ್ಲಿ ಸ್ಥಳವಿಲ್ಲದೆ ಜಗಮಂ ಮುತ್ತಿರುವ ಶೃಂಗಸಂಗವೋ ಎಂಬಂತೆ, ಗಂಗೆಯಂ ನೋಡಲೋಸುಗ ಜಗಮಂ ವ್ಯಾಪಿಸಿ ಸ್ವರ್ಗವುಂ ಪೊಂದುವ ಯಮುನಾನದಿಯ ಜಲಪೂರವೋ ಎಂಬಂತೆ, ಜಾರಸ್ಸಿಯರಿಗೆ ಮನೆದೇವತೆಯಂತೆ, ಚೋರರಿಗೆ ಸೌಭಾಗ್ಯದೇವತೆಯಂತೆ, ಭೂಕಸಮೂಹಕ್ಕೆ ಅಮೃತಾಂಜನದಂತೆ, ಪ್ರಾಣಿಗಳ ಕ್ರಿ