ಪುಟ:ವತ್ಸರಾಜನ ಕಥೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 - 15 - ಕರ್ಣಾಟಕ ಕಾವ್ಯಕಲಾನಿಧಿ, - ಸಂಘದಲ್ಲಿ ಸಂಗತನಾದ ಶೃಂಗಗಳ ಸಂಗೀತದಿಂದ ಮಂಗಳಕರವಾಗಿ, ಚಂದ್ರ ಕಿರಣಗಳಿಂದ ಹೊರಸೂಸುತ್ತಿರುವ ಚಂದ್ರಕಾಂತಶಿಲೆಗಳ ಹಂತಗಳಿಂದ ಕಾಂತ ಮಾಗಿ, ಕಮಲಗಳೆ೦ಬ ಮುಖಗಳಿಂದ, ಮತ್ತ್ವಗಳೆಂಬ ನೇತಗಳಿಂದ, ಸುಳಿಗಳೆಂಬ ನಾಭಿಗಳಿಂದ ತೆರೆಗಳೆಂಬ ತೋಳುಗಳಿ೦ದ, ಪಾವಸೆಗಳೆಂಬ ರೋಮರಾಜಿಗಳಿಂ ದಲೂ ಯುಕ್ತವಾಗಿ, ಅನೇಕರಾದ ನಾರಿಯರ ವಿಲಾಸವಂ ತಾಳಿ, ನೊರೆಗಳೆಂಬ ಮಂದಹಾಸದಿಂದ ಸುಂದರವಾಗಿರುವ ಕಮಲಸರೋವರವಂ ಪೊಂದಿ, ಕಮಲ ಪರಾಗಗಳಿಂದಲೂ ಮಕರಂದಗಳಿ೦ದಲೂ ಪರಿಮಳವಂ ತಾಳಿ ಪ್ರಕಾಶಿಸುತ್ತಿರುವ ಈ ಜಲದಲ್ಲಿ ಮುಳುಗಿ ಸಂತಾಸನಂ ಪರಿ ಹರಿಸುವೆನೆಂದು ತಿಳಿದು, ಆ ಕೊಳದ ಹಂತ ಗಳಲ್ಲಿ ಕಾಂತಗಳಾದ ಪಾದಗಳನ್ನಿಟ್ಟು ಒರಲು; ಇವಳ ದೇಹದಿಂದ ಪೊರಮಟ್ಟ ವಿರಹಾಗ್ನಿ ಯ ಸಕೆ ತಗ ಕಮಲಗಳೆಲ್ಲಾ ಕರಿಗೊಂಡೂ, ಹಂಸೆಗಳು ಬೆಂದು ಮೇಲ ಕೈ ಹಾರಲಾರದೆ ತೀರದಲ್ಲಿ ಬಿದ್ದು ಹೊರಳಿ ಕೆಲಕಾರವಂ ಗೆಯ್ಯುತ್ತಲ, ಭ್ರಮರ ಗಳು ಕರಿಗೊಂಡು ವರ್ಣ ವ್ಯತ್ಯಾಸವಂ ಪೊಂದದೆ ಚಂದ ಕಾಂತ ಶಿಲೆಗಳು ತಮ್ಮಿಂದ ಪೊರಮಡುವ ಜಲಗಳ ಪೀರಿ ಸಿಡಿದೂ, ಒತ್ತಿನಲ್ಲಿರುವ ವೃಕ್ಷಲತೆಗಳು ಕಾಡುಗಿಚ್ಚಿನ ಸೆಕೆ ತಗಲಿ ಕಂಗಿರುವಂತೆ ಒಣಗಿದ ಎಲೆಗಳಿ೦ ಪುಡಿಗೊಂಡು ಮೊಗ್ಗು ಗಳಿ೦ ಯು ಕಗಳಾಗಿಯೂ ತೋರುತ್ತಿರಲು ; ಆ ನಾಗರಿಕೆಯು ಮೆಲ್ಲಮೆಲ್ಲನೆ ಬಂದು, ಎರಡು ಪಾದಗಳನ್ನೂ ಜಲದಲ್ಲಿ ಇರಿಸಿ, ತಂಗಾಳಿಗೆ ಮೈಗೊಟ್ಟು, ಮೂರ್ಛಯಂ ಪೊಂದಿ, ಆ ಸೋಪಾನದಲ್ಲಿ ಮೈ ಮರೆದೊರಗಿರಲು ಇತ್ತಲು ವಾಸವದತ್ತಾ ದೇವಿಯು ಕಾಂಚನಮಾಲೆಯಂ ನೋಡಿ, ಎಲೆ ಬಾಲೆಯೆ, ಇಂದಿನ ದಿನದಲ್ಲಿ ಮಂದಯಾನೆಯಾದ ನಾಗರಿಕೆಯು ನಮ್ಮ ರಾಯನ ಕಣ್ಣಿಗೆ ಬಿದ್ದಲ್ಲಿ ಯಧಾರವಾಗಿ ಮನ್ಮಥೋತ್ಸವವು ಪ್ರಾ ಪ್ರವಾಗುತ್ತ ಇದ್ದುದು ದೈವಯೋಗದಿಂದ ತಪ್ಪಿದಂತಾಯಿತು. ನೀನು ಸಮಸ್ತ ಸಪಿಯರಿಗೂ ನನ್ನ ಆಜ್ಞೆ ಯ ಪೇಳುವಲ್ಲಿ ಸಾಗರಿಕೆಯ ವಿಚಾರಕ್ಕೆ ಏನು ಅಪ್ಪಣೆ ಎಂದು ಕೇಳದೆಹೋದೆ. ಆದರೂ ಇನ್ನು ಮೇಲೆ ಅವಳ ವಿಚಾರದಲ್ಲಿ ಬಹಳ ಜಾಗರೂಕಳಾಗಿರು ” ಎಂದು, CC ಇದಲ್ಲದೆ ನಿಮ್ಮ ರಾಯನಿಂದ ಸಂರಕ್ಷಿತ ವಾಗುವ ನವಮಾಲಿಕಾಲತೆಗೆ ಅಕಾಲದಲ್ಲಿ ಪುಷ್ಪ ಪಲ್ಲವಗಳ ಸಮೃದ್ಧಿಯನ್ನು ೦ಟು ಮಾಡುವುದಕ್ಕೋಸುಗ ದೋಹಳಕ್ರಿಯೆ ಯಲ್ಲಿ ಬಲ್ಲಿದನಾಗಿ ವಿಂಧ್ಯಪರ್ವತವಾಸಿಯಾಗಿದ್ದ ಒಬ್ಬ ಸಿದ್ದ ಪುರುಷನಂ ಕರೆ ಯಿಸಿ ಇದ್ದಾನೆ ” ಎಂಬ ವಾರ್ತೆಯನ್ನು ಕಮಲಿನಿಯು ಎನ್ನೊಡನೆ ಬಂದು ಹೇಳಿರು ವಳು. ಆ ವಾಕ್ಯವು ಯವಾರ್ಧವಾಗಿರುವುದೋ ಅಬದ್ಧವಾಗಿರುವುದೇ, ನೀನು ಪೋಗಿ ಚೆನ್ನಾಗಿ ವಿವರಿಸಿಕೊಂಡು ಬರುವಳಾಗು ” ಎಂದು ಅಪ್ಪಣೆಯನ್ನಿತ್ತು ಕಳುಹಿಸಲು ; ಅ -, ತ೦ಗ ಶಾಲೆಯಲ್ಲಿ ಸುಸಂಗತೆಯು ಕುಳಿತು € ನಾಗರಿಕೆಯು ಮೇಧಾವಿನಿ