ಪುಟ:ವತ್ಸರಾಜನ ಕಥೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

– .ವತ್ಸರಾಜನ ಕಥೆ, ... + ಯೆಂಬ ಶಾರಿಕೆಯ ಸಂಜರವನ್ನು ಎನ್ನ ಹಸ್ತದಲ್ಲಿತ್ತು ಮನ್ಮಥನ ಪೂಜೆಯನ್ನೊಡ ಲೋಸುಗ ಫೋಗಿ ರಾತ್ರಿಯಾದರೂ ಈ ಶಕುಂತಶಾಲೆಯ೦ ಕುರಿತು ಬರದಿರುವು ದಕ್ಕೆ ನಿಮಿತ್ತವೇನಿರುವುದೋ ತಿಳಿಯೆನು ? ಆದರೆ ದೇವಿಯು ಅವಳಲ್ಲಿ ವಿಶೇಷ ವಾದ ಅನುರಾಗಯುಕ್ತಳಾಗಿರುವುದರಿಂದ ಈ ರಾತ್ರಿಯಲ್ಲಿ ತಾನಿರುವ ಮಣಿ ಹಜಾ ರದಲ್ಲಿರುವಂತೆ ಅಪ್ಪಣೆಯನ್ನಿತ್ತಿರಬಹುದು,” ಎಂದು ಯೋಚಿಸುತ್ತಿದ್ದಳು. ಎಂಬಲ್ಲಿಗೆ # ಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾರವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ಕೃಷ್ಣರಾಜ ಸೂಕ್ತಿ ಮುಕ್ತಾವಳಿಯೆಂಬ ಗ್ರಂಥದೊ? - ವತ್ಸ ರಾಜನ ಕಥೆಯಲ್ಲಿ ಸತ್ತನೆಯ ಗುಚ್ಛಂ ಸಂಪೂರ್ಣವು. --3 ಹನ್ನೊಂದನೆಯ ಗುಚ್ಛ೦. ಭ ಅನಂತರದಲ್ಲಿ ಸಾಗರಿಕೆಯು ಬಹುಕಾಲವು ಆ ಕಮಲ ಸರೋವರದ ಸ್ಪಟಿಕ ಸೋಪಾನದಲ್ಲಿದ್ದು ಮರ್ಳೆಯಿಂದ ಮಲಗಿದ್ದು, ಬೆಳಗಿನ ಜಾವದ ತಂಗಾಳಿಯ ಸೋಂಕಿನಿಂದ ಅ೦ಗಗಳೆಲ್ಲವೂ ತಣುವೇರಿ, ತನ್ನ ಮೂರ್ಛಿಯಂ ತಾನೆ ತಿಳಿದುಕೊ೦ ಡು, (ಕಾಂಚನಮಾಲೆ ಮೊದಲಾದ ವಾಸವದತ್ತಾ ದೇವಿಯ ಸೇವಕರು ಯಾರು ಎನ್ನ ಕಂಡಿದ್ದರೂ ನಾನು ಇನ್ನು ಏನೇನು ಅವಸ್ಸಯಂ ಪೊಂದಬೇಕಾಗಿರುವುದೋ ? ದುಷ್ಟನಾದ ಮನ್ಮಥನ ಪೂಜೆಯಂ ನೋಡುವುದಕ್ಕೆ ನಾನು ಬರಲಾಗಿ ಈ ಅವಸ್ಥೆಗೆ ಪಾತ್ರಳಾದೆನು ?” ಎಂದು, ಮನ್ಮಥನಂ ಕುರಿತು ಎಲೈ ಪೂಜ್ಯನಾದ, ಲಕ್ಷ್ಮಿ ಪುತ್ರನಾದ ಮನ್ಮಥನೇ, ಕೇಳು, ನಿನ್ನ ಪಾದ ಪೂಜೆಯಂ ಗೆಯು ನಿನ್ನ ಉತ್ಸವದಲ್ಲಿ ನೇತ್ರಾನಂದವನ್ನು ಅನುಭವಿಸಿ ಇಷ್ಟಾರ್ಥವನ್ನು ಹೊಂದಬೇಕೆಂದು ಬಂದ ಈ ಬಾಲೆಯನ್ನು ಬಾಧಿಸುವುದು ನ್ಯಾಯವೇ ಪೇಳು. ಆದರೆ ಅಜ್ಞಾನದಿಂದ ಈ ವಾಕ್ಯ ವನ್ನು ನುಡಿದೆನು, ಮನಸ್ಸಿನಿಂದಲೇ ಪುಟ್ಟ ಆ ಮನಸ್ಸಿಗೆ ವ್ಯಥೆಯನ್ನುಂಟುಮ ಡುವ ಪಾಪಿಗೆ ಉತ್ಸವಕ್ಕೆ ಬಂದ ಎನ್ನಲ್ಲಿ ದಯೆಯು ಹೇಗೆ ಇದ್ದೀತು ! ಎಲೆ ಮಾರನೇ, ಕ್ರೂರವಾದ ಪಿಶಾಚದಂತೆ ಅ೦ಗವಿಲ್ಲದೆ ಅಂಗನೆಯರನ್ನು ಭಂಗಕ್ಕೆ ಭಾಜನರಂ ಮಾಡುತ್ತಿರುವ ನಿನ್ನ ವೀರತ್ವವನ್ನು ಪರಮೇಶ್ವರನ ಫಾಲನೇತ್ರದ ಜ್ವಾಲೆಯೇ ಹೇಳುತ್ತಿರುವುದು, ದುಷನಿಗ್ರಹಶಾಲಿಯಾದ ಈಶ್ವರನು ಇದಿರಾಂತಿ