ಪುಟ:ವತ್ಸರಾಜನ ಕಥೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಷಿ - ಕರ್ಣಾಟಕ ಕಾವ್ಯಕಲಾನಿಧಿ, - ನಿನ್ನ ನ್ನು ಉರಿಗಣ್ಣಿನಿಂದ ಉರುಹಿದರೂ ಕರುಣಾಶಾಲಿಯಾಗಿ ನಿನ್ನ ತರುಣಿಯಾದ ರತೀದೇವಿಯ ಪ್ರಲಾಪವಂ ಕೇಳಲಾರದೆ ಅನ೦ಗತ್ವವನ್ನು ಕೊಟ್ಟು ದರಿಂದಲೇ ( ಪಶುಪತಿ ' ಎಂಬ ಶಬ್ದಕ ಪಾತ್ರನಾದನು. ಎಲೈ, ತೃಣಪ್ರಾಯನಾದ ಮನ್ನ ಥನೇ, ಕೇಳು. ಬಾಲರುಗಳಿ೦ದ ಸೀಳುವುದಕ್ಕೆ ಯೋಗ್ಯವಾದ ಕಬ್ಬು ಬಿಲ್ಲನ್ನೂ, ನಮ್ಮಂಥ ನಾರಿಯರು ಕೇಶದಿಂದ ಕಟ್ಟಿದರೆ ಕಂದುತ್ತಿರುವ ಪೂಸರಳುಗಳನ್ನೂ, ಮದ್ಯ ಪಾಯಿಗಳಾದ ತುಂಬಿಗಳ ನಾರಿಯನ್ನೂ ಸಹ ಧರಿಸಿ, ಶಬ್ದ ವಂ ಕೇಳಿದ ಮಾತ್ರ ದಿಂದಲೇ ಏಳು ಗಾವುದಕ್ಕೆ ಹಾರುತ್ತಿರುವ ಶುಕ ಪಿಕ ಮಯೂರ ಮೊದಲಾದ ಪತ್ನಿ ಗಳ ಸೇನೆಯ೦ ಜತೆಗೊಂಡು, ತಮ್ಮ ನೆರಳಿಗೆ ತಾವೇ ಬೆಚ್ಚ ತ ಭೀರುಗಳಾದ ನಾರಿ ಯರನ್ನು ಬೆದರಿಸುತ್ತ, ಮೂರುಲೋಕದಲ್ಲಿ ವೀರನೆಂಬ ಹುಲ್ಲುಬಿರುದಂ ಸಂಪಾದಿ ಸಿರುವೆಯಲ್ಲದೆ ಸಹಜವಾಗಿ ಶರನೇ ನೀನಾದಲ್ಲಿ ಆ ಪುರಾರಿಯಾದ ಪರಶಿವನ ಮುಂದೆ ಯಾವ ಊರಿಗೆ ಒಕ್ಕಲು ಹೋಗಿ ಇದ್ದೆ ಪೇಳು. ಇದ್ದವರ ಮಾತುಗಳಂ ತಿರಲಿ. ತಾಯಿಯಾದ ಲಕ್ಷ್ಮೀದೇವಿಯಂ ಬಾಧಿಸಿ ಗಂಡನ ಎದೆಯಂ ಸೇರಿಸದ ಮಾತೃದ್ರೋಹಿಯಾದ ನಿನ್ನ ನ್ನು ಪುಣ್ಯ ಸ್ಥಳವಾದ ವನಮಧ್ಯದಲ್ಲಿ ಸ್ಮರಿಸಿದುದರಿಂದ ಪುಟ್ಟ ದ ಪಾಪವನ್ನು ನಾನು ಎಲ್ಲಿ ಹೋಗಿ ಪರಿಹರಿಸಲೆಂದು ಯೋಚಿಸುತ್ತಲಿರುವೆನು. ಮತ್ತು ಮಾತೃದ್ರೋಹಿಯಾದ ನಿನ್ನ ನ್ಯೂ, ಸ್ವರ್ಣಸೈಯಕೆ ಮುಖ್ಯಾಶ್ರಯನಾಗಿ ಸಮುದ್ರದಿಂದ ಪುಟ್ಟಿ ಒ )ಹ್ಮಹತ್ಯಾ ಬಾದರನಾದ ಪರಶಿವನ ಸಂಗವಂ ಪಡೆದ ಗುರುದ್ರೋಹಿಯಾದ ಚಂದ್ರನನ್ನೂ , ಮಧುಪಾಯಿಗಳ ಅಭಿವೃದ್ಧಿಗೆ ಕಾರಣನಾದ ವಸಂತನನ್ನೂ ಸಹ ಸಹಾಯವಾಗಿ ವಿರಚಿಸಿರುವ ದೈವದ ಜಾಣತನವಂ ಆಲೋಚಿಸಿದಲ್ಲಿ ಈ ಮಹಾಪಾತಕಿಗಳನ್ನು ಹೇಗೆ ಜತೆಗೂಡಿಸಿದನೆಂದು ಅಧಿಕ ವಾದ ಆಶ್ವರವು ತೋರುತ್ತಲಿರುತ್ತಿರುವುದು, ಪ್ರಾಣಿಹಿಂಸೆಗಳನ್ನು ಗೆಯ್ಯುವುದು ಮಹಾ ಪಾಪವೆಂದು ಹೇಳುವ ಶಾಸ್ವಾರ್ಥವನ್ನು ಆಲೋಚನೆಯಂ ಗೆಯ್ಯದೆ ಪಾಮ ರನಂತೆ ಜಗತ್ತನ್ನು ಬಿದಿರಿನಿಂ ಪಶ್ಚಿದ ಬೆಂಕಿಯು ವನವೆಲ್ಲವಂ ದಹಿಸುವಂತೆ ದಹಿಸಿ, ವಿಷ್ಣುವಿನ ದೆಸೆಯಿಂ ಪುಷ್ಟಿ ಅವನ ವಂಶಕ್ಕೆ ಮೃತ್ಯು ರೂಪವಾದ ಅಪಕೀರ್ತಿಯಂ ಸಂಪಾದಿಸುವುದಕ್ಕೆ ಮೂಲಪುರುಷನಾಗಿರುವೆ ? ನಿನ್ನ೦ತೆ, ಹುಟ್ಟಿದ ಮನೆಗೆ ಬೆಂಕಿ ಯನ್ನಿ ಕ್ಯುವ ಕೆಟ್ಟ ಮನುಜನು ಮೂರು ಲೋಕದಲ್ಲಿ ಪುಟ್ಟುವನೆ ಪೇಳು ” ಎಂದು ಮನಬಂದಂತೆ ಮಾರನಂ ನಿಂದಿಸುತ್ತಿರಲು ; ಅಷ್ಟರಲ್ಲೇ ಚಂದ್ರನು ಗುರುಪಗಮನದಿಂದ ತೇಜೋಹೀನನಾಗಿ ಸಮು ದ್ರ ಸ್ಥಾನಕ್ಕೆ ಪೋಗುವನೋ ಎಂಬಂತೆ, ರಾತ್ರಿಯೆಲ್ಲವೂ ಗಗನಲಕ್ಷ್ಮಿಯ ಸಂಗಮ ದಲ್ಲಿ ಜಾಗರಣೆಯಂ ಗೆಯ್ದು ಪಶ್ಚಿಮದಿಕ್ಕೆಂಬ ಕೇಳೀಗೃಹದಲ್ಲಿ ಶಯನವಂ ಗೆಯ್ಯ ಲೋಸುಗ ಪೋಗುವನೋ ಎಂಬಂತೆ, ನಕ್ಷತ್ರಗಳೆಂಬ ಗರಿಗಳೆಲ್ಲವೂ ಗಳಿತವಾಗಿ ಪೋಗಲು ಗಗನದಲ್ಲಿ ಹಾರಲಾರದೆ ವಾರಿನಿಧಿಯಲ್ಲಿ ಬೀಳುವ ಹಂಸವೋ ಎಂ