ಪುಟ:ವತ್ಸರಾಜನ ಕಥೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವತ್ಸರಾಜನ ಕಥೆ, - ೬೭ ಬಂತೆ, ಪ್ರೀತಿಕರರಾದ ತಾರಾನಾರಿಯರು ಕನ್ನೈದಿಲೆಯ ಲತೆಗಳೆಂಬ ತಾರನಾರಿ ಯರೂ ಸಹ ಕಾಂತಿಹೀನರಾಗಿ ನಮ್ಮವಂ ಪೊಂದಿದರೆ೦ಬ ಚಿ೦ತೆಯಿಂದ ಸಮುದ್ರ ಪ್ರವೇಶವಂ ಮಾಡುವುದಕ್ಕೆ ಪೋಗುವನೋ ಎಂಬಂತೆ, ಕಾಲನೆ೦ಬ ಸಿದ್ದ ಪುರು ಷನು ಪಶ್ಚಿಮಗಿರಿಯಲ್ಲಿರುವ ಮಲಿಕೆಯ ಸಂಗಮಂ ಪೊಂದಿಸಲೋಸುಗ ಇರಿ ಸಿದ ಪಾದರಸದ ಉಂಡೆಯೋ ಎಂಬಂತೆ, ಚರಮಗಿರಿಯ ಶಿಖರಮಂ ಮರೆಗೊಳ್ಳು ತಿರಲು ; - ಅಲ್ಲಲ್ಲಿರುವ ಹರಿಹರ ಮುಂತಾದ ದೇವಸ್ಥಾನಗಳಲ್ಲಿ ಬಹಳವಾದ ಕಹಳಾ ಭೇರೀ ಶಂಖಧ್ವನಿಗಳು ಪ್ರಾತಃಕಾಲವಾದುದೆಂಬ ಸೂಚನೆಯನ್ನು ದಿಕ್ಕಾಂತೆಯರಿಗೆ ಪೇಳುತ್ತಿರಲು ; ಪುಣ್ಯ ಸ್ಥಳಗಳಲ್ಲಿರುವ ಪುಣ್ಯಾತ್ಮರುಗಳೂ ಸ್ನಾ ನಾರ್ಥವಾಗಿ ಎದ್ದು ದೇವತಾ ನಾಮಾಂಕಿತವಾದ ಉದಯರಾಗಗಳಂ ಪೇಳುತ್ತ ನದೀತಟಾಕ ಸರೋವರ ಜಲಾಶ ಯಂಗಳಂ ಸೇರುತ್ತಿರಲು ; ಪ್ರತಿವ ತಾ ಸಿಯರುಗಳು ಪತಿಯ ಪಕ್ಷದಿಂದೆದು ಅಂಗಗಳು ಸೋಂಕಿದ ಅಪರಾಧಗಳಂ ಕ್ಷಮಿಸೆಂದು ಅವನ ಚರಣಯುಗಳಿಗೆ ನಮಸ್ಕಾರವಂ ಗೆಯ್ದು ಅತ್ತೆ ಮಾವಂದಿರುಗಳ ಪಾದಪದ್ಮಗಳಿಗೆ ವಂದನೆಯಂ ಗೆಯ್ಯು ಇಷ್ಟ ದೇವತಾ ನಾಮಾಂಕಿತವಾದ ಉದಯರಾಗಗಳ ಮನದಲ್ಲಿ ನೆನೆಯು ತ್ಯಗಳಲ್ಲಿ ಸನ್ನದ್ಧರಾಗುತ್ತಿರಲು ; ವೃಕ ಗೃಹ ಮೊದಲಾದ ಸ್ಥಾನಂಗಳಲ್ಲಿರುವ ನಕ್ಷಿಗಳು ಗೂಡುಗಳಿಂದ ಕತ್ತುಗಳ೦ ನೀಡಿ ಅರುಣನ ಕಿರಣಗಳಿಂದ ಕ೦ಪುದೋರುವ ದಿಕ್ಕುಗಳ೦ ನೋಡಿ ಸಂತೋಷದಿಂಕೂಡಿ ಸಂಚರಿಸುವ ಯತ್ನ ವಂ ಮಾಡುತ್ತಿರಲು ; ಅಷ್ಟರಲ್ಲೇ ಪೂರ್ವಸಮುದ್ರದಲ್ಲಿ ಬಡಬಾಗ್ನಿ ಜ್ವಾಲೆಯು ದೇವಗಂಗೆಯಂ ಪೀರಲೋಸುಗ ಎದ್ದು ಬರುವುದೋ ಎಂಬಂತೆ ತೋರುತ್ತಲಿರುವ ಅರಣನ ಕಾಂತಿ ಯು ಜಗತ್ತೆಲ್ಲವನ್ನೂ ಹಬ್ಬುತ್ತಿರಲು ; ಸಮಸ್ತ ಜನರುಗಳ ನೇತ್ರಗಳಿಗೆ ಭಾಗ್ಯಸ್ವರೂಪವೋ ಎಂಬಂತೆ, ಮೂರ್ತೀ ಭವಿಸಿರುವ ಇಂದ್ರನ ಪ್ರತಾಪವೋ ಎಂಬಂತೆ, ಪೂರ್ವದಿಗಂಗನೆಯು ಧರಿಸಿರುವ ಕುರವಿಂದಮಣಿಮಯವಾದ ರಾಗಟಯೋ ಎಂಬಂತೆ, ದಿಕ್ಕಾಂತೆಯರು ಪಕ್ಷಿಗಳ ಕಲಕಲಧ್ವನಿಗಳೆ೦ಬ ಅಲಾಸವಂ ಗೆಯ್ಯುತ್ಯ ದಿಕ್ಕರಣಗಳೆ೦ಬ ಹಗ್ಗಗಳಿ೦ ಪಿಡಿದು ಸಮುದ್ರದಿಂದ ಜಲವಂ ತುಂಬಿ ಎಳೆಯುತ್ತಿರುವ ಪದ್ಮರಾಗದ ಬಿಂದಿಗೆಯೋ ಎಂಬಂತೆ, ಈ ಕಸಮೂಹಕ್ಕೆ ಉಾಚಕವೋ ಎಂಬಂತೆ, ಸಮಸ್ಯೆ ಕರ್ಮಗ ಳಿಗೂ ಸಾಕ್ಷಿಯಾದ ಸೂರನು ಉದಯಗಿರಿಶಿಖರವನ್ನು ಅಲಂಕರಿಸಲು ; ಮನ್ಮಥನಂ ದೂಷಿಸುತ್ತಿ ರುವ ಗರಿಕೆಯು ದಿಕ್ಕುದಿಕ್ಕುಗಳಲ್ಲಿರುವ ಕತ್ರ