ಪುಟ:ವತ್ಸರಾಜನ ಕಥೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, .. vo ಕಣ್ಣೀರುಗಳಂ ಬಿಡುತ್ತ ಮೊಗವನ್ನೆ ನೋಡಿ ಸುಸಂಗತೆಯುಂ ಕಂಡು ಲಜ್ಜಿಯಂ ತಾಳಿ, ಆ ಚಿತ್ರಪಟವನ್ನು ತನ್ನ ಸೀರೆಯ ಸೆರಗಿನಿಂನ ಮುತ್ತು ತಿರಲು ; ಸುಸಂಗ ತೆಯು,-ಇವಳು ಎನ್ನ೦ ಕ೦ಡು ನಾಚಿಕೆಯಿಂದ ಚಿತ್ರಪಟವ ಮುಚ್ಚುತ್ತಿರುವಳು. ಆದರೂ ಇವಳನ್ನು ಮಾತನಾಡಿಸಿ ತಿಳಿಯುವೆನು ?” – ಎಂದು ಯೋಚಿಸಿ, ( ಎಲೆ ಮಿತಳಾದ ಸಾಗರಿಕೆಯೇ, ಈ ಚಿತ್ರ ನಟರಲ್ಲಿ ಯಾವ ಪುರುಷನಂ ಬರೆದಿರುವೆ ? ಎನ್ನೊಡನೆ ನಾಚಿಕೆಯಂ ಬಿಟ್ಟು ಹೇಳುವಳಾಗು ?” ಎನಲು; ಅವಳು- ಎಲೆ ಸುಸಂ ಗತೆಯೆ, ಈ ಮಹೋತ್ಸವಕ್ಕೆ ಒಡೆಯನಾದ ಮನ್ಮಥನಂ ಬರೆದಿರುವೆನು ?” ಎಂದು ನುಡಿಯಲು; ಸುಸಂಗತೆಯು - ಎಲೆ ಸವಿಯ, ನಿನ್ನ ಜಾಣತನವ ಆಶ್ರಕರವಾ ಗಿರುವುದು ” ಎಂದು ನಸುನಗುತ್ತ ನುಡಿದು, : ಆದರೂ ಈಗ ನೀನು ಬರೆದಿರುವ ಚಿತ್ರವು ಸ್ವಲ್ಪ ಭಾವದಿಂದ ಕಡ ಮ೦ಾಗಿರುವರು. ನಾನು ಮನ್ಮಧನೊಡನೆ ರತಿ ಯನೊಡನೆ ಕೂಡಿ ಸುವೆನು. ” ಎಂದು ಬಲಾತ್ಕಾರದಿಂದ ಆ ಚಿತ್ರವಚನಂ ತೆಗೆದು ಕೊಂಡು ಬರೆಯುತ್ತಿರಲು ; ಸಾಗರಿಕೆಯು ಅವಳು ಬರೆಯುವ ಚಿತ್ರವಂ ನೋಡಿ,- ಎಲೆ ಸುಸಂಗ ತೆಯೇ, ಏನು ನಿಮಿತ್ತವಾಗಿ ಎನ್ನನ್ನು ಈ ಚಿತ್ರನಟದಲ್ಲಿ ಬರೆಯುತ್ತಿರುವೆ ? ” ಎಂದು ಸ್ವಲ್ಪವಾಗಿ ಕೋಪವಂ ತಾಳಿ, ಹುಬ್ಬುಗಳ೦ ಗಂಟಿಕ್ಕುತಿರಲು ; ಸುಸಂಗತೆಯು, • ಲೆ ಸಾಗು ಕೆಯೇ, ಬರಿಗೆ ನನ್ನ ಮೇಲೆ ಕೋಪವಂ ತಾಳುತ್ತಲಿರುವೆ ? ನೀನು ಯಾವ ತೆರದ ಮನ್ಮಧನಂ ಬರೆದಿರುವ ಎಲ್ಲ ದೇರೀತಿಯಾಗ ರತಿಯನ್ನು ಬರೆದಿರು ವೆನು. ಎಲೆ ಲಜ್ಞಾಶಾಲಿಯಾದ ಹಾಗು ಕೆಯೇ ಎನ್ನನ್ನು ನಿನಗೆ ಆಗದವಳನ್ನಾಗಿ ತಿಳಿದು ಏತಕೆ ಒರಿಗೆ ವ್ಯಥೆಯನ್ನು ಹೊ೦ದುತ್ತಲಿರುವೆ? ನಡೆದ ಕಾಧ್ಯವನ್ನು ಯಧಾ ಗ್ರವಾಗಿ ಹೇಳಿದ್ದಲ್ಲಿ ಅದಕ್ಕೆ ತಕ್ಕ ಪ್ರಯತ್ನವನ್ನು ಮಾಡಬಹುದು. ರೋಗನಿದಾ ನನಂ ತಿಳಿಯದೆ ಔಷಧವನ್ನು ಕೊದ ತಕ್ಕ ರೀತಿಯು ಹೇಗೆ? ನಿನ್ನ ಮನದಲ್ಲಿ ಪುಟ್ಟಿದ ಸಂತಾವಕೆ ಕಾರಣವನ್ನು ಸೆಳಗೆ ವ್ಯರ್ಥವಾಗಿ ತಪಿಸುತ್ತಲಿದ್ದಲ್ಲಿ ನಿನ್ನ ಮನೋಗತವಾದ ಕಾರ್ಯಸಿದ್ಧಿಯು ಹೇಗೆ ಉಂಟಾಗುವುದು ? ನಿನಗೆ ನಾನು ಯ ಥಾರ್ಥವಾಗಿ ಅಸ್ತಳಾಗಿದ್ದಲ್ಲಿ ವಂಚಿಸದೆ ವೀಳುವಳಾಗು ” ಎಂದು ನುಡಿಯಲು: ಸಾಗರಿಕೆಯು ಕಣ್ಣೀರುಗಳಂ ಬಿಡುತ್ತ, ಎಲೆ ಕಾಂತೆಯೇ, ನಿನ್ನ ನ್ನು ನನಗೆ ಪ್ರಾಣಾ ಪ್ರಳನ್ನಾಗಿ ತಿಳಿದಿದ್ದರೂ ಎನ್ನ ಮನವು ನಾಕೆಯಿಂದ ಒಡಗೂಡಿರುವುದು, ನಾನು ಪೇಳಿದ ಕಾರ್ಯವನ್ನು ಯಾರೊಡನೆಯ ವೇಳುವುದಿಲ್ಲವೆಂದು ನಂಬುಗೆಯನಿತ್ತರೆ ಎಲ್ಲಾ ಮಾತುಗಳನ್ನು ಸೊಲ್ಲಿಸುವೆನು ” ಎಂದು ನುಡಿಯಲು ; ಅವಳು ಎಲೆ ಮುಗ್ಡೆಯೆ, ನಿನಗಿಂತಲೂ ಇನ್ನೊಬ್ಬಳು ಪ್ರಾಣಾಪ್ತಳೂ ಇಲ್ಲ. ಮಿತ್ರದ್ರೋಹ ದ್ರವ್ಯದ್ರೋಹ ಸ್ವಾಮಿದ್ರೋಹವನ್ನು ಮಾಡಿದವರನ್ನು ಭೂಮಿಯು ಹೊರಲಾ ರಳು. ನಂಬಿದಂಥ ನಿನಗೆ ದ್ರೋಹವಂ ಗೆಯು ಯಾವ ನರಕಕ್ಕೆ ಪಾತ್ರಳಾಗು ||