ಪುಟ:ವತ್ಸರಾಜನ ಕಥೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನ ಕಥೆ, -

ಯಾವ ಪುರುಷನಾಗಲಿ ಸ್ತ್ರೀಯಾಗಲಿ ತನ್ನ ಶರೀರವಿರುವವರೆಗೂ ಸಂಪತ್ತನ್ನೆ ಪ್ರಾರ್ಥಿಸುತ್ತ ಆ ಸಂಪತ್ತು ನನಗೆ ಹೇಗೆ ದೊರಕೀತೆಂಬ ಸಂದೇಹವಂ ಬಿಟ್ಟು ಕಾರ್ಯಗಳಂ ನಡೆಸಬೇಕೆಂತಲೂ, ಒಂದಾನೊಂದು ವೇಳೆಯಲ್ಲಿ ಪೂರ್ವಾರ್ಜಿತ ವಾದ ಕರ್ಮಶೇಷದಿಂದ ಯಾವುದಾದರೂ ಒಂದು ವಿಪತ್ತು ಬಂದಲ್ಲಿ : ಈ ವಿಪತ್ತು ಗಳನ್ನು ಅನುಭವಿಸಲಾರೆನು; ಈ ದೇಹವಾದರೂ ಹೋಗಬಾರದೇ ' ಎಂದು ತನ್ನ ಶರೀರವನ್ನು ನಿಂದಿಸಬಾರದೆಂತಲೂ ಧರ್ಮಶಾಸ್ತ್ರವು ಹೇಳುತ್ತಿರುವುದು, ಅದ೦ತಿ ರಲಿ, ಸೀತಾದೇವಿಗೆ ಬಂದ ಕಷ್ಟವನ್ನೂ , ಬ್ರೌಪದಿಯ ವಿರಾಟರಾಯನ ಮನೆ ಯಲ್ಲಿ ಮಾಡಿದ ಗೌಡಿತನವನ್ನೂ, ಕೀಚಕನಿಂದ ಪಟ್ಟ ಪಾಡುಗಳನ್ನೂ, ಆಬಳಿಕ ಉಂಟಾದ ಸೌಖ್ಯದ ವಾರ್ತೆಯನ್ನೂ ಸಹ ಕೇಳಿರುವ ನಿನಗೆ ವಿಶೇಷವಾಗಿ ನಾನು ಪೇಳತಕ್ಕುದೇನು ? ಪ್ರಾಣಿಗಳಿಗೆ ಪ್ರಾರ್ಥಿಸುವುದಕ್ಕೆ ಯೋಗ್ಯವಲ್ಲದೆ ಇರುವ ದುಃಖಗಳೂ ಒಲ್ಲೆ ಒಲ್ಲೆನೆಂದರೂ ನಿಲ್ಲದೆ ಹೇಗೆ ಬರುತ್ತಲಿರುವುವೋ, ಆರೀತಿಯಿಂದ ಸುಖಗಳೂ ಪ್ರಾಪ್ತವಾಗುತ್ತಲಿರುವವು ಬ್ರಹ್ಮನು ಪ್ರಾಣಿಗಳ ಹಣೆಯಲ್ಲಿ ಏನು ಬರೆದಿರುವನೋ ಆ ಫಲವು ಮೇರುಪರ್ವತದ ಮೇಲಗ್ಟರೂ ಅಧಿಕವಾಗಿ ಒರಲಾ ರದು. ಇದಕ್ಕೆ ದೃಷ್ಟಾಂತವನ್ನು ಹೇಳುವೆನು ಕೇಳು. ಒಂದೇ ಗಡಿಗೆಯನ್ನೂ ಭಾವಿಯಲ್ಲಿ ಮುಳುಗಿಸಿದರೂ ಸಮುದ್ರದಲ್ಲಿ ಮುಳುಗಿಸಿದರೂ ಸರಿಯಾಗಿ ತುಂಬಿ ಬರುವುದಲ್ಲದೆ ಹೆತ್ತಾಗಿ ಹೇಗೆ ನೀರು ಬರಲಾರದೆ ಆ ರೀತಿಯಿಂದ ನಾವು ಮಾಡಿ ದ ಕರ್ಮಕೆ ಅನುಗುಣವಾಗಿ ಬ್ರಹ್ಮನು ಹಣೆಯಲ್ಲಿ ಬರೆಯುತ್ತಲಿರುವನು. ಅದೇ ರೀತಿಯಿಂದ ಹೆಚ್ಚು ಕಡಮೆಗಳಿಲ್ಲದೆ ಸುಖದುಃಖಗೂನವಾದ ಫಲಗಳು ಕೈ ಸೇರುತ ಲಿರುವುವು. ಎಲೆ ಕಲ್ಯಾಣಿಯೇ, ನೀನು ರಾಯನನ್ನು ನೋಡದಂತೆಯೂ ರಾಯನು ನಿನ್ನನ್ನು ನೋಡದಂತೆಯ ವಾಸವದತ್ತಾ ದೇವಿಯು ನಿರ್ಬಂಧವಂ ಗೆದ್ದರೂ ದೈ ವಯೋಗದಿಂದ ನಿನಗೆ ಹೇಗೆ ರಾಯನ ಸಂದರ್ಶನವುಂಟಾಯಿತೋ, ಹಾಗೆಯೇ ಮುಂದೆಯೂ ಅವನೊಡನೆ ಸಂಗಮವುಂಟಾಗುತ್ತಿರುವುದು, ಹುಟ್ಟಿದ್ದು ಮೊದಲಾಗಿ ಮರಣವಾಗುವವರೆಗೂ ಯಾವವನು ಸುಖವನ್ನೆ ಅನುಭಸುತ್ತಿರುವನು, ಯಾವವ ನು ಕಷ್ಟವನ್ನೇ ಅನುಭವಿಸುವನು ? ಸುಖದುಃಖಗಳು ರಥದ ಗಾಲಿಯ ಅಂಚಿನಲ್ಲಿ ಹತ್ತಿಸಿದ ಸುಣ್ಣದ ಬೊಟ್ಟಿನಂತೆ ಸುತ್ತುತ್ತಲಿರುವುದಲ್ಲದೆ ಒಂದುಕಡೆ ಶಾಶ್ವತವಾಗಿ ನಿಲ್ಲಲಾರವು, ಇದನ್ನು ತಿಳಿದಂಥ ನಿನ್ನ ೦ಥ ಬುದ್ದಿವಂತರಾದವರು ಸುಖದುಃಖಗ ಇನ್ನೂ ಮನವನ್ನೂ ಬಿಗಿಗೆಯು ಎಲ್ಲವೂ ಈಶ್ವ ರಾಧೀನವೆಂದು ನಿಶ್ಚಯಿಸಿರುವರಲ್ಲದೆ ಕಷ್ಟದಲ್ಲಿ ಕೊರಗುತ್ತ ಸುಖದಲ್ಲಿ ಕೊಬ್ಬುತ್ತ ನಡೆಯಲಾರರು. ಎಲೆ ಮಂಗಳಾ೦ ಗಿಯೇ, ನಿನ್ನನ್ನು ನೋಡಿದಲ್ಲಿ, ಮಹಾಸದ್ವ೦ಶದಲ್ಲಿ ಹುಟ್ಟಿದವಳನ್ನಾಗಿಯೂ ಬಹು ಭಾಗ್ಯವಂತನ ಮಗಳನ್ನಾಗಿಯೂ ತಿಳಿಯುತ್ತಲಿರುವೆನು. “ಆದುದರಿಂದ ಈಗ ಎನ್ನ ನ್ಯೂ ನಿನ್ನ ಸಹೋದರಿಯನ್ನಾಗಿ ತಿಳಿದು ಸ್ವಲ್ಪವಾದರೂ ವಂಚನೆಯಂ ಗೆಯ್ಯದೆ