ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ ತ ವಿ ಶ್ರೀವಿಜಿ ಯ ನಾ ಟ ಕ ೦, vF ತುಂಬಿ ತಿರುಗುವದೂ ಉಂಟೆ! (ಪತಿಯನ್ನು ನೋಡಿ) ಪ್ರಿಯನೆ, ಈತನು ಸತ್ತಿರುವುದೇನು ? ಕನವನ್ನು ಹೊತ್ತುಕೊಂಡು ಹೀಗೆ ಬಂದಿರುವುದೇನು ? ಈತನಾರು ? ವಸಂತಮಿತ್ರ, ಪ್ರಿಯೆ, ಈತನು ನನ್ನ ಪರಮ ಮಿತ್ರನು. ಕಾರ ಣಾಂತರದಿಂದ ಈತನಿಗೆ ದುರರಣ ಪ್ರಾಪ್ತವಾಗಿರುವುದರಿಂದ, ಶವ ವನ್ನು ಗಂಗಾತೀರಕ್ಕೆ ತೆಗೆದುಕೊಂಡುಹೋಗಿ, ಉತ್ತರಕ್ರಿಯಾದಿಗ ಳನ್ನು ಮಾಡುವುದಕ್ಕೆ ಹೊತ್ತುಕೊಂಡು ಬಂದಿರುವೆನು. ನೀನು ಆ ಸ್ಮಶಾನದಲ್ಲಿ ಬಂದಿದ್ದಾಗ್ಗೆ ನಿನಗೆ ದೇವಿಯು ಪ್ರತ್ಯಕ್ಷವಾದುದನ್ನು ನೋಡಿ, ನಿನ್ನನ್ನು ಮದುವೆಯಾಗಲು ನಾನು ಒಪ್ಪಿಬಂದೆನು. ಈ ನನ್ನ ಮಿತ್ರನನ್ನು ಬದುಕಿಸಿಕೊಡುವುದಾಗಿದ್ದರೆ ನಿನ್ನೊಡನೆ ಸುಖದಿಂದಿರು ವೆನು. ಹಾಗಿಲ್ಲದಿದ್ದರೆ ಈಗಲೇ ಗಂಗಾತೀರಕ್ಕೆ ಹೋಗುವೆನು, ಶುಭಾಂಗಿ, ಪುನಃ ದಯಮಾಡಿಸುವುದಾವಾಗ ? ವಸಂತಮಿತ್ರ, ನೀನು ಪುರುಷರೂಪವನ್ನು ಹೊಂದಿದಾಗ, ಶುಭಾಂಗಿ, (ಸ್ವಗತಃ) ಈಗ ಏನುಮಾಡಲಿ ! ವರದಿಂದ ೪ಭಿಸಿದ ನನ್ನ ಪತಿಯು ದೇಶಾಂತರಕ್ಕೆ ಹೋಗುವನಂತೆ. ಈತನ ಸಂತೋ ಪ್ರಾರ್ಥವಾಗಿ ಈ ಸ್ನೇಹಿತನನ್ನು ಕಾಪಾಡೋಣವೆಂದರೆ, ದುರರಣ ವಾದವನೆಂದು ಹೇಳಿದುದರಿಂದ ಇವನನ್ನು ಎಬ್ಬಿಸಲು ಮನಸ್ಸು ಬಾ ರದು. ಉಭಯ ಸಂಕಟವಾಗಿದೆ. (ಪ್ರಕಾಶ) ಪ್ರಿಯನೆ, ಈ ನೀಚನ ಯೋಚನೆಯನ್ನೇ ಬಿಡು. ನೀನು ಮಾಡಿದ ಸಾಹಸವೂ, ಉಪಕಾರವೂ ಸತ್ಪುರಸ್ಕರಿಗೆ ಮಾಡಿದುದೇ ಆದರೆ ಲೋಕದಲ್ಲಿ ಖ್ಯಾತಿಯ, ಪರಲೋಕರಾಧನೆಯೂ ಉಂಟಾಗುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ. ವಸಂ : ಮಿತ್ರ, ನೀನು ಹೇಳುವುದು ಸಮ್ಮತವೇ ಸರಿ. ಆದರೆ ಮಿತ್ರನೆಂದು ಭಾವಿಸಿದುದಕ್ಕೆ ಆತನು ನನಗೆ ಎಷ್ಟು ತೊಂದರೆಯ ನ್ನುಂಟುಮಾಡಿದಾಗ್ಯೂ ಅವುಗಳನ್ನು ಲಕ್ಷಕ್ಕೆ ತರಲಾರೆನು, ಸತ್ತು ರುಷರು ತಮ್ಮ ಹಠವನ್ನು ಎಂದಿಗೂ ಪೂರೈಸದೆ ಬಿಡುವುದಿಲ್ಲ ವೆಂದು ತಿಳಿ, 12