ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೂರ್ವದ ನಾಟಕಗಳಾಗಲಿ, ಇತಿಹಾಸಗಳಾಗಲಿ ಸಾಧಾರಣವಾಗಿ ಆಯಾ ಕಾಲದ ಆಯಾ ದೇಶದ ಜನರ ನಡವಳಿ ಸ್ವಭಾವ, ವೇಷ ಮುಂತಾದವುಗ ಇನ್ನು ಆ ನಾಟಕಾದಿಗಳಲ್ಲಿ ತಿಳಿಸುವುದರಿಂದ ಓದುವವರಿಗೆ ನೋಡುವವರಿಗೆ ಬಹು ಪ್ರಯೋಜನವುಂಟಾಗುವುದೆಂಬ ಆಲೋಚನೆಯಿಂದ ಈ ವಸಂತಮಿತ್ರ ವಿಜಯವೆಂಬ ಹೆಸರುಳ್ಳ ರೂಪಕವು ರಚಿಸಲ್ಪಟ್ಟಿದೆ. ಇದರಲ್ಲಿ ನಾಯಕ ನಾದ ವಸಂತಮಿತ್ರನೆಂಬ ಮಂತ್ರಿ ಪುತ್ರನಲ್ಲಿ ರಾಜನಿಗೆ ಒಬ್ಬ ವೇಶೈಯ ಕಪ ಟದಿಂದ ದ್ವೇಷವುಂಟಾಗಿ ಲ ರಾಜನು, ಆ ದೇಶವನ್ನೇ ಬಿಟ್ಟು ಮತ್ತೊಂದು ದೇಶಕ್ಕೆ ಹೋಗಿ, ಆದೇಶದ ರಾಜನ ಮಗಳನ್ನು ವಿವಾಹಮಾಡಿಕೊಳ್ಳುವ ದಕ್ಕೆ ಪ್ರಯತ್ನಿಸಿರಲಾಗಿ, ವಸಂತಮಿತ್ರನು ತ್ರಿಕಾಲಜ್ಞನಾದ ಒಬ್ಬ ಮಹಾ ಪುರುಷನ ಮುಖದಿಂದ ತನ್ನ ರಾಜನಿಗೆ ಆನಂದವತಿಯೆಂಬ ರಾಜಪುತ್ರಿಯಿಂದ ಸಂಭವಿಸುವ ಹಾನಿಯನ್ನು ತಿಳಿದು ಅಲ್ಲಿಗೆ ಹೋಗಿ ಪ್ರಾಣಾಣ್ಣಿಗೆ ಗುರಿಯಾಗಿ, ಅದನ್ನು ತಪ್ಪಿಸಿಕೊಂಡು ಆ ರಾಜನ ಶವವನ್ನು ತೆಗೆದುಕೊಂಡು ಮತ್ತೊಂದು ದೇಶಕ್ಕೆ ಹೋಗಿ, ಕಾಳಿಕಾನುಗ್ರಹಕ್ಕೆ ಪಾತ್ರಳಾಗಿರುವ ಆದೇಶದ ಆಸನ ಮಗಳಾದ ಶುಭಾಂಗಿಯನ್ನು ತನ್ನ ರಾಜನಾದ ಸೌಗಂಧಿಕನನ್ನು ಬದುಕಿಸಿ ಕೊಳ್ಳುವ ಉದ್ದೇಶದಿಂದ ಮದುವೆಮಾಡಿಕೊಂಡನೆಂಬುವುದೇ ವಿಷಯವು. ಎಂಥಾ ಕಷ್ಟ ಬಂದರೂ ಸೈರಿಸಿಕೊಂಡು ಮಿತ್ರರನ್ನು ಕಾಪಾಡುವುದೆ: ಸನ್ನಿ ತರ ಲಕ್ಷಣವು ; ಮತ್ತು ಸ್ತ್ರೀಯರೇ ಹಾನಿಗೂ ವ್ಯದ್ಧಿಗೂ ಕಾರಇವೂ ; ಎಂಬ ಈ ಎರಡು ನೀತಿಗಳು ಈ ಗ್ರಂಥವನ್ನು ಓದುವವರಿಗೆ, ಅಧವ ಈ ಪ್ರಕರಣದ ನ್ನು ನೋಡುವವರ ಮನಸ್ಸಿನಲ್ಲಿ ನೆಲೆಗೊಳ್ಳುವುದು. ಇದೇ ಈ ಗ್ರಂಧಕ್ಕೆ ಮುಖ್ಯ ಪ್ರಯೋಜನವೆಂದು ನೆನಸಬೇಕು. ಈ ಪ್ರಕರಣದಲ್ಲಿ ವಾಕ್ಯಗಳು ಈ ಕಾಲದಲ್ಲಿ ವಾಡಿಕೆಯಾದ ಕನ್ನಡಮಾತಿನಿಂದಲೂ ಪದ್ಯಗಳು ಸಾಧಾರಣ ವಾದ ಹಳೆಗನ್ನಡಮಾತುಗಳಿ೦ದಲ೧ ರಚಿಸಲ್ಪಟ್ಟಿವೆಯಲ್ಲದೆ ಕವಿತಾಜಾಂಡಿ ತ್ಯವನ್ನು ತೋರಿಸಬೇಕೆಂದು ಗತ್ವದಿಂದ ಕ್ಲಿಷ್ಟವಾದ ಸಂಸ್ಕೃತ ಮಾತುಗ ಳನ್ನಾದರೂ ಅತಿದುರವಗಾಹವಾದ ಹಳೆಗನ್ನಡ ಮಾತುಗಳನ್ನಾದರೂ ಪ್ರ ಯೋಗಿಸಿಲ್ಲ. ನಾಟಕವನ್ನಾಡುವವರಿಗೆ ಅನುಕೂಲಿಸುವಂತೆ ಸಮಯಾನು ಸಾರವಾಗಿ ನೂತನವಾಗಿ ಶ್ರಾವ್ಯವಾಗಿಯೂ ಇರುವ ಮಟ್ಟಗಳು ಕೂಡ ಪ್ರತ್ಯೇಕವಾಗಿ ಸೇರಿಸಲ್ಪಟ್ಟಿವೆ. ಮುಖ್ಯವಾಗಿ ಈ ಕಾಲಕ್ಕೆ ಅನುಗುಣವಾಗಿ ಪ್ರಭಾವವನ್ನು ಅನುಸ ರಿಸಿ ಈ ಪ್ರಕರಣದ ಪ್ರಾರಂಭದಿಂದ ಅಂತ್ಯದವರೆಗೂ ಬರೆದಿರುವ ವಿಷಯಗ ಳನ್ನು ವಾಚಕರು ಚೆನ್ನಾಗಿ ಓದಿ ಗ್ರಹಿಸುವುದರಿಂದ ಅವರ ತಿಳುವಳಿಕೆಯು ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಮೈಸೂರು, ಪಿ. ಆರ್. ಕರಿಬಸವಶಾಸ್ತಿ. ೨೪-೨-೧೯೦೬, ೨ ಮಹಾರಾಜಾ ಕಾಲೇಜು ಕರ್ನಾಟಕ ಪಂಡಿತ.