ಪುಟ:ವಸಂತಮಿತ್ರ ವಿಜಯ ನಾಟಕಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಧ ಮಾ೦ ಕ ೦ . - ನಾಗಂಧಿಕ. ಸ್ತ್ರೀಯರಲ್ಲಿರುವುದೆಂದು ನನ್ನಿಂದ ಹೇಳಿಸಬೇ ಕೆಂದು ಕೇಳುವಹಾಗೆ ತೋರುತ್ತೆ. - ವಸಂತ್ರಮಿತ್ರ, ಸ್ತ್ರೀಯರಲ್ಲಿಯೇ ನೆಲೆಯಾಗಿರುವುದೆಂದು ಖಂಡಿತ ವಾಗಿಯೂ ಹೇಳು, ಸಂಶಯವೇಕೆ ? ಚಾರುಶೀಲೆ. ಏನುಮಾಡಲಿ. ಈ ನೀಚನು ರಾಜನಿಗೆ ದುರ್ಬೋ ಧನೆಯನ್ನು ಮಾಡುತ್ತಾ, ಹೆಂಗಸರನ್ನು ನಂಬಬಾರದೆಂದು ಹೇಳು ವುದಕ್ಕೆ ತಕ್ಕಷ್ಟು ಉದಾಹರಣೆಗಳನ್ನು ಕೊಡುತ್ತಿರುವನಲ್ಲದೆ, ನನಗೆ ಅವಕಾಶವನ್ನು ಕೊಡದೆ ಎಡೆ ಬಿಡದಿರುವನು. ಏನುಮಾದಲಿ, ಒಳ್ಳೇದು ಇನ್ನೂ ಮರೆಯಲ್ಲಿಯೇ ನಿಂತು ಕೇಳುವೆನು. ಸೌಗಂಧಿಕ. ಮಿತ್ರನೆ ? ಇಸ್ಟ ತಿಳಿವಳಿಕೆಯುಳ್ಳ ನೀನು ದುರು ಕಪಟಗಳಂದು ತಿಳಿದಿದ್ದರೂ ಮದುವೆಯಾಗಿರುವುದೇಕೆ ? ಚಾರುಶಿಲೆ. ಈ ನೀಲಕನು ಏನು ಉತ್ತರಕೊದುವ ಕೇಳು ನೆನು. ವಸಂ.ಮಿತ್ರ, ಗಂಡಸರಿಗೆ ದೆ೦ಗಸರು ಇರಬೇಕಾದುದು ಸಹಜ ವಲ್ಲವೇ ? ನಾಗಂಧಿಕ, ಅ೦ತವರ ಸಹವಾಸದಿಂದ ಕೆಡುವುದಿಲ್ಲವೋ ? ವಸಂತ್ರವಿತ್ರ ನಮಗಿರುವ ವಿವೇಕದಿಂದ ಸ್ವಲ್ಪವಾದರೂ ಸರಿ ಮಾಡಿಕೊಳ್ಳಬಹುದು. ಆದುದರಿಂದ ಸ್ತ್ರೀಯರನ್ನು ಸಂಪೂರ್ಣ ವಾಗಿ ನಂಬಬಾರದೆಂದು ಹೇಳಿದೆನಲ್ಲವೆ ? ಚಾರುಶೀಲೆ. ನಮ್ಮ ಮಹಾರಾಜನು ಸಕ್ಷಪಾತಿಯು, ಒಳ್ಳೇದು ಇವರಿಗೆ ಕಾಣಿಸುವಂತೆ ನಾನು ಈ ಪಾರ್ಶ್ವದಿಂದ ಆ ಪಾರ್ಶ್ವಕ್ಕೆ ಹೋಗುವೆನು. ಮುಂದೇನಾಗುವುದೊ ನೋಡುವೆನು. (ಎದುರ ಭಾಗಕ್ಕೆ ಹೋಗಿ ಮರೆಯಾಗಿ ನಿಲ್ಲುಳು.) ನಾಗಂಧಿಕ. ಸಚಿವನೆ, ಅತ್ತನೋಡಿದೆಯಾ ? ಕಂದ | ಮಲಯಾನಿಲನೀವರಿಯಿಂ ದಲಸದೆ ಬಗೆಬಗೆಯ ಕುಸುಮ ಗಳನರುಗಂಪಂ | ನಲವಿಂತುಂಬಿಸಿಡೀಕೊ ಮಲೆಯೆನಿಸಭರಣಿಯನೆನಗೆತಾಂ ಕಳುಹಿರ್ಪoli || ೧೬ ||