ಪುಟ:ವಸಂತಮಿತ್ರ ವಿಜಯ ನಾಟಕಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧y ಪ್ರ ಧ ಮಾ೦ ಕ ೦. ವನ್ನು ಚೆನ್ನಾಗಿಹಾಕಿರುವೆನು. (ವಸಂತಮಿತ್ರನ ಕಿವಿಯಲ್ಲಿ ಇದನ್ನು ಯಾರೊಡನೆಯೂ ಹೇಳಬೇಡ” ಎಂದು ಹೇಳಿದಳು, ) ವಸಂತಮಿತ್ರ, ಏನು ಹೇಳಿದೆ? ಏನೋ ಉತ್ಕೃಷ್ಟವಾದ ವಿಷಯ ವನ್ನು ಹೇಳುವಳಂದು ಕಿವಿಗೊಟ್ಟು ದುದಕ್ಕೆ ಇಂತಹ ಮಾತುಗಳನ್ನಾ ಡುವುದೆ ? ಪ್ರಮಾಣವನ್ನು ಮಾಡಿಸಿಕೊಂಡು ಯಾರೊಡನೆಯೂ ಹೇಳಬೇಡವೆಂದು ಹೇಳಿದೆಯಾ? ಗೋಪ್ಯವಾಗಿ ನೀನು ಮಾತನಾಡಿ ದುದನ್ನು ನಮ್ಮ ರಾಜನು ನೋಡುತ್ತಲೇ ಇದ್ದನಲ್ಲ. ನೀನು ಹೇಳಿದ ಮಾತುಗಳನ್ನು ಹೇಳಿದರೆ ನನ್ನ ಮಿತ್ರನು ನಂಬುವನೆ ? ಏನುಮಾ ಡಲಿ. (ಭ್ರಾಂತನಾಗಿ ನಿಂತಿರುವನು.) - ಸೌಗಂಧಿಕ, ಮಿತ್ರನೆ ? ಇಲ್ಲಿಬಾ, ಇವಳು ಹೇಳಿದಮಾತಿಗೆ ಇಷ್ಟು ಕೋಪವೆ? ಆಡಿದ ಗುಟ್ಟಿನಮಾತೇನು ? ವಸಂತಮಿತ್ರ, ಮಹಾರಾಜನಿಗೆ ಈಗ ಏನೆಂದುಹೇಳಲಿ. ಆರನೆ, ಯಾರೊಡನೆಯೂ ಹೇಳಬೇಡವೆಂದು ಹೇಳಿದಳು. ಸೌಗಂಧಿಕ. ನನ್ನೊಡನೆಯ? ವಸಂತಮಿತ್ರ, ಇವಳು ನನಗೆ ಯಾವದನ್ನೂ ಹೇಳಲಿಲ್ಲ. ಸೌಗಂಧಿಕ, ಮಿತ್ರನೆ, ಮೊದಲು ಈಕೆಗೆ ಭಾಷೆ ಕೊಟ್ಟು, ಹೆದರಿ ಪರಮಾಪ್ತನಾದ ನನ್ನೊಡನೆಯೂ ಸುಳಾಡುವುದೆ ? ಉಭಯತ್ರರೂ ಒಂದೇ ಸ್ಥಳದಲ್ಲಿ ಬೆಳೆದು, ಎಡೆಬಿಡದೆ ಆಟವಾಡಿ ಜೊತೆಯಲ್ಲಿಯೇ ಭೋಜನವಾಡಿ ಅಶ್ವಿನೀದೇವತೆಗಳಂತಿದ್ದೆವು. ನನ್ನಲ್ಲಿಯೂ ವಂಚನೆ ದೇ, ನಿನ್ನ ಬುದ್ಧಿಯು ಹೀಗಾಗಬಹುದೆ ? ಚಾರುಶೀಲೆ, ಅಯ್ಯಾ, ಗೋಪ್ಯವಾಗಿ ಹೇಳಿದುದನ್ನು ನಮ್ಮ ರಾಜ ನೊಡನೆಯೂ ಹೇಳಬೇಡ. ಏನುಮಾಡುವನೊ ನೋಡೋಣ. ಸೌಗಂಧಿಕ. ಈಕೆಯು ಹೇಳಿದಂತೆಯೇ ನನ್ನ ಮಿತ್ರನೂ ಹೇಳು ವುದಿಲ್ಲವಲ್ಲ! ಇದರಲ್ಲಿ ಏನೋ ಒಂದು ಸ್ವಾರಸ್ಯವಿದೆ. ಪ್ರಪಂಚ ದಲ್ಲಿ ಸ್ನೇಹಕ್ಕಿಂತ ಹೆಚ್ಚಾದುದು ಯಾವದೂಇಲ್ಲ. ಸ್ನೇಹವೆಂಬ ಚಿನ್ನವನ್ನು ಕಷ್ಟವೆಂಬ ಒರೆಗಲ್ಲಿನಲ್ಲಿ ತೇದು ಪರೀಕ್ಷೆಮಾಡಬಹು ದಾಗಿದೆ. ಪರಮಾಪ್ತನಾದ ನನ್ನೊಡನೆಯೂ ಸುಳ್ಳಾಡಬಹುದೆ ?