ಪುಟ:ವಸಂತಮಿತ್ರ ವಿಜಯ ನಾಟಕಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ವಿ ಇ ಸಿ ಜಿ ಯ ನಾ ಟ ಕ ೦ , ೧೯ ( 1) ಚಾರುಶೀಲೆ. ಸಚಿವನೆ, ಪ್ರಮಾಣಕ್ಕೆತಪ್ಪಿ ನಡೆಯುವವರು ಸತ್ತು ರುಪ್ಪರೆ ? ವಸಂತಮಿತ್ರ, ಆರನೆ, ಪ್ರಮಾಣಮಾಡಿ ಹೇಳುವೆನು. ನನಗೆ ಏನೂ ಹೇಳಲಿಲ್ಲ. ಚಿಂತೆಮಾಡಿ ಪ್ರಯೋಜನವಿಲ್ಲ. ಈ ನೀಳ ಮುಖಾವಲೋಕನವು ಇನ್ನೂ ಕ್ರೋಧಕ್ಕೆ ದಾರಿಕೊಡುವುದು. ಚಾರುಶೀಲೆ. ನನ್ನ ಮನೋರಥವು ಕೈ ಗೂಡುತ್ತಾ ಬರುವದು. ಸೌಗಂಧಿಕ. ಇದರಲ್ಲಿಯೇ ಇಷ್ಟು ಮೋಸಮಾಡಿರುವಾಗೆ, ರಾಜ್ಯಭಾರದವಿಷಯದಲ್ಲಿ ಎಷ್ಟು ಮೋಸ ಮಾಡಿರುವಿಯೊ ನನಗೆ ತಿಳಿಯದು. ವಸಂತಮಿತ್ರ, ಮಿತ್ರನೆ, ಕೋಪಿಸಬೇಡ. ನಿನಗೆ ಬುದ್ದಿ ಹೇಳುತ್ತಿ ದ್ದವನೇ ಕೊನೆಗೆ ಮೋಸಹೋಗಿ ನಿನ್ನ ಅವಮಾನದ ಮಾತುಗಳು ಕೇಳಿದರೂ ಚಿಂತೆಯಿಲ್ಲ. ಆದರೆ ನಾನು ಹೇಳಿದುದನ್ನು ಮಾತ್ರ ಎಂದಿಗೂ ಮರೆಯಬೇಡ. ಸೌಗಂಧಿಕ, ಸ್ತ್ರೀಯರಿಗೆ ಮರುಳಾಗಿ ಮಿತ್ರದ್ರೋಹಮಾಡುವು ದನ್ನು ಜ್ಞಾಪಕದಲ್ಲಿಡಬೇಕೊ? ಛೇ ನೀಚನೆ, ಯಾರಲ್ಲಿ ? (ಕೆಲವು ವನಪಾಲಕರು ಬಂದು ನಿಂತಿರುವರು) ಸೇವಕರಿರಾ ? ಈ ನೀಚನು ಮಿತ್ರದ್ರೋಹಿಯಾದುದರಿಂದ ನಮ್ಮ ಪಟ್ಟಣದಿಂದಾಚೆಗೆ ತಳ್ಳಿಬಿಡಿ. (ವನಪಾಲಕರು ವಸಂತಮಿತ್ರನನ್ನು ಸೆಳೆಯುವು.) ವಸಂತಮಿತ್ರ. ಅಯ್ಯೋ, ನೀಚಸ್ತ್ರೀಯೆ, ಏನುಮರುಳಾಗಿ ನಿನಗೆ ಕಿವಿಗೊಟ್ಟೆನೋ ತಿಳಿಯಲಿಲ್ಲವಲ್ಲ. ಚಾರುಶೀಲೆ, ಅಯ್ಯಾ, ಇಂತಹಕಾಲದಲ್ಲಿಯೂ ನಾನು ಗೋಪ್ಯ ವಾಗಿ ಹೇಳಿದುದನ್ನು ಎಂದೆಂದಿಗೂ ರಾಜನೊಡನೆ ಹೇಳಬೇಡ. (ವನಪಾಲಕರು ವಸಂತಮಿತ್ರನನ್ನು ಸೆಳೆದುಕೊಂಡೇ ಹೋಗುವರು.) ರಾಗ-ಭೈರವ, ರೂಪಕ, ನಿಧಿಯೇಕೀಪರಿ ಗೈದೆಯೊ 1 ಹದನೇನುತೋರದು ಮುಂದಕೆ || ಪ | ಕಂತುಸಮರೂಪನ | ಇ೦ತಗಲುತೆನೀ ! ಚಿಂತೆಗೆದುರಿಗೈದೆಯಾ ? ೧. ನಿನ್ನ ಯಾಣತಿಯನು ! ಮುನ್ನ ದಾರೀರ್ವರು : ಬನ್ನವನೆಂತುಸೈಸಲೀ | ೨ ||