ಪುಟ:ವಸಂತಮಿತ್ರ ವಿಜಯ ನಾಟಕಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪ ಪ್ರ ಥ ಮಾ ೦ ಕ ೦ . ಗಾಲವ. ನಾನು ನನ್ನ ಗುರುಗಳಿಗೆ ಶಿಸ್ಮ, ನೀನು ನನ್ನ ಶಿಶ್ನ ನಾಗುವುದೆಂದರೇನು, ಇದು ಸರಿಯಾದುದಲ್ಲ. ವಸಂತಮಿತ್ರ, ಕಸ್ಮಪಡುವವರನ್ನು ಕಾಪಾಡುವುದು ಸಹಜ ವೆಂದು ತಿಳಿದಿದ್ದ ಪಕ್ಷದಲ್ಲಿ ತಮ್ಮ ಚಿತ್ರ, ನಾನು ಹೇಳಲಾರೆ. ಗಾಲವ, (ಸ್ವಗತಃ) ಏನುಮಾಡಲಿ. ನಾನು ಎಲ್ಲಿಗೆ ಹೋದರೂ ಒಂದೊಂದು ನಿರ್ಬಂಧವೇ ಪ್ರಾಪ್ತವಾಗುತ್ತಿರುವುದಲ್ಲ. ಈತನಿಗೆ ಹಣ ದಿಂದ ಸಹಾಯಮಾಡೋಣವೆಂದರೆ ನನ್ನ ಸ್ಥಿತಿಯೇ ಬೇರೆ. ಅಯ್ಯಾ, ಹತ್ತಿರದಲ್ಲಿಯೇ ನಮ್ಮ ಗುರುಗಳಾದ ಮಾಂಡವಯಸ್ಸಿಗಳು ಇರುವರು. ನನ್ನೊಡನೆ ಬಂದುದಾದರೆ ಅವರನ್ನು ತೋರಿಸುವೆನು. ಒಂದುವೇಳೆ ನಿನ್ನದುಃಖವು ಅವರಿಂದ ಪರಿಹಾರವಾದೀತು. ಬರುವೆಯಾ ಹೊ ಗೋಣ ? ವಸಂತಮಿತ್ರ, ಸ್ವಾಮಿ, ಸಿದ್ಧನಾಗಿರುವೆನು. (ಇಬ ರೂಹೊರಡುವರು, ) ಸ್ಥಾನ ೪. ಆಶ್ರಮ. ಮಾಂಡವಯಸ್ಸಿಗಳು ಧ್ಯಾನಮಾಡುತ್ತಾ ಕೂತಿರುವರು. (ಗಾಲವ ಮತ್ತು ವಸಂತಮಿತ್ರನು ಪ್ರವೇಶಿಸುವರು.) ಗಾಲವ, ಸುಕುಮಾರನೆ, ಇಲ್ಲಿಗೆ ಬಾ. ಇದೇ ನಮ್ಮ ಗುರುಗಳು ಧ್ಯಾನಚಿತ್ತರಾಗಿರುವರು. ನಿನ್ನೊಡನಿದ್ದರೆ ಗುರುಗಳು ಕೋಪಿಸಿಕೊ ಳ್ಳುವರು. ಇನ್ನು ನಾನು ಹೋಗುವೆನು, (ಹೋಗುವನು.) ವಸಂತಮಿತ್ರ. ಈ ಆಶ್ರಮವಾದರೆ, ಕಂದ | ನಳನಳಿಸಿ ಬೆಳೆದ ನಳನಂ ಗಳ ಬಂಡಂಸವಿವ ಮಧುಪ ಕುಲದಿಂದೆಲರಿಂ || ಗಿಳಿಗಳ ಕಳಕಳೆ ರವದಿಂ ಪೊಳೆಯುತ್ತಂ ಮುದವನಿತ್ತು ಸೆಳೆವುದು ಮನವಂ! ೨೫! ಈ ಮಹಾತ್ಮರನ್ನು ನೋಡಿ ಕೃತಾರ್ಥನಾದೆನು. ನನ್ನ ಕಣ್ಣು ಗಳು ಪವಿತ್ರವಾದವು. ಈ ಆಶ್ರಮದಲ್ಲಿರುವ ಸಕಲವೂ ಸೌಮ್ಯ