ಪುಟ:ವಸಂತಮಿತ್ರ ವಿಜಯ ನಾಟಕಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ ತ ವಿ ಶ್ರೀ ವಿ ಜ ಯ ನಾ ಟ ಕ ೦ . ವಸಂತಮಿತ್ರ, ಸ್ವಾಮಿ, ಜನನವುಂಟಾದವನಿಗೆ ಮರಣವು ಸಂಭ ವಿಸುವುದು ಸಿದ್ಧವೆಂಬುವುದು ತಮಗೆ ತಿಳಿದು ಇರುವುದನ್ನೈ, ಹೀಗಿ ರಲು ದೇವರು ಏತಕ್ಕೆ ನಮ್ಮನ್ನು ಈ ಪ್ರಪಂಚದಲ್ಲಿ ಸೃಜಿಸಿರುವ ನೆಂದು ತಿಳಿದರೆ ಅದು ಸಾಕಾಗಿರುವುದಲ್ಲವೆ ? ಮಾಂಡವ. ಕ್ಷಣಿಕವಾಗಿರುವ ಈ ಪ್ರಪಂಚವು ಮಾಯಾವೃತ ವಾಗಿರುವುದೆಂದು ತಿಳಿದಿದ್ದಾಗ್ಯೂ, ದೇವರು ಯಾರನ್ನು ಯಾವ ವರ್ಣಾಶ್ರಮದಲ್ಲಿ ಸೃಜಿಸಿರುವನೋ, ಆಯಾ ವರ್ಣಾಶ್ರಮೋಚಿತ ವಾದ ಕಾಠ್ಯಗಳನ್ನು ಮಾಡಲೇ ಬೇಕಲ್ಲವೇ? ಬ್ರಾಹ್ಮಣನು ವೇದಾಧಿ ಕಾರಿ, ಕ್ಷತ್ರಿಯನು ರಾಜ್ಯಾಧಿಕಾರಿ. ಹೀಗಿರಲು ಆಶ್ರಮೊಚಿತ ಧರ್ಮದಲ್ಲಿ ವಿಧಿಯಂತೆ ನಡೆದರೆ ಪರಮಾತ್ಮನನ್ನು ಸೇರುವುದರಲ್ಲಿ ಸಂದೇಹವಿಲ್ಲ. ವಸಂತಮಿತ್ರ. ಸ್ವಾಮಿ, ಈ ದೇಹವು ಅನಿತ್ಯವಾದುದು. ಹೇಗೆಂ ಧರೆ, ಕಂದ || ಮಲಿನಾಂಬರವ ಬಿಸುಡು ತಲಸದೆ ನಿರ್ಮಲ ದುಕೂಲಮಂ ತಳೆಯುವವೊಆ5 1 ಬೆಳಗಳಿದಿರ್ದೊಡಲುಳಿಯುತ ನೆಲಸುತೆ ಪೊಸದೇಹದಲ್ಲಿ ಮೆರೆವಂ ಜೀವಂ | | ೨೬! ಹೀಗಿರಲು ಸರ್ವವೂ ನನ್ನದೆಂತಲೂ, ಸರ್ವದಾ ಸೌಖ್ಯದಲ್ಲಿರು ವನೆಂತಲೂ ತಿಳಿದಿರುವ ಮೂಢಾಭಿಪ್ರಾಯವನ್ನು ನಾನು ನಿವರ್ತಿಸಿ ಕೊಂಡು, ದೇವರ ಧ್ಯಾನವನ್ನು ಮಾಡುತ್ತಾ ನಿಶ್ಚಂಚಲ ಮನಸ್ಸಿನಿಂದ ತಮ್ಮ ಸೇವೆಯಲ್ಲಿರುವೆನು, ಅಪ್ಪಣೆಯಾಗಬೇಕು. ಮಾಂಡವ, ಒಂದೊಂದು ಹಂತವನ್ನು ಹತ್ತಿದಮೇಲಲ್ಲವೆ ಬೆಟ್ಟ ದಮೇಲಕ್ಕೆ ಹೋಗುವುದಕ್ಕಾದೀತು. ಹೀಗೆಯೇ ಆಶ್ರಮೋಚಿತ ಧರ್ಮವಾದಕರ್ಮವೂ, ಕರ್ಮದಿಂದ ಜ್ಞಾನವೂ, ಇದರಿಂದ ಮೋಕ್ಷವೂ ಹೊಂದಬಹುದಾಗಿದೆ. ಮೊದಲೇ ನಿನ್ನ ಸ್ಥಿತಿಯನ್ನು ತಿಳಿ ದುಕೊಳ್ಳದೆ ಸಂಸಾರ ನಿವರ್ತನಾಗಿ, ಸರ್ಕಾಶನ ಮಾಡಿಕೊಂಡು,