ಪುಟ:ವಸಂತಮಿತ್ರ ವಿಜಯ ನಾಟಕಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಥ ಮಾ೦ ಕ ೦ • ಆಶಾನಿವರ್ತನಾಗಿ ನಮ್ಮಂತೆ ನೀನು ಅರಣ್ಯದಲ್ಲಿರುವುದೆಂದರೇನು. ಇದು ಅಸಾಧ್ಯವಾದ ಕಾರ್ಯವಲ್ಲವೆ ? ವಸಂತಮಿತ್ರ, ಹೂವಿನಿಂದ ನಾರು ಸುವಾಸನೆಯನ್ನು ಹೊಂದು ವಂತ ತಮ್ಮನ್ನು ಸೇರಿದಮೇಲೆ ತಮ್ಮ ತಪಃಪ್ರಭಾವದಿಂದ ಅಂತಹ ಜ್ಞಾನವುಂಟಾಗದಿರುವುದೆಂದರೇನು ! ಬಂಧಕ್ಕೂ, ಮೋಕ್ಷಕ್ಕೂ ಮನಸ್ಸೇ ಕಾರಣವು. ಇದನ್ನು ಜಯಿಸುವುದಕ್ಕೆ ಇಂದ್ರಿಯನಿಗ್ರ ಹವೇ ಮುಖ್ಯವು. ಅಲ್ಲದೆ, ವೃತ್ತಂ ॥ ವರಪಂಚೇಂದ್ರಿಯ ನೌಕವಿಂತು ಜವದಿಂದಾಶಾಬ್ಬಿಯೋಲ್‌ ತೇಲುತಂ | ತ್ವರೆಯಿಂದೈದುವ ಕಷ್ಟವೆಂಬ ಮಡುವಿಂ ಪಾರಾ ಗುತಂ ಮೋದದಿಂ || ಪರಮಾನಂದಮೆನಿಪ್ತ ಮುಕ್ತಿ ತಟಮಂ ಸಾರಿ ನಾನಾವಗಂ | ಕರುಣಾಂಭೋನಿಧಿ ರಾಮಚಂ ದ್ರನಡಿಯಂ ಸದ್ಭಕ್ತಿಯಿಂ ಧ್ಯಾನಿಪೆಂ | ೨೭ || ಮಾಂಡವ. ಬಾಲಕನೆ, ನೀನು ಸಮಸ್ತ ವಿಷಯಗಳನ್ನೂ ತಿಳಿದಿ ರುವೆ. ಒಳ್ಳೇದು, ನಿನ್ನ ಸ್ನೇಹಿತನಲ್ಲಿ ನಿಜವಾದ ಪ್ರೀತಿಯು ಇರು ವುದೊ ? ವಸಂತಮಿತ್ರ, ಆತನು ನನ್ನನ್ನು ರಾಜ್ಯಭಸ್ಮನನ್ನಾಗಿ ಮಾಡಿ ದಾಗ್ಯೂ, ಆತನಲ್ಲಿ ನನ್ನ ವಿಶ್ವಾಸವು ಒಂದೇರೀತಿಯಾಗಿರುವುದು, ಹಾಗೆ ನನ್ನ ಪ್ರೀತಿಯನ್ನು ಅವನಿಗೆ ತೋರಿಸದಿದ್ದರೆ ನನ್ನ ಸ್ನೇಹವು ಕಲ್ಮಸಯುಕ್ತವಾದುದೆಂದು ಹೇಳಬೇಕಲ್ಲವೆ ? ಮಾಂಡವ, ನಿಜವೇಸರಿ, ನಿನ್ನ ಸ್ನೇಹಿತನಿಗೆ ಪ್ರಾಪ್ತವಾಗುವ ವಿಷ ತುನಿನ್ನಿಂದಲೇ ಪರಿಹಾರವಾಗಬೇಕಾಗಿರುವುದು; ಏನುಮಡುವೆ ? ವಸಂತಮಿತ್ರ, ವಿಪತ್ತು! ಎಂತದು, ಬೇಗಹೇಳಿ? ಮಾಂಡವ, ಮರಣ, ವಸಂತಮಿತ್ರ. ಅಯ್ಯೋ, ಮಿತ್ರನೇ, ಅನ್ಯಾಯವಾಗಿ ಪ್ರಾಣವನ್ನು ಬಿಡುವೆಯಾ? ಸ್ವಾಮಿ, ಪ್ರಾಣವನ್ನು ಬಿಡುವುದಕ್ಕೆ ಕಾರಣವನ್ನು ಹೇಳುವುದಲ್ಲದೆ, ಆತನು ಈಗ ಹೇಗಿರುವನೋ ಅದನ್ನಾದರೂ ದಯವಿಟ್ಟು ಹೇಳಬೇಕು.