ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩0 ನ ಸ ೦ ತ ಮಿ ತ್ರ ವಿ ಜ ಯ ನಾ ಟ ಕ ೦ ೦ ದ್ವಿ ತಿ ಯಾ 9 ಕ ೦ . ಸ್ಥಾನ ೧, -ಅಮೃತಶೇಖರಿ ಪಟ್ಟಣದ ಕೋಟೆಯ ಬಾಗಿಲು, ಒಂದು ಚಿತ್ರ ಪಠವು ನೇತುಹಾಕಿರುವುದು, (ಒಬ್ಬ ಸೇವಕನು ನಿಂತಿರುವನು.) ವೃ || ಭೂಮಿಪಾಲನ ಸೇವೆಗೆಯ್ಯುತೆ ಸತ್ವವೆಲ್ಲವು ಪಿಂಗಿ | ಕಾಮಿತಾರ್ಥಗಳೆಲ್ಲ ಪೋದುವು ಹೀನವೃತ್ತಿಯಗೈಯುತಾಂ | ಪ್ರೇಮದಿಂದುರೆನೋಡುತೆಂಮನದಾರುಪಾಲಿಸರಕ್ಕಾ | ಸೋಮಶೇಖರ ನಿಂತುನಿರ್ದಯನಾದನೆಮ್ಮೊಳದೇತಕೋ | 1೨೯n ಸೇವಕ. ಇದು ಹಾಗಿರಲಿ, ಈ ಅಮೃತಶೇಖರಿ ಪಟ್ಟಣದ ಮಹಾ ರಾಜನ ಮಗಳಾದ ಆನಂದವತಿಯನ್ನು ಸೌಗಂಧಿಕನೆಂಬ ರಾಜ ಪುತ್ರನಿಗೆ ಕೊಟ್ಟು ವಿವಾಹವು ಬಹು ವಿಜೃಂಭಣೆಯಿಂದ ನೆರವೇ ರುತ್ತಿರುವುದು. ಆದರೆ ಸೌಗಂಧಿಕನು ತನ್ನ ಮಿತ್ರನಾದ ವಸಂತಮಿ ತ್ರನುಇಲ್ಲಿಗೆ ಬಂದರೆ ಕೋಟೆಯೊಳಗೆ ಖಂಡಿತವಾಗಿಯೂ ಬಿಡಕೂ ಡದೆಂದು ಆಜ್ಞೆ ಮಾಡಿರುವನು. ಇದಕ್ಕೆ ಕಾರಣವೇನಿರಬಹುದು. (ಯೋಚಿಸಿ) ಮಿತ್ರನನ್ನು ಇಂತಹ ಸಂತೋಷ ಕಾಲದಲ್ಲಿಯೂ ಒಳಕ್ಕೆ ಬಿಡಕೂಡದೆಂದು ಆಜ್ಞೆ ಮಾಡಿರುವುದಕ್ಕೆ ಆತನು ಎಂತಹ ಮಿತ್ರದ್ರೋಹಿಯಾಗಿರಬಹುದು. ಆಹಾ! ಪ್ರಪಂಚದಲ್ಲಿ ಸ್ನೇಹ ಮಾಡುವುದೇ ಕಕ್ಕೆ ಬಂತಲ್ಲ!! ನಾವು ಒಬ್ಬನನ್ನು ಸ್ನೇಹ ಮಾಡ ಬೇಕಾಗಿದ್ದರೆ ಮೊದಲು ಅವನ ಗುಣಾವಗುಣಗಳನ್ನು ಪರಿಶೀಲನೆ ಮಾಡಬೇಕು. ಕೆಲವರು ಸ್ನೇಹಿತರಂತೆ ಮೊದಲು ನಟಿಸಿ, ಆಂತರಕ್ಕೆ ಪಾತ್ರರಾಗಿ, ಕಕಾಲ ಬಂದಾಗ್ಗೆ ಹೊರಟು ಹೋಗುವರು. ಮತ್ತೆ ಕೆಲವರು ತಮ್ಮ ಮನಸ್ಸಿಗೂ ಕಾಠ್ಯಗಳಿಗೂ ಭೇದವಿಲ್ಲದಂತೆ ತೋರ