ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧. ದ್ವಿ ತಿ ಯಾ ೦ ಕ ೦ . ಡಿಸಿಕೊಳ್ಳುತ್ಯಾ, ಸ್ವಕಾರದಲ್ಲಾಸಕ್ತರಾಗಿ, ತಮ್ಮ ಮನೋಗತ ವನ್ನು ನೆರವೇರಿಸಿಕೊಂಡನಂತರ ಬಿಟ್ಟು ಹೋಗುವರು. ಆದರೆ ನಿಜವಾದ ಸ್ನೇಹಿತನಾದರೋ, ಕಂದ | ತನ್ನಯೆಬಾಳ್ಮೆಯನುಳಿಯು ತನ್ಯರಸೌಖ್ಯಕ್ಕಸುವನೆನೀಡುತನುನಿಶ ! ಬನ್ನದೊಳೆದೆಗೆಡದೆಡೆಬಿಡ ದುನ್ನ ತವ ನವನೆರ್ದನಿ ನೇಮಿತ್ರಂ || ೩೧ || ಇದು ಹಾಗಿರಲಿ, ಮಿತ್ರರಲ್ಲಿ ವೈಷಮ್ಯವು ಹುಟ್ಟಬೇಕಾಗಿದ್ದರೆ, ಅಕಸ್ಮಾತ್ತಾಗಿ ಪ್ರಾಪ್ತವಾಗುವ ವಿಷಯದ ನಿಜಾಂಶವನ್ನು ತಿಳಿಯದೆ ಭ್ರಾಂತಚಿತ್ತರಾಗುವುದೇ ಕಾರಣವೆಂದು ತೋರಿ ಬರುವುದು. ಇದು ಹೀಗೆಯೇ ಇರಬಹುದು. ಒಳ್ಳೇದು ನನ್ನ ಕಾವ್ಯದಲ್ಲಿ ನಾನು ಎದ್ದ ರಿಕೆಯಾಗಿರುವೆನು. ವ ಸ 0 ತ ಮ ತ ನ ಪ ವೆ ಶ . ವಸಂತಮಿತ್ರ. ಈ ಅಮೃತಶೇಖರಿ ಪಟ್ಟಣದೊಳಗೆ ಪ್ರವೇಶಿಸ ಬೇಕೆಂದು ಎಲ್ಲಾ ಕಡೆಯಲ್ಲಿಯೂ ಪ್ರಯತ್ನ ಪಟಾಗೂ ಸೇವಕರು ನನ್ನನ್ನು ಯಾವ ಬಾಗಿಲಿಂದಲೂ ಒಳಕ್ಕೆ ಬಿಡಲಿಲ್ಲ. ಕಾಲವಾದರೂ ಗತಿಸಿಹೋಗುತ್ತಾ ಬಂತು. ಏನುಮಾಡಲಿ. ಒಳ್ಳದು ಈ ಬಾಗಿಲಿಂ ದಾದರೂ ಒಳಕ್ಕೆ ಪ್ರವೇಶಿಸುವೆನು. ( ಎಂದು ೨-೩ ಹೆಜ್ಜೆಗಳನ್ನಿಡುವನು.) ಸೇವಕ, * ಯಾರಲ್ಲಿ, ಅಪ್ಪಣೆಯಿಲ್ಲದೆ ಒಳಕ್ಕೆ ಹೋಗುವುದೆಂದ ರೇನು? ರಾಜಾಜ್ಞೆಯು ಬಲವತ್ತರವಾಗಿರುವುದಲ್ಲವೆ?

  • ರಾಗ

ತಾಳ. ನೀನಾವನೊ ಅರುಹದೆತೆರಳುವ || ಪ || ಜನಪನನಿ ಸುಮವ ಕಡೆಗಣಿಸ। ವಿನಯವನುಳಿಯುವ ತರಂತೂರುವ || ೧|| ಥರಣಿಪನು ನಿಯಮಿಸಿರೆ ನನ್ನ | ತರಳ್ವರನೊಡಿ ಬಿಡುತಿಹೆನು | ೨ |ಪೆಸರೆನಗರುಹುತ ಲಡಿಯಿಡುಮುಂದೆ | ಪುಸಿಯುನಗುಸಿರದು ಬಿಸಜನಯನಕೇಳ್ || ೩ |