ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತೀ ಯಾ ೦ ಕ೦ - ೩೩ ವಸಂತಮಿತ್ರ. ಈ ಬ್ರಾಹ್ಮಣರು ನನ್ನ ಮಿತ್ರನ ವಿವಾಹ ಮಹೋ ತೃವನನ್ನು ನೋಡಿಕೊಂಡು ಬಂದಂತೆ ತೋರುವುದು. ಒಳ್ಳೇದು, ನನ್ನ ಮಿತ್ರನ ವಿವಾಹದ ವೈಭವಾತಿಶಯವನ್ನು ಇವರಿಂದಲಾದರೂ ಕೇಳಿ ಸಂತೋಷಪಡುವೆನು. (ಹತ್ತಿರಕ್ಕೆ ಹೋಗಿ) ಸ್ವಾಮಿ, ನಮಸ್ಕ ರಿಸುವೆನು. ೧ನೇ ಬ್ರಾಹ್ಮಣ ಅಯ್ಯ, ನಿನಗೆ ಮಂಗಳವಾಗಲಿ. ವಸಂತಮಿತ್ರ, ಪೂಜ್ಯರೆ, ತಾವು ಎಲ್ಲಿಗೆ ದಯಮಾಡಿಸಿದ್ದೀರಿ? ೨ನೇ ಬ್ರಾಹ್ಮಣ. ಈ ವಟ್ಟಣದ ಮಹಾರಾಜನ ಮಗಳಾದ ಆನಂದ ವತಿಯನ್ನು ಒಬ್ಬ ರಾಜಕುಮಾರನಿಗೆ ಕೊಟ್ಟು ವಿವಾಹವು ಬಹು ವಿಜೃಂಭಣೆಯಿಂದ ನೆರವೇರಿತು. ರಾಜನು ತನ್ನ ಸಂತೊಪ್ರಾರ್ಥ ವಾಗಿ ಜನಗಳ ಯೋಗ್ಯತಾನುಸಾರ ಮಾನ ಮರ್ಯಾದೆಗಳನ್ನು ಮಾಡಿ ಕಳುಹಿಸಿರುವನು. ನಾವು ಹೋಗಿದ್ದೆವು. ಈಗ ನಮ್ಮ ನಮ್ಮ ಮನೆ ಗಳಿಗೆ ಹೋಗುವೆವು. ವಸಂತಿಮಿತ್ರ. ಈ ಶುಭ ಸಮಾಚಾರವನ್ನು ಕೇಳಿ, ನನಗೆ ಬಹಳ ಸಂತೋಷವಾಯಿತು. ಇದಕ್ಕಾಗಿ ಕೊಡುವ ಈ ಅಲ್ಪ ದ್ರವ್ಯವನ್ನು ಸ್ವೀಕರಿಸಬೇಕು. (ತನ್ನ ಕೊರಳಿನಲ್ಲಿದ್ದ ಮುತ್ತಿನ ಹಾರವನ್ನು ಒಬ್ಬರಿಗೆ ಹಾಕಿ ಮಿಕ್ಕಮಗೆ ದಕ್ಷಿಣೆಯನ್ನೂ ಕೊಡುವನು ) ಪೂಜ್ಯರೆ! ವರ ಸಾಮ್ಯವು ಚೆನ್ನಾಗಿರುವುದೆ? - ೩ನೇ ಬ್ರಾಹ್ಮಣ, ವಿಧಿಗೆ ಅನುಸಾರವಾಗಿಯೇ ಇದೆ. ಕೇಳಿ ಪ್ರಯೋಜನವಿಲ್ಲ. ವಸಂತ ಶ್ರೀ ಸ್ವಾಮಿ ನಾವು ಹೀಗೆ ಹೇಳಿದರೆ ನನಗೆ ಬಹಳ ವ್ಯಸನವಾಗುತ್ತೆ. ನಿಜಾಂಶವನ್ನು ಹೇಳಬೇಕು. ರಾ. ಶಂಕರಾಭರಣದನೋಟ. ಏಕ, ಅಹಹಭೂಪ ನಿಂತು ನಿಂತುರಚಿಸಿದ ! ವಿಹಿತಪಾತ್ರ ವರಿತುಮಾನ ವಿತ್ತು ಕಳುಹಿದ ॥ ೧ ॥ ಭೋಜ್ಯವಸ್ತು ಗಳಿನೆಸತತ ತೃಪ್ತಿಯೊಂದಿಸಿ | ರಾಜ್ಯ ಕೆಲ್ಲ ದಾನಧರ್ಮ ಗಳನುಮಡಿಸಿ ॥ ೨ ॥ ಇನೋಡು ಊಟಮಾಡಿ ತೃ ರಾದೆವೀಗಲೆ ! ನಿತ್ಯತೃಪ್ತಿ ಯೊಂದೆಮುನವು ಸೆಳೆವುದೀಗಲೆ || ೩ ||