ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತೀ ಯಾ ೦ ಕ ೦. ೩೫ (ಸೇವಕನನ್ನು ನೋಡಿ) ಅಯ್ಯ, ಆಶೆಯೆಂಬುದು ಬಹಳ ಕೆಟ್ಟದ್ದು , ಇದರಿಂದ ಅಮೋಘವಾದ ನನ್ನ ಪದವಿಯನ್ನು ಲಕ್ಷಿಸದೆ, ನೃತ್ಯನಾ ಗಿರುವ ನಿನ್ನನ್ನು ಇಷ್ಟು ವಿನಯದಿಂದ ಕೇಳಿಕೊಳ್ಳಬೇಕಾಗಿದೆ. ನೀನು ಸುಖದುಃಖಗಳನ್ನು ಚೆನ್ನಾಗಿ ಅನುಭವಿಸಿದವನೆಂದು ಮನಸ್ಸಿಗೆ ಹೊಳೆಯುವದು. ಇತರರ ಕವೇ ತಮ್ಮ ಕವೆಂದುಭಾವಿ ನಿರುವ ಮಹನೀಯರಲ್ಲಿ ನೀನು ಗುರು ಶುಕ್ರೂಷೆಮಾಡಿದ್ದು, ನನ್ನ ಮೃದುವಾದ ಮಾತುಗಳು ನಿನ್ನ ಮನಸ್ಸನ್ನು ಕರಿಗಿಸುವುದಾಗಿದ್ದರೆ, ನನ್ನ ವಿಜ್ಞಾಪನೆಯು ನಿರರ್ಥಕವಾಗಲಾರದೆಂದು ಭಾವಿಸುವೆನು, - ಸೇವಕ ಈತನ ಮಾತುಗಳು ಎಷ್ಟು ವಿನಯವಾಗಿರುವುವು ! ರಾಜ) ಕ್ಲಿಯಾದರೂ ಬಹು ಕಠಿಣವಾಗಿರುವುದು. ಏನು ಹೇಳುವು ದಕ್ಕೂ ಬುದ್ದಿ ತೋರುವುದಿಲ್ಲವಲ್ಲ. ಒಳ್ಳೇದು. ಅಯ್ಯ, ನಿನ್ನ ಹೆಸರೇನು ? * ವಸಂತ್ರಮಿತ್ರ, ಪರಮಪಾತಕಿಯಾದ ವಸಂತಮಿತ್ರನೆಂದು ಕರೆ ಯುವರು. ಸೇವಕ ಆಶ್ಚರ ! ಆಶ್ಚರ, ಇದು ಹಾಗಿರಲಿ, ಇಲ್ಲಿಗೆ ಬಾ !! ( ಸ್ವಲ್ಪದೂರ ಕರೆದುಕೊಂಡು ಹೋಗಿ) ಇದೋ ನೋಡು. ಈ ಚಿತ್ರ ಪಠಕ್ಕ ನಿನ್ನ ಮುಖಭಾವಕ್ಕೂ ಹೋಲಿಸಿದುದಾದರೆ ಒಂದೇಯಾಗಿ ರುವುದು. ಸೌಗಂಧಿಕನು ನಿನ್ನನ್ನೇ ಕುರಿತು ಹೇಳಿದಂತೆ ತೋರು ವುದು. ಒಳ್ಳೇದು, ಈ ಕಾಗದವನ್ನು ಓದಿ ನೋಡಿಕೊ; (ಮಿತ್ರನ ಭಾವಚಿತ್ರವೆಂದು ಭ್ರಾಂತಿಪಟ್ಟು, ಚಿತ್ರಪರವನ್ನು ನೋಡಿ) ಅಯ್ಯಾ, ಕಂದ | ಸದಯಾತ್ಮನೆನ್ನೊಳು ದುಮಧುರೊಕಿಯ ವಿನೋದದಿಂದಾಡುವವೊಲ್ ಸದಯಾಸಾಂಗದೊಳೀಕ್ಷಿಸಿ ಮುದವಾ೦ತುವಿರಾಜಿಸುತ್ತಲಿರ್ದ೦ನೋಡೆ || ೩೨ || ವಸಂತ್ರವಿತ್ರ ಬರೆದ ಅಂಶವನ್ನು ನೀನೇ ಓದಿಹೇಳು. ಸೇವಕ, ವಸಂತಮಿತ್ರನೆಂಬ ಮಿತ್ರದ್ರೋಹಿಯು ಕೋಟೆಯೊ ಳಗೆ ಪ್ರವೇಶಿಸುವುದಾದರೆ ಖಂಡಿತವಾಗಿಯೂ ಒಳಗೆ ಬಿಡಕೂಡ ದೆಂಬ ಅಂಶವನ್ನು ಇದರಲ್ಲಿ ಬರೆದಿರುವುದು,