ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩v ವ ಸ೦ ತ ಮಿ ತ್ರ ವಿ ಜ ಯ ನಾ ಟ ಕ ೦ . ನ ಸ ೦ ತ ಮಿ – ನ ಪ ವ ಶ . ವಸಂತಮಿತ್ರ, ಯಾರೋ ಮಾತನಾಡುವಂತಿದೆ. (ಅ ನೋಡಿ) ಇದೇನು ಇಲ್ಲಿ ಒಬ್ಬ ಕುಂಟನು ಕೂತಿರುವನು ! ಈ ಕುಟೀರದಲ್ಲಿ ಖುಷಿ ಇರಬಹುದೆಂದು ಭಾವಿಸಿದ್ದೆ. ಇವನ ಉಡುಪಿನಿಂದ ಈತನ ವೃತ್ತಿಯೇ ಬೇರೆಯಾಗಿರುವುದೆಂದು ಭಾವಿಸಬೇಕಾಗಿರುವುದು. ಒಳ್ಳೆದು, ಮರೆಯಾಗಿನಿಂತು ಈತನು ಆಡುವ ಮಾತುಗಳನ್ನು ಮೊದಲುಲಾಲಿಸಿ, ಅನಂತರ ಮುಂದಣಯೋಚನೆ ಮಾಡುವೆನು. (ಮರೆಯಾಗಿ ನಿಲ್ಲುವನು ) ಕುಂಟ. ಅಯ್ಯೋ ನೀತಳೆ, ಇನ್ನೂ ನೀನು ಬರಲಿಲ್ಲವೆ. ಸೌಗಂಧಿ ಕನನ್ನು ಮದುವೆ ಮಾಡಿಕೊಂಡೆಯೆಂದು ಕೇಳಿದೆ. ಅದರ ಅಹಂಕಾ ರದಿಂದಲೇ ನನ್ನನ್ನು ಮರೆತುಬಿಟ್ಟೆಯೋ ? ವಸಂತಮಿತ್ರ. ಈತನರೂಪು, ಆಡಿದಮೂತು ಇವುಗಳನ್ನು ಕೇಳಿ ದರೆ ಎಷ್ಟು ಸಂಕಟಕರವಾಗಿರುವುದು. ಈ ಕುರೂಪಿಯು ಆ ರಾಜನ ಮಗಳಾಗಿಯೂ, ನನ್ನಪ್ರಿಯಮಿತ್ರನ ಹೆಂಡತಿಯಾಗಿಯ -- © ನಾನು ಉಚ್ಚರಿಸಬಾರದು, ಈತನಿಂದ ಶಿಕ್ಷೆಯನ್ನು ಹೇಗೆತಾನೆ ಸಹಿಸಿಕೊಂಡಿರುವಳು ಸ್ತ್ರೀಯರ ವ್ಯಾಪಾರವು ಯಾರಿಗೆತಾನೆ ೨೪ ಯುವುದು. ಆ ಋಷಿಯು ಹೇಳಿದವನು ಇವನೇ ಆಗಿರಬಹುದೆ ? ಒಳ್ಳೇದು ಇನ್ನೂ ಕೇಳುವೆನು. (ಆನಂದವತಿಯು ತಟ್ಟೆಯಲ್ಲಿ ಫಲಹಾರದ ಸಾಮಗ್ರಿಗಳನ್ನು ತರುವಳು ) ಆನಂದವಾ, ಪ್ರಿಯನೆ ? ಹೊತ್ತುಮಾಡಿಕೊಂಡುಬಂದ ನನ್ನ ಅಸ ರಾಧವನ್ನು ಕ್ಷಮಿಸು. ಈ ಪಕ್ವಪದಾರ್ಥಗಳನ್ನು ಸ್ವೀಕರಿಸು. (ವಿನಯದಿಂದ ತಟ್ಟೆಯನ್ನು ಮುಂದಿಡುವಳು ) ವಸಂತಮಿತ್ರ. ಈಕೆಯ ವಿನಯವೂ ಆ ನೀತನಲ್ಲಿರುವ ವಿಶ್ವಾ ಸವೂ ಅನಿಶ್ವಕನೀಯವಾಗಿರುವುದು. (ನಿಟ್ಟು ಸುರು ಬಿಡು ಇನು ) ಕುಂಟ. ಛೇ, ಭಸ್ಮಳೆ ? ಹಸಿವಿನಿಂದ ತೊಳಲಿ ಬಳಲುತ್ತಿ ದ್ದಾಗ್ಯೂ ಯೋಚಿಸದೆ, ನಾನು ವ್ಯಥೆಪಡುವಂತೆ ಮಾಡಿದ ನಿನ್ನ ತಿಂಡಿಗಳಿಗೆ ಬೆಂಕಿಯನ್ನು ಹಾಕು. (ಒದೆಯುವನು )