ಪುಟ:ವಸಂತಮಿತ್ರ ವಿಜಯ ನಾಟಕಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತೀ ಯಾ 6 ಕ೦ . ೪ಬಿ. ಕುಂಟ, ಎಲೆ, ಪಾತಕಿ, ಮಾಯ .ತಿ, ನಿರಪರಾಧಿಯದ ಆ ರಾಜಕುಮಾರನನ್ನು ನನಗೋಸುಗ ಕೊಂದುಹಾಕುವೆಯy ? ವಸಂತಮಿತ್ರ, ದೈವಯೋಗದಿಂದ ಈತನಿಗೆ ಮರುಕವುಂಟಾ ಯಿತು ; ಏನುಹೇಳುವನೋ ಕೇಳುವೆನು. - ಕುಂಟ, ಎಲೆ, ನೀತಳೆ, ಇದುವರೆಗೆ ನನಗೆ ಸಕಾಲಕ್ಕೆ ಬಂದು ಊಟದಿಂದ ತೃಪ್ತಿ ಪಡಿಸುತ್ತಿದ್ದೆ. ಪತಿಯ ಪ್ರೀತಿಯೆಂಬ ಪುಸ್ಮವನ್ನು ಮುಡಿದು, ನಾಚಿಕೆಯೆಂಬ ಗಂಧವನ್ನು ಲೇಪಿಸಿಕೊಂಡು, ಸದ್ಗುಣ ಗಳೆಂಬ ಆಭರಣಗಳನ್ನಿಟ್ಟು ಕೊಂಡು, ಪತಿವ್ರತಾಧರ್ಮವೆಂಬ ಸೀರೆ ಯನ್ನುಟ್ಟು ಕಾಲವನ್ನು ಕಳೆಯುವವಳಿಗೆ ಸಮಾನರಾದವರು ಯಾರೂ ಇಲ್ಲ. ಆದುದರಿಂದ ದುರ್ಮಾರ್ಗಕ್ಕೆ ಮನಸ್ಸು ಕೊಡದೆ ಪತಿಯ ಪ್ರೀತಿಗೆ ಪಾತ್ರಳಾಗಿರು, ನಡೆ. ಆನಂದವು. ಏನುಹೇಳಿದೆ, ಮತ್ತೊಂದುಸಾರಿ ಹೇಳು ? ಕುಂಟ. ಪತಿಯನೆ ಕೊಲ್ಲುವುದಕ್ಕೆ ಉದ್ಯುಕಳಾಗಿರುವಾಗ್ಗೆ ನೀನು ನನ್ನನ್ನು ಬಿಡುವೆಯಾ ಎಂದು ಹೇಳಿದೆ. ಆನಂದವು, ಎಲೋ, ಕುಂಟನೆ, ನಿನ್ನ ಯೋಗ್ಯತೆಯನ್ನು ಈಗ ತೋರಿಸಿದೆಯಾ ! ನಿನಲ್ಲಿ ನನ್ನ ಪ್ರೀತಿಯನ್ನಿಟ್ಟು - ಖ್ಯದಿಂದಿರಬೇ ಕೆಂದು ಯೋಚಿಸಿ, ನನ್ನ ಕಸ್ಮವನ್ನು ಯೋಚಿಸದೆ ಈ ನಿಶಿದ್ದಲ್ಲ ಸುರಂಗಮಾರ್ಗವಾಗಿ ಬಂದು, ಆಹಾರವನ್ನು ತಂದುನಿ ನ್ನನ್ನು ತೃಪ್ತಿ ಗೊಳಿಸುತ್ತಿದ್ದರೂ ಕೊನೆಗೆ ಇಂತಹ ಮೋಸ ಮಾಡಿದೆಯಾ ! ಹೆಂಗ ಸರು ಸೌಖ್ಯಕ್ಕೆ ಆಶೆ ಪಟ್ಟು ಪತಿಯನ್ನು ತ್ಯಜಿಸಿ, ಪರಪುರುಷನಲ್ಲಿ ನಿಜವಾದ ವಿಶ್ವಾಸವಿದ್ದಾಗ್ಯೂ, ಆತನು ಆಕೆಯು ತೋರಿಸುವ ಕಾರ್ ವೆಲ್ಲಾ ಕೃತೃಮಗಳೆಂದು ಭಾವಿಸಿ, ಹೆಂಗಸರನ್ನು ನಂಬಿಸಿ ಕೊನೆಗೆ ಮೋಸಪಡಿಸುವನೆಂದು ಹೇಳುವುದಕ್ಕೆ ನೀನೇ ದೃಷ್ಟಾಂತವು. ವಸಂತಮಿತ್ರ, ಕುಂಟನು ಈ ರಾಕ್ಷನಿಗೆ ಹೆದರಿಕೊಂಡು ಒಪ್ಪಿ ಕೊಳ್ಳುವನೊ, ಕುಂಟನಾಗಿದ್ದರೂ ತನ್ನ ಪೌರುಷವನ್ನು ತೋರಿಸು ವನೋ ಕಾಣೆ,