ಪುಟ:ವಸಂತಮಿತ್ರ ವಿಜಯ ನಾಟಕಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತೀ ಯಾ ೦ ಕ ೦. ಕುಂಟ. ನಿನ್ನ ಮನೋವ್ಯಾಕುಲವು ಈಗಲೇ ನಾಶವಾದೀತೆ. ಆನಂದವತಿ, ಕೊನೆಗೂ ನಿನ್ನ ಹಠವನ್ನು ಬಿಡುವುದಿಲ್ಲವೋ ? ನೀಚನೆ. ಇದೊ, ಈ ವಸ್ತ್ರದಿಂದಲೇ ನಾನು ನೇಣುಹಾಕಿಕೊಂಡು ಗಟ್ಟಿಯಾಗಿಕೂಗಿ ನನ್ನನ್ನು ಮಾನಹಾನಿಗೈಯಲು ಬಂದಿರುವ ನೆಂದುಹೇಳಿ ನಿನ್ನ ಪ್ರಾಣವನ್ನು ತೆಗೆಯಿಸುವೆನು ನೋಡು. (ಎಂದು ನೇಣುಹಾಕಿಕೊಳ್ಳುವುದಕ್ಕೆ ಪ್ರಯತ್ನಿ ಸುವಳು.) . ವಸಂತಮಿತ. ಈಗ ಈ ಕುಂಟನು ಸುಮ್ಮನಿದ್ದರೆ ಲೋಕ ಕೈಲ್ಲಾ ಉಪಕಾರವನ್ನು ಮಾಡಿದಂತಾಗುವುದು, ಕುಂಟ ಏನುತಾನೆಮಾಡಲಿ, ಹಾಳಾದಮನಸ್ಸು ಮುಂದಕ್ಕೆ ಹೋದರೂ ಈ ದೇಹವು ಕೂತಕಡೆಯಲ್ಲಿಯೇ ಇರಬೇಕಾಗಿರುವು ದಲ್ಲ. ಹಾ, ದೇವರೆ, ನಾನು ಹಿಂದೆಮಾಡಿದ ಪಾಪಕೃತ್ಯಕ್ಕೆ ನಾನು ಇಂತಹ ವೃತ್ತಿಯನ್ನಾಚರಿಸಿಕೊಂಡಿರುವಂತೆ ಮಾಡಿರುವುದಲ್ಲದೆ, ಈಕೆಯ ಕೋಪಾಗ್ನಿಯಲ್ಲಿ ಬಿದ್ದು ಪ್ರಾಣಬಿಡುವಂತೆ ಮಾಡುವೆಯೊ ಕಾಣೆನಲ್ಲ. ಪ್ರಿಯೆ, ನಾನು ಇದುವರೆಗೂ ಆಡಿದ ಮಾತುಗಳು ನಿಜ ವೆಂದುನಂಬಿ ಇಂತಹ ಘೋರಕೃತ್ಯಕ್ಕೆ ಪ್ರಯತ್ನಿಸುವರೆ ? ಇದೇನೋ ನಿನ್ನ ಪ್ರೀತಿಯು, ಚೆನ್ನಾಯಿತು ! ಚೆನ್ನಾಯಿತು !! ಈಗ ನಿನಗೆ ನನ್ನಲ್ಲಿ ವಿಶೇಷ ಪ್ರೀತಿಯಿರುವುದೆಂದು ಗೊತ್ತಾಯಿತು. ನಾನು ನಿನ್ನನ್ನು ನಿರಾ ಕರಿಸಿದ ಅಪರಾಧವನ್ನು ಕ್ಷಮಿಸು. ಆನಂದ. ಮಾರನೇಳಿಗೆನಾಂ ! ಸಾರಿಬಂದಿಹೆನು !! ಪೀರುಕೆಂದುಟಿಯ 1 ಸಾರವನೀರನೆ | ೩ || ಕುಂಟ, ಸುಗುಣನೆಂದುನಾ ! ಬಗೆಯದಿ೦ತುನುಡಿವೆ || ಜಗವುನಿನ್ನ ನೋಡಿ ನಗರೆಪೇಳೆ ಸೂಳೆ ! ೪|| ಆನಂದ, ನಾಗವೇಣಿನಾನು ಭೋಗಭಾಗ್ಯವಿತ್ತು | ನೀಗಿದುಃಖ ನನ್ನು ' ರಾಗದಿಂದಪೊರೆವೆ || ೫ || ಕುಂಟ. ಕಾಂತನಲ್ಲ ನಾನು | ಇಂತುಕಾಡಿನಿರದು | ವೆಂತುಸೇರುವೆನೀ | ಭ್ರಾಂತಚಿತ್ತೆ ಪೋಗು | ೬ || ಆನಂದ. ಹೇಯವಚನವಾಡಿ 1 ಶ್ರೇಯವೆಂತುತಾಳೆ ! ಮಾಯದಿಂದ ನಿನ್ನ ! ಬಾಯಬಿಡಿಸುವೆ | ||