ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತೀ ಯಖ ೦ ಕ೦ ಕಂದ | ಇಹಸುಖ ಮಿದುನೀರಸವೆಂ ದಹಹಾ ಮುಂಗನಾಪ್ರಿಯಂ ನೀನಾಗಿ ವಿಹಿತರ್ಗುಪಕೃತಿ ಗೆಯುಜವ | ಮಹಿಮಾಮೃತರ್ಕಮ ನೀಂಟಿಸುತ್ತಂ ಪೋದ್ದೆ |೩೫ ಪ್ರಾಣವನ್ನಾದರೂ ಕಳೆದುಕೊಳ್ಳಲೆ ? ವಸಂತಮಿತ್ರ, ಪ್ರಾಣವನ್ನು ತೆಗೆಯಿಸುವಳೇ ಹೊರತು, ತಗೆದು ಕೊಳ್ಳುವೆಯಾ ? ರಾಜಹಂಸ ಭೀ ನೀಚನೆ, ಬಾಯಿಮುಚ್ಚು ಕೊ.(ಶವವನ್ನು ನೋಡಿ) ಅಯ್ಯೋ, ರೂಪವಂತನಾಗಿಯೂ, ಯೌವನಸ್ಥನಾಗಿಯೂ, ರಾಜಕು ಮಾರನಾಗಿಯೂ ಇರುವ ನಿನಗೆ ಇಂತಹ ಮರಣವು ಪ್ರಾಪ್ತವಾಗ ಬಹುದೆ ? ವಸಂತಮಿತ್ರ. ಇದಕ್ಕಾಗಿಯೇ ನಾನು ಚಿಂತಿಸುತ್ತಿರುವನು. ಸುನೀತಿ, ಮಹಾರಾಜನೆ, ನಿಮ್ಮಂಥವರೇ ಹೀಗೆ ಚಿಂತಿಸುವಲ್ಲಿ ಯಾರುತಾನೆ ಸಂತೈಸುವರು. ಕಕಾಲದಲ್ಲಿ ಧೈಯ್ಯವನ್ನು ತಂದು ಕೊಳ್ಳುವುದೇ ಉತ್ತಮವು, ಸಮಾಧಾನಚಿತ್ತರಾಗಿ, ತಮ್ಮ ಕುಮಾ ರಿಯನ್ನು ಸಂತೈಸಿದಾದುದರೆ ಮುಂದಿನ ಕಾವ್ಯಗಳನ್ನು ಯೋಚಿಸ ಬೇಕಲ್ಲವೆ ? ರಾಜಹಂಸ, ಕುಮಾರಿಯೆ, ಚಿಂತಿಸಬೇಡ. ನಿನ್ನ ಮೃತ್ಯುವು ಈ ನೀಚನ ರೂಪವಾಗಿ ಬಂದು ಹೀಗೆ ಮಾಡಿತು. ಮಾಡತಕ್ಕುದೇನು ? ಅಂತಃಪುರಕ್ಕೆ ತರಳು. ನಾನು ಈತನ ಉತ್ತರಕ್ರಿಯಾದಿಗಳನ್ನು ನಡೆಸುವೆನು. (ಮಗಳನ್ನು ಕಳುಹಿಸಿದಮೇಲೆ ಮಂತ್ರಿಯನ್ನು ನೋಡಿ) ಮಂತ್ರಿಯೆ, ಈ ನೀಚನು ಯಾರೆಂದು ವಿಚಾರಿಸು. ಸುನೀತಿ, ಸೇವಕರಿರಾ, ಅವನನ್ನು ಇಲ್ಲಿಗೆ ಕರೆದುಕೊಂಡು ಬನ್ನಿರಿ, ಸೇವಕರು, ಎಲೊ, ಪಾಪಿ, ಮುಂದೆನಡೆ, (ಎಂದು ತಳ್ಳಿಕೊಂಡು ಬರುವರು, ವಸಂತಮಿತ್ರ, ನಿಜ. ನಾನು ಪಾಪಿಯಾದುದರಿಂದಲೇ ಅಮೋಘ ವಾದ ವಸ್ತುವನ್ನು ಕಳೆದುಕೊಂಡು ಬಾಯಿಬಾಯಿಬಿಡುತ್ಯಾ, ನಿಮ್ಮ ಕೋಪಕ್ಕೆ ಆಹುತಿಯಾಗಬೇಕಾಗಿಬಂದಿದೆ.