ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ ೦ ತ ಮ ತ ವಿ ಜ ಯ ನಾ ಟ ಕ ೦. ರಾಜಹಂಸ ನೀಚನೆ ? ನಿರಪರಾಧಿಯಾದ ನನ್ನ ಅಳಿಯನನ್ನು ಏಕೆ ಕೊಂದುಹಾಕಿದೆ, ಬೇಗಹೇಳು ? ವಸಂತಮಿತ್ರ, ಮಂತ್ರಿವಯ್ಯರೆ ? ನನ್ನನ್ನು ವಿಚಾರಿಸಿದರೆ ದುಃಖವು ಇನ್ನೂ ಹೆಚ್ಚುವುದು, ಆದುದರಿಂದ ವಿಚಾರಿಸತಕ್ಕದ್ದಲ್ಲ. ತಡೆಮಾ ಡದೆ ನನ್ನನ್ನು ಎಂದಿಗೆ ಮರಣದಂಡನೆಗೆ ಗುರಿಮಾಡಿದರೆ ಅಂದಿಗೆ ನನ್ನ ಪೂರ್ಣದುಃಖವು ನಿವರ್ತಿಯಾಗುವುದು, ಸುನೀತಿ. ಮಹಾರಾಜನೆ ? ಈತನನ್ನು ನೋಡಿದರೆ ರಾಜಲಕ್ಷಣ ಸಂಪನ್ನನಾಗಿರುವಂತೆ ಕಾಣಿಸುವನಲ್ಲದೆ, ತಾನಾಗಿಯೇ ಪ್ರಾಣ ಬಿಡುವುದಕ್ಕೆ ಒಪ್ಪಿ, ಶಿಕ್ಷೆಯನ್ನು ವಿಧಿಸಬೇಕೆಂದು ವಿನಯದಿಂದ ಬೇಡಿಕೊಳ್ಳುವುದಕ್ಕೆ ಕಾರಣವೇನು ? (ವಸಂತಮಿತ್ರನಕಡೆಗೆ ತಿರುಗಿ) ಅಯ್ಯ ನೀನುಯಾರು ? ವಸಂತಮಿತ್ರ. ನಾನೊಬ್ಬ ಚೂರನು, ಕೇಳಿ ಪ್ರಯೋಜನವಿಲ್ಲ. ಸಾವಕಾಶಮಾಡದೆ ತಮ್ಮ ಕರ್ತವ್ಯವನ್ನು ನಡೆಸಬಹುದಲ್ಲವೆ ? ರಾಜಹಂಸ, ಇದು ಹಾಗಿರಲಿ. ಮೊದಲು ನೀನು ಇಲ್ಲಿಗೆ ಬಂದುದು ಹೇಗೆ ? ನಿಜವಾಗಿ ಹೇಳಿದರೆ ಕ್ಷಮಿಸಿಬಿಡುವೆವು. , ವಸಂತಮಿತ್ರ, ಪ್ರಭುವೆ, ಕಳ್ಳರೂ, ಕೊಲೆಪಾತಕರೂ, ಅಗೂ ತರವಾಗಿ ಬರುವರೆಂದು ತಮಗೆ ತಿಳಿದ ಅಂಶಯವಿಲ್ಲ. ಇಂತಹ ಕಳ್ಳನಾಗಿಯೂ, ಕೊಲೆಪಾತಕನಾಗಿಯೂ ಇರುವ ನಾನು ಬಂದ ದಾರಿಯನ್ನು ಏಕೆ ಕೇಳುವಿರಿ ? ರಾಜಹಂಸ, ಒಳ್ಳೇದು, ಈತನನ್ನು ಏಕೆ ಕೊಂದೆ ಬೇಗಹೇಳು ? ವಸಂತಮಿತ್ರ, ಆಶೆಯಿಲ್ಲದೆ ಯಾರಾದರೂ ಹಣ್ಣನ್ನು ಮರದಿಂದ ಕಿತ್ತು ರುಚಿ ನೋಡುವರೆ ? ಸುನೀತಿ. ಮಹಾರಾಜನೆ, ಈತನ ಮಾತು ಉಡುಪು, ಮರಣ ದಂಡನೆಗೆ ಗುರಿಪಡಿಸಬೇಕೆಂದು ಬೇಡಿಕೊಳ್ಳುವುದು ಇವುಗಳನ್ನು ಪರಾಲೋಚಿಸಿದುದಾದರೆ, ನನಗೆ ತುಂಬ ಸಂಶಯವಾಗುವುದು. ಇದನ್ನು ಚೆನ್ನಾಗಿ ಪರೀಕ್ಷಿಸತಕ್ಕುದಾಗಿದೆ. ಇದರಮೇಲೆ ತಮ್ಮ ಚಿತ್ರ, ರಾಜಹಂಸ, ಅಯ್ಯ, ನಮ್ಮ ಅಳಿಯನನ್ನು ಕೊಲ್ಲುವುದಕ್ಕೆ ನಿನ್ನ ಕೈ ಹೇಗೆಬಂತು,