ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತೀ ಯಾ ೦ ಕ ೦. ೫ ವಸಂತಮಿತ್ರ, ಸ್ವಾಮಿ, ಮನಸ್ಸಿಗೆ ಒಡಂಬಡದ ಕಾರವನ್ನು ಒಂದುವೇಳೆ ಕೈಗಳೂ ಮಾಡುವುದುಂಟಲ್ಲವೆ ? ಆತನ ವಿಧಿಯೇ ನನಗೆ ಪ್ರೇರಕನು. ಆತನ ಮರಣಕ್ಕೆ ಕಾರಣವನ್ನು ಕೇಳಬೇಕೆಂದಿ ದ್ಗು ದಾದರೆ ನಾಳೆದಿವಸ ರಾತ್ರಿ ಹನ್ನೆರಡುಗಂಟೆಯಲ್ಲಿ ತಮ್ಮ ಮಂತ್ರಿ ಯೊಡನೆ ಬಂದುದಾದರೆ ಎಲ್ಲಾ ವಿಧವಾಗಿ ತಿಳಿಯುವುದು. ಆದರೆ ಈ ಶವವನ್ನು ಅದುವರೆಗೂ ದಹನ ಮಾಡಕೂಡದೆಂದು ಬೇಡಿ ಕೊಳ್ಳುವೆನು. - ಸುನೀ, ಮಹಾರಾಜನೆ ? ಈತನಾಡಿದ ಮಾತುಗಳನ್ನು ಕೇಳಿದ ರಸ್ಟ್, ಮೊದಲು ಈತನನ್ನು ಕಾರಾಗೃಹಕ್ಕೆ ಕಳುಹಿಸಿದಮೇಲೆ ಸ್ವಲ್ಪ ಮಾತನಾಡಬೇಕಾಗಿದೆ. - ರಾಜಹಂಸ ಯಾರಲ್ಲಿ. (ಸೇವಕರು ಬರುವರು.) ಈ ಶವವನ್ನು ಜೋಪಾನವಾಗಿ ಒಂದು ಸ್ಥಳದಲ್ಲಿ ಇಟ್ಟಿರಿ. ಈತನನ್ನು ಕಾರಾಗ್ಯ ಹಕ್ಕೆ ಸೇರಿಸಿ. (ವಸಂತಮಿತನನ್ನು ಕಾರಾಗೃಹಕ್ಕೆ ಕರೆದುಕೊಂಡು ಹೋಗುವರು.) . ಸುನೀತಿ, ತನ್ನ ಮಗಳ ಗಂಡನನ್ನು ಕೊಂದು ಆತನಮೇಲೆ ಯಾಕೆ ಹೇಳಿರಬಾರದು ? ರಾಜಹಂಸ, ಹೆಂಡತಿಯೇ ಗಂಡನನ್ನು ಕೊಲ್ಲುವುದುಂಟೆ ? ಸುನೀತಿ, ಈ ಕಲಿಯುಗದಲ್ಲಿ ನಡೆಯದ ಕಾರಗಳಾವದಿರು ವುದು. ಗಂಡನು ಸ್ಪುರದ್ರೂಪಿಯಾಗಿದ್ದರೂ ಹೆಂಡತಿಗೆ ಆತನಮೇಲೆ ಅನುರಾಗವಿಲ್ಲದಿದ್ದರೆ, ಅವನನ್ನು ತಿರಸ್ಕರಿಸಿ, ತನ್ನ ಪ್ರೀತಿಯನ್ನು ಪರಪುರುಷನಲ್ಲಿಡುವುರು. ಇದು ಆಂತರದವಿಚಾರವು, ರಾಜಹಂಸ ಮಂತ್ರಿಯೆ, ಶೈಯಾಗಾರಕ್ಕೆ ಯಾವಾಣಿ ಪ್ರವೇಶಿಸುವುದಕ್ಕೆ ಮಾರ್ಗವೇಇಲ್ಲವಲ್ಲ. - ಸುನೀತಿ, ನಮಗೆ ಅಸಾಧ್ಯವಾದ ಕಾವ್ಯಗಳನ್ನು ಸ್ತ್ರೀಯರು ನಡೆ ಸುವರೆಂದು ನಾನು ಮೊದಲು ಹೇಳಿದನಲ್ಲವೆ? ಆದುದರಿಂದ ತಮ್ಮ ಮಗಳೆಂಬ ಭ್ರಾಂತಿಯನ್ನು ಬಿಡಬೇಕು. ನೀಚ ಹೆಂಗಸರನ್ನು ಎಂತಹ ನಿರ್ಬಂಧದಲ್ಲಿಟ್ಟಿದ್ದಾಗ ಜಾತಿಧರ್ಮಕ್ಕೆ ಮೀರಿ ಮನಸ್ಸಿನ ಲ್ಲಾಗಲಿ, ಕಾರದಲ್ಲಾಗಲಿ, ಮಾತಿನಲ್ಲಾಗಲಿ, ಕೆಟ್ಟ ಯೋಚನೆಗೆ