ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೪ ನ ಸ ೦ ತ ವಿ ಶ್ರೀ ವಿ ಜಿ ಯ ನಾ ಟ ಕ ೦ • ಸುನೀತಿ, ಮಹಾರಾಜನೆ, ಈತನು ನಿದ್ರೆ ಮಾಡುತ್ತಿರುವನಲ್ಲವೆ, ಇದರಿಂದಲೇ ಇವನ ಯೋಗ್ಯತೆಯು ಚೆನ್ನಾಗಿ ತಿಳಿದುಬರುವುದು. ಹೇಗೆಂದರೆ, ಮುಖ್ಯವಾಗಿ ಕಾಮುಕರಿಗೂ, ಜೂಜುಗಾರರಿಗೂ, ಕಳ್ಳರಿಗ, ಮತ್ತು ಕೊಲೆಪಾತಕರಿಗೂ ಶುದ್ಧಾಂಗವಾಗಿ ನಿದ್ರೆಯು ಬರುವುದಿಲ್ಲ. ನಿರ್ದೋಷಿಗಳಾಗಿ, ನಿರಾಳ ಮನಸ್ಸುಳ್ಳವರಿಗೆ ಮಾತ್ರ ನಿದ್ರೆಯು ಬರುವುದು. ಇದರಿಂದ ಈತನು ತಪ್ಪಿತಸ್ಥನಲ್ಲವೆಂದು ಚೆನ್ನಾಗಿ ತೋರಿಬರುವುದು. ಹಾಗೆ ನಿಜವಾಗಿಯೂ ತಮ್ಮ ಅಳಿಯ ನನ್ನು ತಾನೇ ಕೊಂದೆನೆಂದು ಒಪ್ಪಿಕೊಂಡಮೇಲೆ, ಶಿಕ್ಷೆಗೆ ಗುರಿಪಡಿ ಸುವೆವೆಂದು ಹೇಳಿದುದನ್ನು ಕೇಳಿದಮೇಲೆಯೂ ನಿದ್ರೆಯು ಬರುವ ದುಂಟೆ ? ಈತನಲ್ಲಿ ಏನೋ ವಿಶೇಷವಿರುವಂತಿದೆ. ಚೆನ್ನಾಗಿ ಬೊ ಚಿಸತಕ್ಕುದಾಗಿರುವುದು. ಇದರಮೇಲೆ ತಮ್ಮ ಚಿತ್ರ, ರಾಜಹಂಸ, ಮಂತ್ರಿಯೆ, ನಿನ್ನ ಯೋಚನೆಯು ಸ್ತೋತ್ರಾರ್ಹ ವಾದುದೇ ಸರಿ. ಒಳ್ಳೇದು ಈತನನ್ನು ಎಬ್ಬಿಸು, ಕೇಳಿನೋಡೋಣ. ಸುನೀತಿ, ಅಯ್ಯ, ಪರದೇಶಿಯೆ, ಏಳು, ಏಳು, ಮಹಾರಾಜರು ಬಂದಿದಾರೆ. ವಸಂತಮಿತ್ರ, (ಕಣ್ಣುಗಳನ್ನು ತಿಕ್ಕುತ್ತಾ) ಮಹಾರಾಜರಿಗೆ, ವಂದಿ ಸುವೆನು. ಸ್ವಾಮಿ ಈಗ ಎಷ್ಟು ಹೊತ್ತಾಗಿರುವುದು ? - ರಾಜಹಂಸ, ಅರ್ಧರಾತ್ರಿಯಾಗಿರುವುದಲ್ಲವೆ ! ಎಲ್ಲಾ ಕಡೆಯ ಲ್ಲಿಯೂ ನಿಶ್ಯಬ್ದವಾಗಿರುವುದು. ವಸಂತಮಿತ್ರ, ಸ್ವಾಮಿ, ಹೆದರದೆ ನನ್ನ ಜತೆಯಲ್ಲಿಯೇ ಬರ ಬೇಕು. ನಾನು ತಮ್ಮನ್ನು ನಿಲ್ಲಿಸಿದ ಸ್ಥಳದಲ್ಲಿ ಕ್ರೋಧವಾದ ಮಾತು ಗಳು ಕಿವಿಗಳಿಗೆ ಬಿದ್ದಾಗ ಕೋಪಿಸಿಕೊಳ್ಳದೆ, ದಂಡಿಸುವುದಕ್ಕೆ ಹೋಗದೆ, ಕೋಧವೆಂಬ ಮದ್ದಾನೆಗೆ ವಿವೇಕವೆಂಬ ಅಂಕುಶದಿಂದ ಶಿಕ್ಷಿಸುತ್ತಿರಬೇಕು. ಹಾಗಿಲ್ಲದಿದ್ದರೆ, ಮುಂದಿನ ಕಾವ್ಯಗಳನ್ನು ನಡೆಸುವುದಕ್ಕೂ, ವಿಷಯೆವಿಮರ್ಶೆಗೂ, ಅವಕಾಶವಾಗಲಾರದೆಂದು ಬೇಡಿಕೊಳ್ಳುವೆನು. ಸುನೀತಿ, ಈತನು ಹೇಳುವುದು ಸಮ್ಮತವಾದುದಾಗಿದೆ.