ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃ ತೀ ಯಾ ೦ ಕ ೦. ಕುಂಟ. ಪ್ರಿಯೆ, ನೀನು ನಿನ್ನೆ ದಿವಸ ಹೇಳಿದ ಆ ನಿನ್ನ ಪತಿಯನ್ನು ಏನುಮಾಡಿಬಂದೆ ? ವಸಂತಮಿತ್ರ. ಇದೆ, ಕೇಳತಕ್ಕ ವಿಷಯವನ್ನು ಚೆನ್ನಾಗಿ ಲಾಲಿಸಬೇಕು, ಆನಂದವತಿ ಮಾಡುವುದೇನು, ನಿನ್ನ ಸಂಗಡ ಹೇಳಿದಂತೆ ಅವ ನನ್ನು ಯಮನಪುರಿಗೆ ಕಳುಹಿಸಿ ಬಂದಿರುವೆನು. ವಸಂತಮಿತ್ರ, ಮಹಾರಾಜನೇ ಚೆನ್ನಾಗಿ ಕೇಳಿದಿರ ? ರಾಜಹಂಸ, ಅಯ್ಯೋ, ಪರಮ ಪಂಡಾಲಳೆ ನಿನ್ನ ನಿಷ್ಕರುಣವೆ ಪೈಂದು ಹೇಳಲಿ, ನವಮನ್ಮಥನಂತಿದ್ದ ನಿನ್ನ ಪತಿಯನ್ನು ಕೊಂದೆ ನೆಂದು ಹೇಳುವ ನಿನ್ನ ನಾಲಿಗೆಯು ಏಕೆ ಹಾಳಾಗಲಿಲ್ಲ ? (ವಸಂತ ಮಿತ್ರನನ್ನು ನೋಡಿ.) ಅಯ್ಯಾ, ಇನ್ನು ನಾನು ಸಹಿಸಲಾರೆನು. ಈಗಲೇ ಕೊಲ್ಲುವುದು ನಿಜ. ವಸಂತಮಿತ್ರ, ಮಹಾರಾಜನೆ, • ಪೂರ್ತಿಯಾಗಿ ಕೇಳಲೂ ಇಲ್ಲ. ನೋಡಲೂ ಇಲ್ಲ. ಸ್ವಲ್ಪ ತಾಮಸ ಮಾಡಬೇಕು. ಕುಂಟ, ಪ್ರಿಯೆ, ಗಂಡನನ್ನು ಕೊಂದರೀತಿ ಹೇಗೆ ? ವಸಂತಮಿತ್ರ, ರಾಜನೆ, ಕೊಂದವಿಷಯವೆಲ್ಲಾ ಈಗ ವಿಶದವಾಗಿ ತಿಳಿಯುವುದು ಉಾಲಿಸಬೇಕು. ಆನಂದವ. ಮೋಹನಾಂಗನೆ, ಇಲ್ಲಿ ನಿನ್ನ ಸಂಗಡ ಹೇಳಿಹೋದ ನಂತರ ಕೈಯ್ಯಾಗಾರವನ್ನು ಸೇರಿ, ಅಲ್ಲಿ ಸಕಲವಿಧವಾದ ಪದಾರ್ಥ ಗಳಲ್ಲಿಯ ವಿಸತೂರ್ಣವನ್ನು ಬೆರಸಿಕೊಡಲು ನನ್ನ ಪ್ರಿಯನು ಯಾವದನ್ನೂ ತೆಗೆದು ಕೊಳ್ಳಲಿಲ್ಲ. ವಸಂತಮಿತ್ರ ಧರಣೀಶನೆ, ನಾನು ಇಲ್ಲಿಯೇ ಇದ್ದಾಗ್ಗೆ, ಈಕೆಯು ಹೇಳಿದವಿಷಯಗಳೆಲ್ಲಾ ಅಲ್ಲಿ ನಿಜವಾಗಿಯೂ ನಡೆದ ಕೃತ್ಯಗಳೇಸರಿ, ರಾಜಹಂಸ, ಪಾತಕಿಯೆ, ನಿರಪರಾಧಿಯಾದ ಆ ಸುಂದರಾಂಗ ನನ್ನು ಕೊಂದ ಸಂಗತಿಯನ್ನೇನೆಂದು ಬೊಗುಳುವೆ, ನಿನಗೆ ಇನ್ನೂ ಸಾವು ಏಕೆ ಬರಲಿಲ್ಲ ? ಕುಂಟ. ಅನಂತರ ಏನು ಮಾಡಿದೆ ?