ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ಮಿ ತ ವಿ ಜಿ ಯ ನಾ ಟ ಕ ೦ . ಆನಂದವ. ಅಯ್ಯೋ, ಪ್ರಾಣಕಾಂತನಾದ ಸೌಗಂಧಿಕನೆ, ಬಹು ಕಾಲನಿನ್ನ ಸಂಗಡ ಸಂತೋಷದಿಂದಿರಬೇಕೆಂದು, ಅಗ್ನಿ ಸಾಕ್ಷಿಯಾಗಿ ಮದುವೆ ಮಾಡಿಕೊಂಡು ಸುಂದರಾಂಗನಾದ ನಿನ್ನನ್ನು ಅನ್ಯಾಯ ವಾಗಿ ಕೊಂದೆನಲ್ಲ. ನನ್ನ ಆಶೆಯು ನಿಪ್ಪಲವಾಯಿತು. ಅಯ್ಯೋ, ನಿರಪರಾಧಿಯಾದ ಸೌಗಂಧಿಕನೆ. ೧ನೇಯವನು ಕೇಳಿದಿರಾ, ಈ ನೀತಳು ನಹತ್ಯವನ್ನು ಮಾಡಿ ರುವಳಲ್ಲ! ಅಯ್ಯೋ, ನೀಲಕಳೆ, ರಾಜಪುತ್ರಿಯಾಗಿ ನಿನಗಿ೦ತಹ ದುರ್ಬುದ್ದಿಯುಂಟಾಗಬಹುದೆ? ಅದಕ್ಕೆ ಈಗ ಸಫಲವಾಯಿತು. (ಹೊಗುವರು ) ಸ್ಥಾನ ೩. ಅಂತಃಪುರ. ರಾಜಹಂಸನೂ, ಸುನೀತಿಯೂ ಕೂ?ರುವರು. (ವಸಂತಮಿತ್ರನ ಪ್ರವೇಶ ) ವಸಂತಮಿತ್ರ, ಭೂಪಾಲನೆ, ತನ್ನ ಅಳಿಯನನ್ನು ನಾನು ಕೊಂದೆ ನೆಂದು ಭಾವಿಸುವುದಾದರೆ ಶಿಕ್ಷೆಗೆ ಸಿದ್ಧನಾಗಿರುವೆನು, ರಾಜಹಂಸ ನಿರಪರಾಧಿಯಾದ ನಿನ್ನನ್ನು ಕೊಂದು ಮಹಾಪಾತಿ ಥ್ಯಕ್ಕೆ ಗುರಿಯಾಗುತ್ತಿದ್ದೆನಲ್ಲ. ಕ್ಷಮಿಸು. ನೀನು ಏನು ಹೇಳಿದರೂ ಅದರಂತೆ ನಡಿಸಿಕೊಡುವೆನು. ನೀನು ಯಾರು, ಇಲ್ಲಿಗೆಬರಲು ಕಾರಣವೇನು ? ವಸಂತಮಿತ್ರ. ರಾಜನೆ, ನನಗೆ ಪ್ರಾಪ್ತವಾಗಿರುವ ಕಸ್ಮಗಳಲ್ಲಿ ಇದು ದೊಡ್ಡದಲ್ಲ. ನಾನು ನಿಮ್ಮ ಅಳಿಯನಾದ ಸೌಗಂಧಿಕನ ಮಂತ್ರಿಯು. ಸುನಿತಿ ಹಾಗಿಲ್ಲದಿದ್ದರೆ ಇಂತಹ ಬುದ್ದಿಯಿರುವುದೆಂದರೇನು? ವಸಂತಮಿತ್ರ, ಸ್ವಾಮಿ, ಒಬ್ಬ ವೇಶ್ಯಾಂಗನೆಯ ದೆಶೆಯಿಂದ ನಮ್ಮಿಬ್ಬರಿಗೂ ಪರಸ್ಪರ ವೈಷಮ್ಯವುಂಟಾಗಿ, ಕೊನೆಗೆ ನಾನು ಆ ನೀತಳ ದೆಸೆಯಿಂದಲೇ ರಾಜ್ಯಭ್ರಷ್ಟನಾದೆನು. ಆದರೂ ಅಡವಿಯಲ್ಲಿ ಅಲೆಯುತ್ಯಾ ಮಾಂಡವಖವಿಗಳ ಆಶ್ರಮವನ್ನು ಸೇರಿದೆನು.