ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತ್ಯ ತಿ ಯಾ ೦ ಕ ೦ . ೬೩ ಸುನೀತಿ, ವಿವೇಕ ಹೇಳುವವರಗತಿಯಲ್ಲಾ ಹೀಗೆಯೇ ಅಲ್ಲವೆ? ಆದುದರಿಂದ ವಿವೇಕಿಗಳು ಹೇಳುವ ಬುದ್ದಿ ವಾದಗಳನ್ನು ಕೇಳಬೇ ಕೆಂದು ಹೇಳುವುದಕ್ಕೆ ಇದು ಒಂದು ದೃಷ್ಟಾಂತವಾಗಿರುವುದು, ವಸಂತಮಿತ್ರ. ಅನಂತರ ಸೌಗಂಧಿಕನಿಗೆ ಮದುವೆಯಾಗುವು ದೆಂದು ಆ ಮಹಾತ್ಮರು ಹೇಳಿದುದರಿಂದ, ನಾನು ಹುಡುಕಿಕೊಂಡು ಈ ಸ್ಥಳಕ್ಕೆ ಬಂದರೆ ಕಾವಲುಗಾರರು ನನ್ನನ್ನು ಕೋಟೆಯೊಳಗೆ ಬಿಡಲಿಲ್ಲ. ರಾಜಹಂಸ, ನಿನ್ನನ್ನೇನೋ, ಸುನೀತಿ, ಈತನನ್ನೇ ಬಿಡಕೂಡದೆಂದು ಆಜ್ಞೆಯಾಗಿತ್ತು, ವಸಂತಮಿತ್ರ, ಸ್ವಾಮಿ, ಅನಂತರ ಖುಷಿವಾಕ್ಯದಂತೆ ಆ ಕುಟ ರದವಳಿಗೆ ಎಂದು ನೋಡಲು, ಅಲ್ಲಿ ತಮ್ಮ ಕುಮಾರಿಗೆ ಕಾಣಿಸಿ ಕೊಳ್ಳದೆ, ಹಿಂದೆಯೇ ಹೋಗಿ, ವೈಯ್ಯಾಗೃಹದಲ್ಲಿ ಮಲಗಿದ್ದ ನನ್ನ ಪರಮಮಿತ್ರನನ್ನು ಈ ಹಾಳೆ, ಕಣ್ಣುಗಳಿಂದ ನೋಡಿ, ಕೊನೆಗೆ ಮರಣವಾದುದನ್ನೂ ನೋಡಿದೆನು. ಇದೇ ನನ್ನ ಚರಿತ್ರೆಯು, - ಸುನೀತಿ. ಆಹಾ! ಮಿತ್ರತ್ವವೆಂಬುದು ಇದೇಅಲ್ಲವೇ, ಅವನನ್ನು ಹುಡುಕಿಕೊಂಡು ಬಂದು, ತನ್ನ ಕಸ್ಮವನ್ನು ಅಕ್ಷೀಕರಿಸದೆ, ಸಾಧ್ಯ ವಾದರೆ ಸ್ನೇಹಿತನನ್ನು ಕಾಪಾಡಬೇಕೆಂದು ಹೇಳಿ, ತನ್ನ ಪ್ರಾಣಹಾ ನಿಗೂ ಭಯಪಡದೆಗೈಯ್ಯದಿಂದ ಇದ್ದೆಯಲ್ಲ. ಅಯ್ಯಾ, ನೀನೇಮಿತ್ರನು. ವಿಧಿಯೆ, ನೀನು ಯಾರನ್ನು ತಾನೆ ಕಕ್ಕೆ ಈಡಾಗಿಸದೆ ಬಿಟ್ಟಿರುವೆ? ಕಂದ || ವಿಧಿವಶನಾಗಿಸಾಧನ ನದೆಂತುರೆದಾವತಾರದಳಲಿಂನೊಂದಂ !. ಮದಿಸಿರ್ದಮಾನವಕ್ಕಳ ಪದವಿಯನೆಂತುವಿಧಿನೀನೆಲೋಕದಿಪೂಜ್ಯಂ ೪೦ ರಾಜಹಂಸ, ನಿಜ, ನಿಜ, ಪರಮಾತ್ಮನನ್ನು ದಶಾವತಾರವನ್ನೆ ತ್ತುವಂತೆಯೂ, ಈಶ್ವರನನ್ನು ಭಿಕ್ಷಬೇಡುವಂತೆಯೂ ಮಾಡಿರುವೆ. ಹೀಗಿರುಲು ಇಂತಹ ತೊಂದರೆಗೆ ಗುರಿಪಡಿಸಿದುದು ಆಶ್ಚಯ್ಯವಲ್ಲ. ವಸಂತಮಿತ್ರ, ರಾಜನೆ, ನನ್ನ ವಿಜ್ಞಾಪನೆಯೊಂದಿರುವುದು. ನನ್ನ ಮಿತ್ರನ ಶವವು ಕೆಡದಂತೆ ಒಂದು ಪೆಟ್ಟಿಗೆಯಲ್ಲಿಟ್ಟು ನನ್ನ ವಶಕ್ಕೆ