ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೈ ತಿ ಯಾ ೦ ಕ ೦ . ೬೫ ಸಾಧನೆಗೆ ಸನ್ಮಾರ್ಗವನ್ನವಲಂಬಿಸಿ, ಇಂದ್ರಿಯಗಳನ್ನು ಸ್ವಾಧೀನದ ಲ್ಲಿಟ್ಟು ಕೊಂಡು, ನಾದಾನು ಸಂಧಾನಂಗಳಿಂದ ಆ ಪರಬ್ರಂಹನನ್ನು ತಿಳಿದು ನಿತ್ಯಾನಂದವನ್ನು ಹೊಂದುವವರಿಗೆ ನನ್ನ ನಮಸ್ಕಾರವು. (ಆಕಾಶದ ಕಡೆಗೆ ನೋಡಿ) ಅಪಾ! ಸೂರನಾದರೋ, ಗಗನದ ಮಧ್ಯ ಭಾಗಕ್ಕೆ ಬಂದನು. ಎಲೈ ಮಾರ್ತಾಂಡನೆ, ಕಂದ | ಅರುಣನೆ ನೀನುರೆ ಗಗನಾಂ ತರದೋ೪ ಸಂಚರಿಸುತ್ತಿದ್ದರಂ ತಪಿಪೆನ್ನಿ 1 ಪರಿಯೇಳಿಗೆಯಳಿವುದೆನು ತುರುಶಾಲ್ಯವನೆನ್ನೊಳಿಂತು ತೋರುವೆಮುನಿಸಿಂn 1೪೧! ಇನ್ನು ಸಾವಕಾಶಮಾಡದೆ ಈ ಪೆಟ್ಟಿಗೆಯನ್ನು ಈ ಮರದ ನೆರ ಳಲ್ಲಿಟ್ಟು, ಹತ್ತಿರ ಕಾಣಿಸುವ ಈ ನದಿಯಲ್ಲಿ ನಿತ್ಯಕರ್ಮಗಳನ್ನು ತೀರಿಸಿಕೊಂಡು ಮುಂದಕ್ಕೆ ಪ್ರಯಾಣ ಮಾಡುವೆನು. (ಪೆಟ್ಟಿಗೆ ಸುನ್ನು ಒಂದು ಮರದಡಿಯಲ್ಲಿಟ್ಟು ಸೌಗುವನು.) ಶ್ರೀನಿಧಪಟ್ಟಣದ ಮಂತ್ರಿಯಾದ ಕುಶಲಮತಿಯ ಪ್ರವೇಶ. ಕುಶಲಮತಿ, ನಮ್ಮ ಮಹಾರಾಜನಾದ ಸತ್ಯನಿಧಿಗೆ ನಾನಾ ದೇಶದ ಮಹಾರಾಜರ ಭಾವಚಿತ್ರಗಳನ್ನು ತಂದು ತೋರಿಸಿದಾಗ್ಯೂ, ತನ್ನ ಕುಮಾರಿಯಾದ ಶುಭಾಂಗಿಯು ಯಾವ ವರನನ್ನೂ ವರಿಸಲಿಲ್ಲ ವೆಂದು ಹೇಳಿ ಪದೆ ಪದೆ ನನ್ನನ್ನು ಹಿಂಸಿಸುತ್ತಿರುವನು. ಏನು ಮಾಡಲಿ, ದೇಶಾಟನದಿಂದ ದೇಹಾಯಾಸವು ವಿಪರೀತವಾಗಿರುವುದು. ಮುಂದೆ ಕಾಣುವ ಆ ರಾಜ್ಯಕ್ಕಾದರೂ ಹೋಗುವೆನು. ಈ ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಮುಂದಕ್ಕೆ ಪ್ರಯಾಣ ಮಾಡುವೆನು. ಈ ಮಾರುತನಾದರೋ ವೃತ ಚಂದದಿಂದಲೆ ಮಂದಮಾರುತನಿಂದುಪುಷ್ಟ ಮನ್ನೆ ದೆತಾಂ | ಬಂದು ಸೋ೦ಕಿದೆನೆಂಬಕಾರಣದಿ೦ದೆಭೀತಿಯನೊಂದುತ೦|| ಮಿಂದು ವಾರಿಧಿಯಲ್ಲಿ ಮೋದದೆವಾರಿ ಕರವಾನುತಂ। ಕುಂದಪುಷಮರ೦ದವಾನುಮ೦ದಯಾನದೆಬೀಸುವಂ |೪೨||