ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭ ತ ತೀ ಯಾ ೦ 1 ೦ . ಮನೋಧಾರ್ಡ್ಯವು ಕುಂದಿ, ತನ್ನ ಕರ್ತವ್ಯವನ್ನೇ ಮರೆತು ವಿವೇಕ ಹೀನನಾಗಿ, ಶಕ್ತಿಯುಡುಗಿ ಬಹಳ ಅನರ್ಥಗಳಿಗೊಳಗಾಗುವ ಅಂಶ ವನ್ನು ನೀನೇ ನನಗೆ ಬೋಧಿಸಲಿಲ್ಲವೆ ? ವೃಥಾ ಚಿಂತೆಗೆ ನನ್ನನ್ನು ಗುರಿಪಡಿಸುವುದು ಸ್ನೇಹಕ್ಕೆ ತುಂಬಾ ಕೊರತೆಯಂದು ನೀನೂ ಬಲ್ಲೆ. ಕಣ್ಣು ತೆರೆದು ನೋಡುವೆಯಾ? ಈಗ ನನ್ನ ಮೇಲೆ ಕನಿ ಕರ ಹುಟ್ಟಿತೆ? ಮುತ್ತು ಕೊಡಲೆ (ಮುತ್ತಿಡುವನು ಭ್ರಾಂತಿಯಿಂದ ಬೇರೆ ಕಡೆಗೆ ತಿರುಗಿ) ಇದೇನು. ನನಗೆ ಭ್ರಾಂತಿಯೋ, ಕನಸೋ, ಮರು ಳೆ ? ಸತ್ತವರು ಮಾತನಾಡುವುದೆಂದರೇನು! ಮಿತ್ರನ ವಿಯೋ ಗದಿಂದ ನನ್ನ ಬುದ್ಧಿಯು ಮಲಿನವಾಗಿ, ಆತನೊಡನೆ ಮಾತನಾಡು ತಿದ್ದಂತೆಯೇ ಇರುವೆನು. ಇವುಗಳಿಗೆಲ್ಲಾ ನನ್ನ ಅವಿಚ್ಛಿನ್ನವಾದ ಪ್ರೀತಿಯೇ ಕಾರಣವಾಗಿರಲು, ಆತನು ನನ್ನ ಮುಂದೆಯೇ ಬಂದು ನಿಂತು ಮಾತನಾಡುತ್ತಿದಂತೆ ಮಸ್ಸಿಗೆ ಹೊಳೆಯುವುದು. ಇಂತಹ ಸ್ನೇಹಿತನನ್ನು ಮತ್ತೆಲ್ಲಿ ಕಾಣಲಿ. ಕುಶಲವು ಈತನು ಯತಿವೇಷದಿಂದಿರುವುದೇನು ! ಈತನು ಮಾತನಾಡುವುದೇನು ! ಇದರಿಂದ ನನಗೆ ಅನುಮಾನವಾಗಿದೆ. ಒಳ್ಳೇದು ಹತ್ತಿರಕ್ಕೆ ಹೋಗಿ ಮಾತನಾಡಿಸಿ ನೋಡುವೆನು. (ಹತ್ತಿರಕ್ಕೆ ಬಂದು) ಮಹಾನುಭಾವರೆ ? ನಮಸ್ಕರಿಸುವೆನು. ವಸಂತಮಿತ್ರ, ಅಯ್ಯಾ, ನಿನಗೆ ಜಯವಾಗಲಿ. ನೀನುಯಾರು, ಎಲ್ಲಿ ಹೋಗುವೆ ? ಕುಶಲಮತಿ, ನಾನು ನಮ್ಮ ಮಹಾರಾಜನಾದ ಸತ್ಯನಿಧಿಯ ಮಂತ್ರಿಯು, ನನ್ನ ಹೆಸರು ಕುಶಲಮತಿ, ನಮ್ಮ ಭೂಪಾಲನ ಮಗ ಳಾದ ಶುಭಾಂಗಿಗೆ ಅಗ್ನಕಾಲವಾಗಿರುವುದರಿಂದ ಅನೇಕ ರಾಜಾಧಿ ರಾಜರ ಭಾವಚಿತ್ರಗಳನ್ನು ತಂದು ತೋರಿಸಿದಾಗ ಒಪ್ಪದೆ, ಪದೆ ಪದೆ ತೊಂದರೆ ಪಡಿಸುತ್ತಿರುವನು. ನಾನು ವರಾನ್ವೇಷಣಾರ್ಥ ವಾಗಿ ಪ್ರಯಾಣಮಾಡುತ್ತಿರುವೆನು. ಆದರೆ ನನ್ನ ಕೋರಿಕೆಯಂ ದಿರುವುದು, ವಸಂತಮಿತ್ರ, ನಿನ್ನ ಕೋರಿಕೆಯೇನು?