ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಜ್ಞಾಪನೆ. ನಾಟಕಶಾಲೆಯು ರಾಜ್ಯಕ್ಕೆ ವಿದ್ಯಾಶಾಲೆಗೆ ಸಮಾನವಾದದ್ದಾಗಿದೆ. ಇದರಮೂಲಕ ಜನರಿಗೆ ನಾಗರಿಕತೆ, ತಿಳಿವಳಿಕೆಗಳನ್ನು ಬೋಧಿಸುವುದು ಅತ್ಯಂತ ಸುಲಭವಾಗಿರುವುದಲ್ಲದೆ ಜನರಿಗೆ ವಿನೋದವಾಗಿಯೂ ಇರುವದು. ಆದರೆ ಈ ಕಾಲಕ್ಕೆ ಅನುಗುಣವಾದ ಒಂದು ನಾಟಕವನ್ನು ಬರೆಯಬೇಕೆಂದು ನನಗೆ ತೋರಿದುದರಿಂದ, ಅನುಭವಸಿದ್ಧವಾಗಿರುವುದನ್ನೂ ಸ್ವಭಾವವನ್ನೂ ವಿರದೆ ಈ ಕಾಲದಲ್ಲಿ ನಡೆಯುತ್ತಿರುವ ಮನುಷ್ಯರಗುಣ, ಸ್ವಭಾವ, ನಡವ ಟಿಕೆ ಮುಂತಾದ ವಿಷಯಗಳನ್ನೂ, ಹೆಂಗಸರೇ ಪ್ರಚಾಭಿವೃದ್ಧಿಗೆ ಕಾರಣರಾಗಿ ರುವುದರಿಂದ ಇವರಿಂದಲೇ ಪ್ರಪಂಚಕ್ಕೆ ಹಾನಿ ವೃದ್ಧಿಯುಂಟಾಗುವುದೆಂದು ವದನ್ನೂ ನಾಟಕದ ಪಾತ್ರಗಳ ಮುಖೇಣ ವಿಷಯಗಳನ್ನು ಸ್ವಚ್ಯ ವಾಗಿ ರಪಡಿಸಿದೆ, ಈ ಗ್ರಂಥದಲ್ಲಿ ಕೆಲವು ವಿಷಯಗಳನ್ನು ಇನ್ನೂ ಹೆಚ್ಚಾಗಿ ಸೇರಿಸಬೇಕಾಗಿ ರುವುದೆಂದು ತೋರಿಬಂತು. ಆದರೆ ಸಮಯವ ಸರಿಬೀಳಲಿಲ್ಲವಾದುದರಿಂದ ಎರಡನೆಯ ಮುದ್ರಣದವರಿಗೂ ನಿರೀಕ್ಷಣೆ ಮಾಡಬೇಕಾಯಿತು. ಈ ಗ್ರಂಧ ದಲ್ಲಿ ಅಲ್ಲಲ್ಲಿ ಪ್ರಮಾದವ ಬಿದ್ದಿರಬಹುದು, ಮಹನೀಯರು ಅಂತಹ ತಪ್ಪು ಗಳನ್ನು ನನಗೆ ತಿಳಿಸಿದುದಾದರೆ ಕೃತಜ್ಞತೆಯಿಂದ ಸ್ವೀಕರಿಸಿ ಎರಡನೆಯ ಮುದ್ರಣದಲ್ಲಿ ಸರಿಮಾಡಿಕೊಳ್ಳುವೆನು,

  • ಗ್ರಂಧವನ್ನು ಮುದ್ರಣಮಾಡಿಸುವದಕ್ಕಾಗಿ ಮೈಸೂರಲ್ಲಿರುವ ವ. ನಾಯಬ ಪಿ. ನಾರಾಯಣರಾಯರವರುವಿಶೇಷವಾಗಿ ಧನಸಹಾಯಮಾಡಿರು ಇದರಿಂದ ಅವರ ಸಹಾಯಕ್ಕೆ “ಾನು ಎಷ್ಟು ಕೃತಜ್ಞನಾಗಿದ್ದರೂ ಸಾಲದು ಈ ಮಹನೀಯರು' ತೋರಿಸಿರುವ ಉದಾರಗುಣವನ್ನು ಇತರರು ಮೇಲುವ ಯಾಗಿಟ್ಟುಂಡು ಗ್ರಂಥಕರ್ತರಿಗೆ ಆಶ್ರಯವನ್ನು ಕೊಡುತ್ತಾ ಬರುತ್ತಾ ರೆಂದು ನಂಬಿರುತ್ತೆನೆ. - ಈ ನಾಟಕವನ್ನು ಅಭಿನಯಿಸುವದಕ್ಕೂ ಅನುಕೂಲಿಸುವಂತೆ ಸರಿಯಾದ ಕಾಲದಲ್ಲಿ ಯಾವತ್ತೂನತೆಯೂ ತೋರ್ಪಡದಂತೆ ಪಾತ್ರವರ್ಗಗಳನ್ನು ಕ್ರಮಪಡಿಸಿರುವುದರಿಂದ, ಆ ನಾಟಕವನ್ನು ಆಡಲು ಅಪೇಕ್ಷಿಸುವ ಯಾವ ನಾಟಕದ ಕಂಪೆನಿಯವರಾದರೂ ಈ ಗ್ರಂಥಕರ್ತರ ಅನುಮತಿಯನ್ನು ಮೊದಲು ಪಡೆದು ಆಡಬೇಕು, ಹಾಗಿಲ್ಲದಿದ್ದರೆ ಅವರಲುಕ್ಷಾನಿಗೆ ಬಾಧ್ಯ ರಾಗ ಬೇಕಾಗುತ್ತೆ. ಮೈಸೂರು,

ಆನವಟ್ಟಿ ರಾಮರಾಯ, ೧-೩-೧೯೦೬,