ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ ತು ಫ ೯೦ ಕ ೦. ಸ್ಥಾನ.- ಅಮೃತಶೇಖರೀ ಪಟ್ಟಣದ ಒಂದು ಬೀದಿಯಲ್ಲಿ (ವಸಂತಮಿತ್ರನು ಯತಿವೇಷದಿಂದ ಪ್ರವೇಶಿಸುವನು ) ವಸಂತಮಿತ್ರ, ಈ ದೇಹವು ಅಶಾಶ್ವತವಾದುದು, ನೋಡುವುದಕ್ಕೆ ಎಷ್ಟು ಸುಂದರವಾದಾಗ ಮಾಂಸ, ರಕ್ತ, ಮೂಳೆ, ಇವುಗಳಿಂದ ಕೂಡಿ ಅತ್ಯಂತ ಹೇಯವಾಗಿರುವುದರಿಂದ ಜಾಇನಿಗಳು ಇಹಲೋ ಕದ ಆಶೆಯನ್ನೇ ತೊರೆದು, ಮೂಢರಿಗೆ ತಾವು ಹುಚ್ಚರಂತೆ ಕಾಣಿಸಿ ಕೊಳ್ಳುತ್ತಾ ಪರಮಾತ್ಮನ ಪ್ರೀತಿಗೆ ಪಾತ್ರರಾಗಿರುವರು. ಅದು ದರಿಂದ ಈ ಅನಿತ್ಯವಾದ ದೇಹ ಸೌಖ್ಯವನ್ನೇ ಬಯಸುತ್ತಿರುವ ಈ ಲೋಕವು, ಅದರ ಚರಿತ್ರೆಯನ್ನು ಕೇಳಿದರೆ ತುಂಬ ಆಶ್ಚಯ್ಯ ವನ್ನುಂಟುಮಾಡದೆ ಇರಲಾರದು. ಈ ಪ್ರಪಂಚವು ಒಂದು ರಂಗಸ್ಥಳವು. ಸ್ತ್ರೀ ಪುರುಷರೆಲ್ಲರೂ ವೇಷಧಾರಿಗಳು, ಜನನ ಮರಣಗಳ ರಂಗಕ್ಕೆ ಪ್ರವೇಶ ನಿಪ್ಲಾಂ ತಗಳು, ಮನುಷ್ಯನ ಜೀವಮಾನವು ಏಳು ಅಂಕಗಳಾಗಿರಲು, ಇವುಗಳಲ್ಲಿ ವಿಚಿತ್ರವೇಷಗಳನ್ನು ಧರಿಸುವನು. (೧) ಮೊದಲನೆಯ ಅಂಕೆವಾದ ಶೈಶವಾವಸ್ಥೆಯಲ್ಲಿ ಮಾತೆಯ ತೊಡೆಯಮೇಲೆ ಅಳು ತಲೂ, ಕಾರುತ್ತಲೂ ಅಜಾನದಿಂದಿರುವನು. (೨) ಎರಡನೆಯ ಅಂಕವಾದ ಬಾಲ್ಯದಲ್ಲಿ ಸುಂದರವಾದ ಮುಖದಿಂದ ಪ್ರಕಾಶಿ ಸುತ್ತಾ, ಪಾತಃಕಾಲದಲ್ಲಿ ಪುಸ್ತಕಗಳನ್ನು ಹಸ್ತಗಳಲ್ಲಿ ಹಿಡಿದು ಕೊಂಡು, ಗೊಣಗುಟ್ಟು ತ್ಯಾ ಮನಸ್ಸಿಲ್ಲದೆ ಬಸವನ ಹುಳದಂತೆ ನಿಧಾ ನವಾಗಿ ಮಠಕ್ಕೆ ಹೋಗುವನು. (೩) ಮೂರನೆಯ ಅಂಕವಾದ ಯೌವನದಲ್ಲಿ ಮದೋನ್ಮತ್ತನಾಗಿ, ವಿರಹತಾಪದಿಂದ ನಿಟ್ಟುಸಿರು ಬಿಡುತ್ತಲೂ, ಪ್ರಿಯಳನ್ನು ಬಣ್ಣಿಸಿ ವ್ಯಾಕುಲದಿಂದ ಹಾಡುತ್ತಲೂ ಇರುವನು. (೪) ನಾಲ್ಕನೆಯ ಅಂಕವಾದ ಕೌಮಾರಾವಸ್ಥೆಯಲ್ಲಿ ಒಳ್ಳೆಯ ಪದವಿಯನ್ನೂ ದ್ರವ್ಯವನ್ನೂ ಸಂಪಾದಿಸುತ್ತಲೂ ಅತಿ