ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ ತ ಮಿ ತ ವಿ ಜಿ ಯ ನಾ ಟ ಕ ೦ - ಪ್ರಯಾಸದಿಂದ ಕೀರ್ತಿ ಪಡೆಯಬೇಕೆಂಬ ಆಸೆಯಿಂದ ಗುಂಡಿನೆದು ರಿಗೆ ನಿಲ್ಲುವುದಕ್ಕೂ ಹೆದರನು. (೫) ಐದನೆಯ ಅಂಕವಾದ ಸ್ಥವಿ ರಾವಸ್ಥೆಯಲ್ಲಿ ಲೋಕ ವ್ಯಾಪಾರವನ್ನರಿತು, ಆನೇಕ ಇತಿಹಾಸ ೪ಂದಲೂ, ನೀತಿಬೋಧಕವಾದ ಗಾಧೆಗಳಿಂದಲೂ ಪ್ರಪಂಚಕ್ಕೆ ನ್ಯಾಯವನ್ನು ತೋರಿಸುತ್ತಾ, ಪುಷ್ಕಳವಾಗಿ ಭುಂಜಿಸಿ ಸೂಲದೇಹ ದಿಂದೊಪ್ಪುತ್ತಾ ಪಂಚಾಯಿತನಂತಿರುವನು. (೬) ಆರನೆಯ ಅಂಕ ವಾದ ಜರಾವಸ್ಥೆಯಲ್ಲಿ ಅಂಗವು ವಿಗಳಿತವಾಗಿರಲು, ಪೂರದಲ್ಲಿ ಚೆನ್ನಾಗಿ ಕಾಪಾಡಿಕೊಂಡಿದ್ದ ಶರೀರಕ್ಕೆ ಈಗ ಬಹಳ ಸಡಿಲವಾದ ಅಂಗಿಗಳನ್ನು ತೊಟ್ಟು, ಸುಲೋಚನವನ್ನಿಟ್ಟು, ಪಾದರಕ್ಷೆಗಳನ್ನು ಮೆಟ್ಟಿ, ಕೈಯಲ್ಲಿ ದೊಣ್ಣೆಯನ್ನು ಹಿಡಿದುಕೊಂಡು, ಹಾಸ್ಯಕ್ಕಾಕರ ನಾಗಿ ಅತ್ಯಾಶೆಯಿಂದಿರುವನಲ್ಲದೆ, ಮೊದಲಿನ ಸ್ವರವು ತಗ್ಗಿ, ಮಕ್ಕೆ ಳಂತೆ ಕೀರಧ್ವನಿಯನ್ನು ಹೊಂದಿ, ಗಂಟಲಿನಲ್ಲಿ ನಾನಾ ವಿಧವಾದ ಸ್ವರಗಳು ಉತ್ಪತ್ತಿಯಾಗುವುವು. (೭) ಅತ್ಯಾಶ್ಚರೈಕರವಾದ ನರ ಲೀಲೆಯೆಂಬ ನಾಟಕದ ಕೊನೆಯ ಅಂಕವಾದ ಅಂತ್ಯಾವಸ್ಥೆಯಲ್ಲಿ, ಶೈಶವಾವಸ್ಥೆಯನ್ನು ಪುನಃ ತೋರ್ಪಡಿಸುತ್ಯಾ, ಜ್ಞಾನ ಹೀನನಾಗಿ ದಂತಗಳುದುರಿ, ಕಣ್ಣು ಕಾಣದೆ, ರುಚಿತಪ್ಪಿ, ಸಕಲೇಂದ್ರಿಯಗಳೂ ನಸ್ಮವಾಗುವುವು. ಆದುದರಿಂದ ಇಂತಹ ಅನಿರಚನೀಯವಾದ ಸ್ಥಿತಿಯಲ್ಲಿರುವ ಮನುಷ್ಯನ ಜೀವಮಾನವನ್ನು ಐಹಿಕ ಸುಖದಲ್ಲಿ ನೆಲೆಗೊಳಿಸಿಕೊ ಇದೆ, ಸ್ಥಿರಚಿತ್ತದಿಂದ ವಿಷಯ ವಿಮುಖನಾಗಿ, ಇಂದ್ರಿಯ ನಿಗ್ರಹ ದಿಂದ ಪರಮಾತ್ಮನನ್ನು ಸದಾ ಧ್ಯಾನಮಾಡುತ್ತಾ, ಸದ್ಯಕ್ತಿಯಿಂದ ಪೂಜಿಸುತ್ತಾ, ಪರಲೋಕವನ್ನು ಪಡೆದು, ದೇವನ ಸಂದರ್ಶನದಿಂದ ಪುನರ್ಜನ್ಮವನ್ನು ಹೊಂದದಿರುವಂತೆ ಪ್ರತಿಯೊಬ್ಬನೂ ಮಾಡಿಕೊ ಳ್ಳುವುದಕ್ಕೆ ಪ್ರಯತ್ನ ಪಡಬೇಕು, ಏನುಮಾಡಲಿ, ಮಂತ್ರಿಯಾ ದರೆ ಇನ್ನೂ ಬರಲಿಲ್ಲ. ನಾನಾದರೋ, ಆತನಿಗೆ ಬರುವೆನೆಂದು ವಾಗ್ದಾನ ಕೊಟ್ಟಿರುವೆನು. ಒಳ್ಳೇದು, ಈ ಮಾರ್ಗವಾಗಿ ನಡೆದು, ಈ ಪಟ್ಟಣದ ದಕ್ಷಿಣಭಾಗದಲ್ಲಿರುವ ಆ ಸ್ಮಶಾನಕ್ಕೆ ಹೋಗಿ ನಿಂತಿ ರುವೆನು. (ಹೋಗುವನು.)