ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬w ಚ ತು ರ್ಥಾ೦ ಕ ೦ . ಕಾಪಾಡು. ಒಳ್ಳೇದು ಇವಳು ಏನು ಮೂಡುವಳೋ ಅದನ್ನು ಮರೆ ಯಲ್ಲಿ ನಿಂತು ನೋಡುವೆನು. (ಮರೆಯಲ್ಲಿ ನಿಂತು ನೋಡುತ್ತಿರುವನು.) ಶುಭಾಂಗಿ, ತಾರೆ, ನನ್ನ ಮನೋಭಿಪ್ರಾಯವನ್ನು ನೆರವೇರಿಸಿ ಕೊಡದಿದ್ದರೆ, ಈ ನನ್ನ ಕಂಠವನ್ನು ನಿನಗೆ ಇಲ್ಲಿಯೇ ಕತ್ತರಿಸಿ ನಿನ್ನ ಪಾದಾರವಿಂದಕ್ಕೆ ಒಪ್ಪಿಸುವೆನು. (ಎಂದು ಕತ್ತಿಯನ್ನು ಕಂರಕ್ಕೆ ಸೇರಿಸಿಕೊಳ್ಳುವುದರೊಳಗಾಗಿ) ಕಾಳಿಯು ಪ್ರತ್ಯಕ್ಷಳಾಗುವಳು. ಕಾಳಿ, ಬಾಲೆ, ಈ ನಿನ್ನ ಹಠವನ್ನು ಬಿಡು. ನಿನ್ನ ಭಕ್ತಿಗೆ ಮೆಚ್ಚಿದೆನು. ನಿನ್ನ ಮನೋಭಿಪ್ರಾಯದಂತೆ ಈ ದಿವಸ ಆ ಪುರು ಪ್ರನು ತಾನಾಗಿಯೇ ಈ ಸ್ಮಶಾನಕ್ಕೆ ಬಂದಿರುವನು. ಆತನು ಯತಿ ವೇಷವನ್ನು ಧರಿಸಿರುವನು. ಅವನು ಮಂತ್ರಿಸ್ಮನಾಗಿಯೂ, ವಿದ್ಯಾವಂತನಾಗಿಯೂ, ಇರುವನು. ಈ ವಿಷಯವನ್ನು ನಿಮ್ಮ ತಂದೆಗೆ ಹೇಳಿ ನಿನ್ನ ಕೋರಿಕೆಯನ್ನು ನೆರವೇರಿಸಿಕೊ ? (ಅದೃಶ್ಯಳಾಗುವಳು ) ಶುಭಾಂಗಿ, ತಾಯೆ, ನಿನ್ನ ಅಪ್ಪಣೆಯಂತೆ ನಡೆದುಕೊಳ್ಳುವೆನು. ( ಹೊಗುವಳು.) ವಸಂ ತಮಿತ್ರ. ಇನ್ನೇನುಗತಿ, ನನ್ನ ಪರಮಾಪ್ತನಾದ ಸೌಗಂಧಿ ಕನ ಹೆಂಡತಿಯಾದ ಆನಂದವತಿಯು ಕಟುಕರಿಂದ ತಪ್ಪಿಸಿಕೊಂಡು ಬಂದಿರುವಳೋ ! ಆಕೆಯು ತನ್ನ ಗಂಡನ ಶವವನ್ನು ತೆಗೆದು ಕೊಂಡು ಬಂದೆನೆಂದು ನನ್ನನ್ನು ಹುಡುಕಿಕೊಂಡು ಬಂದು ಈ ಕಾಳಿ ಯನ್ನ, ಬೇಡಿ ನನ್ನನ್ನೂ ತನ್ನ ಗಂಡನ ಪಾದಾರವಿಂದಕ್ಕೆ ಸೇರಿಸುವು ದಕ್ಕೆ ಬಂದಿರುವಳೆ !! ಆ ನೀತ ಸ್ತ್ರೀಯು ನನ್ನ ಮೇಲಣ ಹಠ ವನ್ನು ಇನ್ನೂ ಬಿಡಲಿಲ್ಲವಲ್ಲ. ಅಲ್ಲದೆ ಈ .ಕಾಳಿಯು ಈಕೆಯ ಕೃತ್ರ ಮವಾದ ಭಕ್ತಿಗೆ ಮೆಚ್ಚಿ, ನಾನೂ ಈ ಸ್ಥಳಕ್ಕೆ ಬಂದಿರುವೆನೆಂದು ಹೇಳಿದಳಲ್ಲ ! ಕಾಳಿಯ ವರವು ಸುಳ್ಳಾಗುವುದೇ ! ಅಯ್ಯೋ, ನಾರಾ ಯಣ, ನಾನಾಗಿಯೇ ಈ ಸ್ಥಳಕ್ಕೆ ಬಂದು ನನ್ನ ಸ್ನೇಹಿತನಂತೆ ದುರ ರಣಹೊಂದಬೇಕಾಗಿ ಬಂತೆ, ಒಬ್ಬಳೇ ಇದ್ದಾಗ್ಗೆ ಅವಳನ್ನು ಕತ್ಯ