ಪುಟ:ವಸಂತಮಿತ್ರ ವಿಜಯ ನಾಟಕಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Vo ಚ ತು ಧಾ ೯೦ ಕ೦ - - ಸ್ನೇಹಿತ, ಸ್ವಾಮಿ, ಪ್ರಪಂಚದಲ್ಲಿರುವ ತಂದೆತಾಯಿಗಳು ತಮ್ಮ ತ ವ್ಯಸನಪಡದೆ ಇರತಕ್ಕವರಾರನ್ನೂ ಕಾಣೆ, ಈಗಿನ ಪ್ರಜೆಗಳ ದುರ್ನಡತೆಗಳನ್ನು ಅರಿಕೆ ಮಾಡುವನು. ತಾಯಿ ತಂದೆಗಳು ಹಣ ದಾತೆಗೆ ಹೆಣ್ಣನ್ನು ಮುದಿ ಗಂಡನಿಗೆ ಕೊಟ್ಟು ವಿವಾಹ ಮಾಡುವರಲ್ಲ, ಏನು ಹೇಳೋಣ. ಆಕೆಯು ವಯೋವಂತಳಾದ ಮೇಲೆ ಆ ಮುದಿ ಯನ ಹತೋಟಿಯಲ್ಲಿರುವಳೆ ? ಈ ಕಲಿಯುಗದಲ್ಲಿ ಮುದುಕರಿಗೆ ಚಾಪಲ್ಯವು ಹೆಚ್ಚು. ಇಂತಹವರೇ ದೊಡ್ಡ ಮನುಷ್ಯರಾದುದರಿಂದ ಗೋಪ್ಯವಾಗಿ ಪರಸ್ಥಳಕ್ಕೆ ಹೋಗಿ ಮದುವೆ ಮಾಡಿಕೊಂಡು ತಮ್ಮ ರಾಜ್ಯಕ್ಕೆ ಬಂದು ಸೇರುತ್ತಲಿದಾರೆ. ಇದು ತಮ್ಮ ಚಿತ್ರಕ್ಕೆ ಬರುವ ಹಾಗೆಯೇ ಇಲ್ಲ. ಮದುವೆಯಾದನಂತರ ತಮಗೆ ತಿಳಿದುಬಂದ ಮೇಲೆ ವಿಧಿಸುವ ಜಲ್ಮಾನೆಯನ್ನು ಕೊಟ್ಟರೆ ಸಾಕಾಗಿರುವುದೆಂದು ಭಾವಿಸಿ ಇದರಿಂದ ತಾವು ತೃಪ್ತಿ ಪಡುವಿರಿ, ಒಂದುವೇಳೆ ಅಂತಹ ಗಂಡ ಹೆಂಡರಲ್ಲಿ ಪರಸ್ಪರಾನುರಾಗವು ತಪ್ಪಿದಾಗ್ಗೆ, ನೀತರವೆಂಬ ಲದಿಂದ ಮುದಿಗಂಡನ ಸಹವಾಸವೇ ಬೇಡವೆಂದು ನ್ಯಾಯಸ್ಥಾನ ಕ್ಕೆ ಬಂದು ಧೈರವಾಗಿ ಹೇಳುತ್ತಿರುವರಲ್ಲ. ಇ೦ತಹ ನೀತ ಸ್ತ್ರೀಯರ ಗುಂಪೇ ಹೆಚ್ಚಾಗಿರುವುದರಿಂದ, ರಾಜ್ಯವು ಹೀನಸ್ಥಿತಿಗೆ ಬಂದು, ಧರ್ಮದೇವತೆಯು ನಿಲ್ಲುವುದಕ್ಕೆ ಸ್ಥಳವಿಲ್ಲದಂತಾಗಿದೆ. ಸತ್ಯನಿಧಿ, ಸ್ನೇಹಿತನೆ, ನಿನ್ನ ಮಾತು ಸತ್ಯ, ನನ್ನ ಮಗಳನ್ನು ಬರಮಾಡು. (ಸ್ನೇಹಿತನು ಮಗಳಾದ ಶುಭಾಂಗಿ ಖನ್ನು ಕರೆದುಕೊಂಡು ಬರುವನು.) ಕುಮಾರಿಯೇ, ಬಾ, ಹೀಗೆ ಕೂತುಕೊ ಶುಭಾಂಗಿ, ಜನಕನೇ, ನನ್ನ ವಯಸ್ಸೆಲ್ಲಾ ತಮ್ಮ ಮನೆಯಲ್ಲಿಯೇ ಕಳಯಬೇಕೆಂಬ ಅಭಿಪ್ರಾಯವಿದ್ದು ದಾದರೆ, ನನ್ನ ಜನ್ಮದ ಸಾರ್ಥಿ ಕೈವಾವುದೋ ಅದೇಮರೆತಂತೆ ಕಾಣಿಸುವುದು. ನಾನು ತಮ್ಮ ಮನೆ ಯಲ್ಲಿರುವವರೆಗೂ ತನ್ನ ಹೃದಯಕ್ಕೆ ಶೂಲದಂತಿರುವನೇ ಹೊರ್ತು ಮತ್ತೆ ಬೇರೆಯಲ್ಲ. ಸ್ನೇಹಿತ, ಅಮ್ಮ, ಮಂತ್ರಿಯು ನಿನಗೆ ತಕ್ಕ ವರನನ್ನು ಹುಡುಕಿ ಕೊಂಡು ಬರಲು ಹೋಗಿರುವನು ಆತುರಪಡಲಾಗದು,