ಪುಟ:ವಸಂತಮಿತ್ರ ವಿಜಯ ನಾಟಕಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ಮಿ ತ ವಿ ಜಿ ಯ ನಾ ಟ ಕ ೦ . v೩ ರಾಜೋತ್ಪನ್ನರಲ್ಲಿ ಹುಡುಕಿದಾಗ, ಯಾರನ್ನೂ ವರಿಸದೆ ಈಗ ತಮ್ಮನ್ನೇ ವರಿಸಿರುವೆನೆಂದು ಹೇಳಿರುವಳು. ತಾವು ಇಲ್ಲಿರುವರೆಂಬ ವರ್ತಮಾನವನ್ನು ತಿಳಿದು, ತಮ್ಮ ದರ್ಶನಕ್ಕೆ ಬಂದಿರುವೆನು. ತಾವು ನನ್ನ ಸುಕುಮಾರಿಯನ್ನು ಸ್ವೀಕರಿಸಿ, ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕೆಂದು ಬೇಡಿಕೊಳ್ಳುವೆನು. ವಸಂತಮಿತ್ರ, ನಿಮ್ಮ ವಿಜ್ಞಾಪನೆಗಳು ನಿರರ್ಥಕವು. ಹೇಗೆಂದರೆ, ಯತ್ಯಾಶ್ರಮದಲ್ಲಿರುವವರಿಗೆ ವಿವಾಹವೆನ್ನುವುದು ಯಾವ ಶ್ರುತಿಯಲ್ಲಿ ಹೇಳಿದೆ ? ಒಂದುವೇಳೆ ಆಕೆಯು ನನ್ನನ್ನು ವರಿಸಿ ಯಾವಪ್ರಯೋ ಜನವನ್ನು ಪಡೆದಾಳು? ರಾಜಧರ್ಮಕ್ಕೆ ವ್ಯತಿರಿಕ್ತವಾಗಿ ಯತಿಗೆ ವಿವಾಹ ಮಾಡುವೆನೆಂದು ಹೇಳುವ ದುರ್ಬೋಧನೆಯಿಂದ, ನಿನ್ನ ಧರ್ಮಗಳ ಅಸೋತಾರ್ಹವಾದವುಗಳು. ರಾಜನೆ,ಕೇಳು; ಸ್ತ್ರೀಯರು ಅತಿ ಮಾಯಾವಿಗಳು; ಎಂತಹ ದ ಸ ಕೃತ್ಯಗಳನ್ನು ಮಾಡು ವುದಕ್ಕೂ ಹೇಸತಕ್ಕವರಾಗಿಲ್ಲ. ಇದರಿಂದ ಇಹ ಸುಖವನ್ನೇ ತ್ಯಜಿ ನಿರುವ ನನಗೆ ಪುನಃ ಸಂಸಾರ ಬಂಧನವೆಂದರೇನು ? ಈ ಲೋಕ ನಿಯನ್ನು ಬಿಡು. ಸತ್ಯನಿಧಿ. ಕಾಡಿನಲ್ಲಿ ಸ್ಟೇಟ್ಟಯಾಗಿ ಬೆಳೆದ ಆನೆಯನ್ನು ತಂದು ನಮ್ಮ ಯುಗ'೦ದ ನಾವು ಹೇಳಿದಂತೆ ಕೇಳುವಹಾಗೆ ಮಾಡಿ ಕೊಳ್ಳಬಹುದಾಗಿರುವಾಗ್ಗೆ, ವಿವೇಕವಂತರಾದ ಸ್ತ್ರೀಯರನ್ನು ನಮ್ಮ ಹತೋಟಿಯಲ್ಲಿಟ್ಟು ಕೊಳ್ಳದಿದ್ದರೆ ಸ್ತ್ರೀಯರ ತಪ್ಪೇನಿರುವುದು ? ತಮ್ಮ ಅನುಭವಕ್ಕೆ ತಂದವಳನ್ನೇ ಉದ್ದೇಶಿಸಿ, ಲೋಕದಲ್ಲಿರುವ ಹಸುವು ಕೊಡುವ ಹಾಲಿನಲ್ಲೆಲ್ಲಾ ಒಂದೇ ಗುಣವಿರುವುದೆಂದು ಹೇಳುವ ನ್ಯಾಯಕ್ಕೆ ಪ್ರತಿ ಹೇಳಲು ಆಶ್ರಮಕ್ಕೆ ಹೆದರಿ ಸುಮ್ಮನಿರ ಬೇಕಾಗಿದೆ. ಶಿಕ್ಷೆಯಲ್ಲಿರುವವರೂ ಕೂಡ ಕೆಡುವುದಾಗಿದ್ದರೆ, ಪ್ರಪಂ ಚದಲ್ಲಿ ಒಳ್ಳೇದು ಕೆಟ್ಟದ್ದು ಎಂಬ ಪದಾರ್ಥವೇ ಸಿಕ್ಕುವುದು ದುರ್ಲಭವು. ಕುಶಲಮತಿ, ಸ್ವಾಮಿ, ಇದುಹಾಗಿರಲಿ, ಈ ಆಶ್ರಮವನ್ನು ಧರಿಸಿ ರುವುದಕ್ಕೆ ಕಾರಣವೇನು ?