ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xi


ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ವತಿಯಿಂದ

ಹೆಸರಿಗೆ ತಕ್ಕಂತೆ ಈ ಕೇಂದ್ರವು ಮರಾಠಿ ಹಾಗೂ ಕನ್ನಡ ಜನತೆಯ ನಡುವೆ ಬಾಂಧವ್ಯವನ್ನು ಹೆಚ್ಚಿಸಲೆಂದು ಕಳೆದ ವರ್ಷ ಪುಣೆಯಲ್ಲಿ ಜನ್ಮತಾಳಿತು. ಈ ಬಾಂಧವ್ಯದ ಮಾಧ್ಯಮಗಳೆಂದರೆ ಸಾಹಿತ್ಯ, ಕಲೆ ಮತ್ತು ಪರಿಸಂವಾದ. ಇದರನ್ವಯ ಕೇಂದ್ರವು ಹಲವು ವಿಧಾಯಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕನ್ನಡ-ಮರಾಠಿ ವಿಷಯಗಳ ಸಂಯುಕ್ತ ಅಧ್ಯಯನಕ್ಕೆ ಪುರಸ್ಕಾರ ನೀಡುತ್ತಿದೆ. ಪುಣೆ ವಿಶ್ವವಿದ್ಯಾಲಯದಲ್ಲಿ ಇದಕ್ಕಾಗಿ ಒಂದು ಪೀಠ ಸ್ಥಾಪನೆಗೆ ಯತ್ನಿಸುತ್ತಲಿದೆ. ಉಭಯ ಭಾಷೆಗಳ ಲೇಖಕರು, ಕಲಾವಿದರು ಹಾಗೂ ಅವರ ಕೃತಿಗಳನ್ನು ಪರಸ್ಪರ ಪರಿಚಯಿಸಿ ಕೊಡುತ್ತಲಿದೆ.
ಇದಕ್ಕಿಂತ ಹೆಚ್ಚು ಮಹತ್ವದ್ದು ಗ್ರಂಥ, ಲೇಖನಗಳ ಅನುವಾದ ಮತ್ತು ಪ್ರಸರಣ. 'ಕಾಖಂಡಕಿಯ ಶ್ರೀ ಮಹಿಮಪತಿರಾಯರು' ಎಂಬ ಸಂಶೋಧನ ಗ್ರಂಥವನ್ನು, 'ಕಾರಂತರ ಕಾದಂಬರಿಗಳು- ಮಹಾ ರಾಷ್ಟ್ರೀಯರ ದೃಷ್ಟಿಯಲ್ಲಿ' ಎಂಬ ಸಮೀಕ್ಷೆಯನ್ನು (ಪುತ್ತೂರಿನ ಕರ್ನಾಟಕ ಸಂಘದವರ ಮೂಲಕ) ಹೊರತಂದಿದೆ.
ಪ್ರಸ್ತುತ ಗ್ರಂಥದ ರಚನೆ-ಪ್ರಸರಣದಲ್ಲಿ ಕೇಂದ್ರವು ಲೇಖಕರಾದ ಶ್ರೀ ರ. ಭಿಡೆ ಅವರಿಗೆ ಪ್ರೇರಣೆಯನ್ನು ಒದಗಿಸಿದೆ. ಎಷ್ಟೆಂದರೂ ಅವರು ಕೇಂದ್ರದ ಧರ್ಮದರ್ಶಿಗಳಲ್ಲಿ ಒಬ್ಬರು. ಅವರ ಮೂಲ ಮರಾಠಿ ಕೃತಿಗಳ ಅನುವಾದವನ್ನು ಬೇರೆಯವರು ಮಾಡುತ್ತಲಿದ್ದಾರೆ. ಆದರೆ ಸ್ವತಃ ಅವರು ಕನ್ನಡ ಕೃತಿಗಳನ್ನು ಮರಾಠಿಗರಿಗೆ ಪರಿಚಯಿಸುವಲ್ಲಿ ತುಂಬಾ ಆಸಕ್ತರು; ಅದರಲ್ಲಿ ನಿರತರು.
ಅವರ ಈ ಕನ್ನಡಾನುವಾದ ಕೃತಿಯ ಪ್ರಕಟನೆಗೆ ಪೂರ್ಣತಃ ಪಾಲ್ಗೊಂಡ ಗೀತಾ ಬುಕ್ ಹೌಸ್ ಅವರಿಗೆ ನಾವು ಸದೈವ ಋಣಿಗಳು.

೧೮ ಫೆಬ್ರವರಿ ೧೯೯೬

ಕೃ. ಶಿ. ಹೆಗಡೆ
ಪ್ರಧಾನ ಕಾರ್ಯದರ್ಶಿ