ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೭೯

ಕಲಾಚಾತುರ್ಯವು ಅಪ್ರತಿಮವಾಗಿದೆ. ಹನುಮಂತನಿಗೆ ವರಗಳನ್ನು ಕೊಡುವಾಗ ಬ್ರಹ್ಮದೇವನು ಕೊಟ್ಟ ಸ್ಪಷ್ಟೀಕರಣವು ತುಂಬ ಮಹತ್ತ್ವದ್ದಾಗಿದೆ. ಆತನು ದೇವತೆಗಳಿಗೆ ನುಡಿದದ್ದು:

            ಜಾನತಾಮಪಿ ವಃ ಸರ್ವಂ ವಕ್ಷ್ಯಾಮಿ ಶ್ರೂಯತಾಂ ಹೀತಮ್ ‖೮‖
            ಅನೇನ ಶಿಶುನಾ ಕಾರ್ಯಂ ಕರ್ತವ್ಯಂ ಭವಿಷ್ಯತಿ |
            ತದ್ ದದಧ್ವಂ ವರಾನ್ ಸರ್ವೇ ಮಾರುತಸ್ಯಾಸ್ಯ ತುಷ್ಟಯೇ ‖೯‖

“ನೀವು ಎಲ್ಲವನ್ನು ಅರಿತಿದ್ದೀರಿ; ತಥಾಪಿ ನಿಮಗೆ ಹಿತವಾದುದನ್ನು ಹೇಳುತ್ತೇನೆ ಕೇಳಿರಿ! ಈ ಬಾಲಕನಿಂದ ಬಹುಕಾರ್ಯಗಳನ್ನು ಮಾಡಿಸಿಕೊಳ್ಳುವುದಿದೆ; ಕಾರಣ ವಾಯುವು ಸಂತುಷ್ಟನಾಗಬೇಕೆಂದು ನೀವು ಎಲ್ಲ ವರಗಳನ್ನು ಕೊಡಿರಿ!”೫೧ ಹನುಮಂತನಿಗೆ ವರವನ್ನೀಯುವದರಲ್ಲಿ ಎಷ್ಟೊಂದು ಶಿಸ್ತಿನ ಕ್ರಮವಿದೆ; ಎಷ್ಟೊಂದು ಪೂರ್ವ ನಿಯೋಜನೆ ಇದೆ ಎಂಬುದು ಬ್ರಹ್ಮದೇವನ ಉದ್ಗಾರದಿಂದ ತಿಳಿದುಬರುತ್ತದೆ. ಹನುಮಂತನ ಲಂಕೆಯ ಪ್ರಯಾಣ ಸುಗಮವಾಗ ಬೇಕು; ಆತನ ಪ್ರಾಣಕ್ಕೆ ಎಳ್ಳಷ್ಟೂ ಅಪಾಯವುಂಟಾಗಕೂಡದು ಎಂಬ ಮುನ್ನೆಚ್ಚರಿಕೆಯನ್ನು ಈ ವರಗಳನ್ನು ಕೊಡುವಾಗ ವಹಿಸಲಾಗಿದೆ. ವಜ್ರಾಸ್ತ್ರ, ವರುಣಪಾಶ, ಯಮದಂಡ, ಕುಬೇರನ ಗದೆ, ಶಂಕರನ ಆಯುಧಗಳು ಮತ್ತು ಬ್ರಹ್ಮದಂಡ ಇವುಗಳಿಂದ ಹನುಮಂತನಿಗೆ ಸಂಪೂರ್ಣ ಅವಧ್ಯತ್ವ ದೊರಕಿತು. ದೂತನೆಂದು ಕಾರ್ಯವಹಿಸ ಲೋಸುಗ ಆವಶ್ಯಕವಿದ್ದ ವಾಕ್ಪಟುತ್ವವನ್ನು, ನಿರಾತಂಕವಾಗಿ ಪ್ರಯಾಣಮಾಡುವ ಶಕ್ತಿಯನ್ನು, ಅಜಿಂಕ್ಯತ್ವವನ್ನು ಆತನಿಗೆ ಕೊಡಲಾಗಿದೆ. ಹನುಮಂತನಿಗೆ ದೊರೆತ ಹನ್ನೊಂದು ವರಗಳಲ್ಲಿ, ಬ್ರಹ್ಮದೇವನು ಮೂರು ವರಗಳನ್ನು ಕೊಟ್ಟಿದ್ದಾನೆ. ಹನುಮಂತನನ್ನು ಲಂಕೆಯಲ್ಲಿ ಅಸ್ತ್ರದಿಂದ ಬಂಧಿಸಿಡುವ ಪ್ರಯತ್ನ ನಡೆಯಿತು. ಬ್ರಹ್ಮನು ಕೊಟ್ಟ ವರವಿದ್ದುದರಿಂದ ಆತನು ಇದರಿಂದ ಪಾರಾದನು.೫೨ ಇಂದ್ರನಿಂದ ದೊರೆತ ಎರಡು ವರಗಳಲ್ಲಿಯ ಒಂದರಿಂದ ಹನುಮಂತನು 'ಇಚ್ಛಾಮರಣಿ' ಯಾದನು. ವಿಶ್ವಕರ್ಮನ ವರದಿಂದ ಆತನು 'ಚಿರಂಜೀವಿ'ಯಾದನು. ಯಮ, ಕುಬೇರ, ವಿಶ್ವಕರ್ಮ, ಶಂಕರ, ವರುಣಿ, ಅಗ್ನಿ, ಸೂರ್ಯ, ಬ್ರಹ್ಮದೇವ ಮತ್ತು ಇಂದ್ರ ಇವರ ವರಗಳಿಂದ ಲಂಕೆಯ ಪ್ರಯಾಣವು ಮತ್ತು ಅಲ್ಲಿಯ ವಾಸವು

——————
೫೧. ಉತ್ತರಕಾಂಡ, ೩೬.
೫೨. ಸುಂದರಕಾಂಡ, ೪೮.