ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಭಯರಹಿತ, ಆತಂಕರಹಿತವಾಯಿತು. ಯುದ್ಧ ಸನ್ನಿತವಾದಾಗ, ಲಂಕೆಯ ಬಗ್ಗೆ ಯಾವ ರೀತಿಯ ಏರ್ಪಾಟನ್ನು ಮಾಡಬೇಕು? ಯಾವ ಬಗೆಯ ಧೋರಣೆಯ್ನಿಟ್ಟುಕೊಳ್ಳಬೇಕೆಂಬ ಬಗ್ಗೆ, ಹನುಮಂತನ ಲಂಕೆಯ ಪ್ರಯಾಣ, ಲಂಕೆಯ ಸಂಪೂರ್ಣ ಮಾಹಿತಿಯನ್ನರಿತುಕೊಂಡು ಸುಖರೂಪವಾಗಿ ಮರಳುವಿಕೆ ರಾಮನಿಗೆ ಸಹಾಯ ಕಾರಿಯಾಗುವುದಿತ್ತು. ಈ ಕಾರಣಿದಂದಲೇ ಮೇಲಿನ ವರಗಳನ್ನು ಕೊಡಲಾಗಿತ್ತು. ಹನುಮಂತನಿಗೆ ಒಂದು ಶಾಪ ಸಿಕ್ಕಿತ್ತು; ರಾಮಾಯಣದ ಕಥೆಯ ದೃಷ್ಟಿಯಿಂದ ಅದಕ್ಕೆ ಮಹತ್ತ್ವವಿಲ್ಲ.

ಬ್ರಹ್ಮದೇವನು ಕೊಟ್ಟ ಶಾಪ-ವರಗಳು

ರಾಮ-ಲಕ್ಷ್ಮಣರ ಹುಟ್ಟು ಕೂಡ ಶಾಪ-ವರಗಳಿಂದ ಸುತ್ತಿಕೊಂಡಿದೆ. ಭೃಗು ಮುನಿಯ ಶಾಪದಿಂದ ವಿಷ್ಣುವು ಮಾನವಾವತಾರವನ್ನು ತಾಳಬೇಕಾಯಿತು. ದೇವತೆಗಳಿಂದ ಸಾವಿನ ಭಯವಿರದ ರಾವಣನು ಸತತವಾಗಿ ದೇವತೆಗಳನ್ನು ಪೀಡಿಸುತ್ತಿದ್ದನು. ಈತನನ್ನು ವಧಿಸಲೋಸುಗ ದೇವತೆಗಳು ವಿಷ್ಣುವನ್ನು ಪ್ರಾರ್ಥಿಸಿದರು. ಮಕ್ಕಳು, ಮೊಮ್ಮಕ್ಕಳು, ಅಮಾತ್ಯರು ಇವರನ್ನೊಳಗೊಂಡು ರಾವಣನನ್ನು ವಧಿಸಿ, ಹನ್ನೊಂದು ಸಾವಿರ ಸಂವತ್ಸರಗಳವರೆಗೆ ಭೂಲೋಕದಲ್ಲಿ ನೆಲಸಿ, ಪೃಥ್ವಿಯನ್ನು ಪರಿಪಾಲಿಸುವ ಹೊಣೆಯನ್ನು ಹೊತ್ತು, ಶ್ರೀವಿಷ್ಣುವು ದೇವತೆಗಳನ್ನು ಸಂತೈಸಿದನು. ಇದು ಕೇವಲ ಆಶ್ವಾಸನೆಯಾಗಿರಲಿಲ್ಲ.

           ಏವಂ ದತ್ತ್ವಾ ವರಂ ದೇವೋ ದೇವಾನಾಂ ವಿಷ್ಣುರಾತ್ಮವಾನ್ ||೩೦||

ಎಂಬ ವರವಾಗಿತ್ತು.೫೩ ದಶರಥನು ಕೈಕೊಂಡ ಪುತ್ರಕಾಮೇಷ್ಟಿ ಯಜ್ಞ; ಆ ಯಜ್ಞದಿಂದ ಪ್ರಾಪ್ತವಾದ ಪಾಯಸ- ಇವು ರಾಮಲಕ್ಷ್ಮಣರ ಹುಟ್ಟಿಗೆ ಸಂಬಂಧವುಳ್ಳ ಸಂಗತಿಗಳಾಗಿವೆ. ಪಾಯಸ-ಪ್ರಾಪ್ತಿಯು ವರವೆಂದಿರದೇ ಅದು ಯಜ್ಞದ ಫಲವಾಗಿತ್ತು.

ಬ್ರಹ್ಮದೇವನು ಅಖಿಲ ಬ್ರಹ್ಮಾಂಡದ ಕರ್ತನು, ವಿಧಾತನು, ಸರ್ವಾಧಿ ಕಾರಿಯೂ, ಸರ್ವಶ್ರೇಷ್ಠನೂ ಆಗಿರುವುದರಿಂದ ಆತನಿಗೆ ಯಾರಿಂದಲೂ ಶಾಪದ ಭಯವಿರಲಿಲ್ಲ. ವರಗಳೂ ಆತನಿಗೆ ಬೇಕಿರಲಿಲ್ಲ. ಈತನು ಇತರರಿಗೆ ಕೊಟ್ಟ ಶಾಪ-ವರಗಳು ಪರಿಶೀಲಿಸುವಂತಿವೆ. ದೇವತೆಗಳು ಶಾಪವನ್ನು ನುಡಿದ

——————

೫೩. ಬಾಲಕಾಂಡ, ೧೫.