ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೮೩

ಆತನಿಂದ ನಿನ್ನ ವಧೆಯಾಗುವುದು!” ಈ ಸಂದರ್ಭವೊಂದನ್ನು ಬಿಟ್ಟು ನೀನು ಚಿರಂಜೀವಿಯಾಗುವೆ ಎಂಬ ಕಟ್ಟಳೆಯ ವರವಾಗಿತ್ತು. ಆ ಕಟ್ಟಳೆಯ ಪಾಲನೆ ಆಗುವ ಮುನ್ನವೇ ಆತನನ್ನು ಸಾಯಿಸುವದು ಉಚಿತವೆಂದು ವಿಭೀಷಣನು ರಾಮನಿಗೆ ತಿಳಿಸಿದನು.

ವರಗಳನ್ನು ಕೊಡುವಾಗ ಬ್ರಹ್ಮನು ಜಾಗರೂಕನಿರದಿದ್ದರೂ ಒಮ್ಮೆ ಉಚ್ಚರಿಸಿದ ಶಬ್ದಗಳು ಎಂದಿಗೂ ಸುಳ್ಳಾಗಬಾರದೆಂದು ಎಚ್ಚರಿಕೆಯನ್ನು ಆತನು ವಹಿಸಿದ್ದಾನೆ. ತಾನು ಕೊಟ್ಟ ವರವು ನಿಷ್ಫಲವಾಗಲಿದೆ ಎಂದು ಕಂಡುಬಂದಾಗ ಕೂಡಲೇ ಮಧ್ಯಸ್ಥಿಕೆ ಮಾಡಿ, ಹೊಂದಾಣಿಕೆ ಮಾಡುತ್ತಾನೆ. ಅವಶ್ಯವೆನಿಸಿದಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸುತ್ತಾನೆ. ಬ್ರಹ್ಮನು, ನಿವಾತಕವಚ ಮತ್ತು ರಾವಣ, ಇವರಲ್ಲಿ ನಡೆದ ಕಾಳಗದಲ್ಲಿ ಒಪ್ಪಂದವನ್ನು ಮಾಡಿಕೊಟ್ಟನು. ರಾವಣ ಮತ್ತು ಯಮ ಇವರ ಯುದ್ಧದಲ್ಲಿ ಯಮನು ಸೋಲನ್ನು ಒಪ್ಪುವಂತೆ ಮಾಡಿದನು.೫೬

ಶ್ರವಣನ ಶಾಪದ ಭಯವು ದಶರಥನಿಗಿತ್ತು. ಬ್ರಹ್ಮದೇವನ ಹಾಗೂ ನಲಕೂಬರರ ಶಾಪಗಳ ಭಯವು ರಾವಣನಿಗೆ ಸತತವಾಗಿ ಕಾಡುತ್ತಿತ್ತು. ಅಹಲ್ಯ ಕಬಂಧ, ವಿರಾಧ ಇವರುಗಳಿಗೆ ದೊರೆತ ಶಾಪಗಳನ್ನು, ರಾಮನ ಹಿರಿಮೆಯನ್ನು ಎತ್ತಿ ತೋರಿಸಲು ನಿಯೋಜಿಸಲಾಗಿದೆ. ಲಂಕಾನಗರಕ್ಕೆ ದೊರೆತ ಶಾಪದ ಮೂಲಕ, ರಾವಣನ ವಧೆಯ ಸಮಯವು ಸಮೀಪಿಸಿದ ಸೂಚನೆಯನ್ನು ಕೊಡಲಾಗಿದೆ.

ಸೀತೆಯ ಪಾತಿವ್ರತ್ಯ

ಸೀತೆಯ ಪಾತಿವ್ರತ್ಯವು ರಾಮಾಯಣದ ಮಾನನಿಧಿಯಾಗಿದೆ. ಕಥೆಯ ದೃಷ್ಟಿಯಿಂದಲೂ ಪಾತಿವ್ರತ್ಯದ ಮಹತ್ವವು ಅಸಾಧಾರಣವಾಗಿದೆ. ಪಾತಿವ್ರತ್ಯವೆಂದರೆ ಒಂದು ದೊಡ್ಡ ತಪಸ್ಸು; ಆ ತಪಸ್ಸಿನಿಂದಲೇ ಪತಿವ್ರತೆಯ ನುಡಿಗಳಿಗೆ ಬಲ; ಅವಳು ಶಾಪ ಅಥವಾ ವರಗಳನ್ನು ಕೊಡಬಲ್ಲಳು! ಎಂಬ ದೃಢನಂಬಿಕೆ ಇದೆ. ಸೀತೆಗಿದ್ದ ಪತಿವ್ರತಾಸಾಮರ್ಥ್ಯದ ಬಗ್ಗೆ ಆಲೋಚಿಸುವ ಮೊದಲು ಪ್ರಾಚೀನ ಕಾಲದ ಸಾಮಾಜಿಕ ನಿಲುವು, ನಿಯಮ, ಪಾತಿವ್ರತ್ಯ, ಶೀಲ, ನೀತಿವಂತಿಕೆಗಳನ್ನು ಪರಾಮರ್ಶಿಸುವದು ಸೂಕ್ತವೆಂದೆನಿಸುತ್ತದೆ. 'ಮನಸ್ಸು, ಮಾತು, ದೇಹ- ಈ

——————
೫೬. ವರ ಕ್ರ. ೭೨ ಮತ್ತು ಉತ್ತರ ಕಂಡ, ೨೨.