ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೯೩

ಮತ್ತು ದೌಪದಿ ಈ ಮೂವರೂ ಪತಿವ್ರತೆಯರು ತಮ್ಮ ಶೀಲವನ್ನು ಕಳೆದುಕೊಳ್ಳುವ ಸಂಕಟವನ್ನು ಎದುರಿಸಿದ್ದಾರೆ. ಅಹಲ್ಯೆಯು ಈ ಸಂಕಟಕ್ಕೆ ಬಲಿಯಾದಳು. ಸೀತೆ ಮತ್ತು ದ್ರೌಪದಿ ಈರ್ವರು ಸಂಕಟದಿಂದ ಪಾರಾದರು. ಅವರಿಗೆ ದೊರೆತ ಯಶಸ್ಸು ಪಾತಿವ್ರತ್ಯದ ಫಲವಾಗಿಯೋ ಅಥವಾ ಇನ್ನಾವ ಬೇರೆ ಕಾರಣದಿಂದಲೋ ಎಂಬುದನ್ನು ಸರಿಯಾಗಿ ಪರಿಶೀಲಿಸಬೇಕು. ಗೌತಮನ ವೇಷಧಾರಿಯಾದವನು ಆಶ್ರಮಕ್ಕೆ ಬಂದಾಗ ಇಂದ್ರನು ಪರಪುರುಷನೆಂದು ಅಹಲ್ಯೆಗೆ ಗೊತ್ತಿರಲಿಲ್ಲ.

           ಅಜ್ಞಾನಾದ್ಘರ್ಷಿತಾ ವಿಪ್ರ ತ್ವದ್ರೂಪೇಣ ದಿವೌಕಸಾ |

(ಉತ್ತರಕಾಂಡ, ೩೦-೪೦)

ಅಹಲ್ಯೆಯ ಈ ಹೇಳಿಕೆಯನ್ನು ನಂಬಿದರೂ ಇಂದ್ರನ ಸ್ಪರ್ಶದ ನಂತರವೂ ಅದು ಪರಪುರುಷನ ಸ್ಪರ್ಶ ಎಂಬ ಸಂಗತಿಯು ಅವಳಿಗೆ ತಿಳಿಯಲಿಲ್ಲವೆನ್ನಬೇಕೆ? ಅವಳಲ್ಲಿಯ ಪಾತಿವ್ರತ್ಯದ ಬಲವು, ಇಂದ್ರನನ್ನು ದೂರವಿರಿಸಲು ಏಕೆ ಅಸಮರ್ಥವಿತ್ತು? ಅದು ನಿಜವಾಗಿ ಶಕ್ತಿಯುತವಾಗಿದ್ದರೆ ಅಹಲೈಯನ್ನು ಮುಟ್ಟಿದೊಡನೆ ಇಂದ್ರನು ಸುಟ್ಟು ಬೂದಿಯಾಗಬೇಕಿತ್ತು. ಪಾತಿವ್ರತ್ಯದ ಫಲರೂಪವಾಗಿ ಇಂದ್ರನಿಗೆ ಯಾವ ಶಿಕ್ಷೆಯೂ ಆಗಲಿಲ್ಲ. ಇಂದ್ರನಿಗೆ ನಂತರ ದೊರೆತ ಶಿಕ್ಷೆಯು ಗೌತಮನ ತಪಸ್ಸಾಮರ್ಥ್ಯದಿಂದ ಹೊರತು ಅಹಲ್ಯೆಯ ಪಾತಿವ್ರತ್ಯದಿಂದಲ್ಲ. ಇದು ನಿಜವಲ್ಲವೆಂದು ಗ್ರಹಿಸಿದರೆ ಉತ್ತರಕಾಂಡದಲ್ಲಿಂಯ ಅಹಲ್ಯೆಯ ಕಥಾಭಾಗವು 'ಸುಳ್ಳು' ಎಂದಾಗುತ್ತದೆ. ಬಾಲಕಾಂಡದ ಕಥೆಯು ನಿಜವಿದ್ದರೆ ಇಂದ್ರನು ಬಂದದ್ದು ಅವಳಿಗೆ ಗೊತ್ತಿದ್ದ ಸಂಗತಿ; ಆದ್ದರಿಂದ ವ್ಯಭಿಚಾರಿಣಿ ಎನಿಸುತ್ತಾಳೆ. ಭೀಮನು ಮೊದಲೇ ಯೋಜಿಸಿದಂತೆ ನೃತ್ಯಶಾಲೆಯಲ್ಲಿ ಕುಳಿತಿರದಿದ್ದರೆ ದ್ರೌಪದಿಯು ಕೀಚಕನ ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಳು; ಇಲ್ಲವೇ ಮರಣವನ್ನಪ್ಪಿಕೊಳ್ಳುತ್ತಿದ್ದಳು. ದ್ರೌಪದಿಯ ಶೀಲರಕ್ಷಣೆಯಾದದ್ದು ಕೇವಲ ಭೀಮನ ಬುದ್ಧಿಚಾತುರ್ಯದ ಮೂಲಕ, ಆತನ ಪರಾಕ್ರಮದ ಮೂಲಕವೇ ಹೊರತು ದ್ರೌಪದಿಯ ಪಾತಿವ್ರತ್ಯದಿಂದಲ್ಲ. ಅಹಲ್ಯೆ ಮತ್ತು ದ್ರೌಪದಿಯರಲ್ಲಿ ಪಾತಿವ್ರತ್ಯದ ತೇಜಸ್ಸು ಸ್ವಲ್ಪ ಮಟ್ಟಿಗೆ ಇತ್ತೆಂದು ಊಹಿಸಿದರೂ ಅದರ ಬಲದಿಂದ ಸ್ವಂತದ ಶೀಲರಕ್ಷಣೆಯು ಸಾಧ್ಯವಿರಲಿಲ್ಲವೆಂದು ಸ್ಪಷ್ಟವಾಗುತ್ತದೆ.
ಶೀಲವನ್ನು ಕಾಯ್ದುಕೊಳ್ಳಲು ಕೇವಲ ಪಾತಿವ್ರತ್ಯವು ಸಾಲದೆಂದು ಸೀತೆಯು ಅರಿತಿದ್ದಳು. ಶೀಲವನ್ನು ಕಳೆದುಕೊಳ್ಳುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದು ಒಳಿತೆಂದು ಅವಳು ಭಾವಿಸಿರಬಹುದು. ಅವಳ ಆತ್ಮಹತ್ಯೆಯ ಎರಡು ಪ್ರಯತ್ನಗಳು