ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೯೭

           ಯಾಸ್ತ್ವಯಾ ವಿಧವಾ ರಾಜನ್ಕೃತಾ ನೈಕಾಃ ಕುಲಸ್ತ್ರಿಯಃ ||
           ಪತಿವ್ರತಾಧರ್ಮರತಾ ಗುರುಶುಶ್ರೂಷಣೇ ರತಾಃ |
           ತಾಭಿಃ ಶೋಕಾಭಿತಪ್ತಾಭಿಃ ಶಪ್ತಃ ಪರವಶಂ ಗತಃ ||

“ಹೇ ರಾಜಶ್ರೇಷ್ಠನೇ! ಯಾವ ಕುಲಸ್ತ್ರೀಯರನ್ನು ನೀನು ವಿಧವೆಯರನ್ನಾಗಿ ಮಾಡಿದೆಯೋ, ಅವರೆಲ್ಲರೂ ಪತಿವ್ರತೆಯರು, ಧರ್ಮಿಷ್ಟರು, ಗುರುಸೇವೆಯಲ್ಲಿ ಆಸಕ್ತಿಯುಳ್ಳವರಿದ್ದರು. ಶೋಕಾನ್ವಿತರಾದ ಆ ಸ್ತ್ರೀಯರು ನಿನ್ನನ್ನು ಶಪಿಸಿದ ಕಾರಣ ನೀನು ಶತ್ರುವಿನ ವಶವಾದೆ.”೭೧ ಈ ಸಾಧ್ವಿಯರು ಶಾಪಗಳನ್ನು ನುಡಿದಾಗ ಸ್ವರ್ಗದಲ್ಲಿ ದುಂದುಭಿಗಳು ಮೊಳಗಿದುವು. ಪುಷ್ಪವೃಷ್ಟಿಯಾಯಿತು ಎಂಬ ವರ್ಣನೆ ಇದೆ.೭೨ ಇಂಥ ಸ್ತ್ರೀಯರು ಶ್ರೇಷ್ಠ ಪತಿವ್ರತೆಯರಿದ್ದರೆಂಬುದರಲ್ಲಿ ಸಂದೇಹವಿಲ್ಲ ವಾದರೂ ತಮ್ಮ ಶೀಲವನ್ನು ಕಾಯ್ದುಕೊಳ್ಳುವುದರಲ್ಲಿ ವಿಫಲರಾದರೆಂದು ಹೇಳಬಹುದು. ಪಾತಿವ್ರತ್ಯ-ಸದ್ವರ್ತನೆ ಇವುಗಳಿಂದ ಲಭಿಸುವ ಬಲ, ತೇಜಸ್ಸು ಇವು ಬಹಳ ಸ್ತಿಮಿತವಾಗಿರುತ್ತವೆ. ಅವುಗಳಿಂದ ಶೀಲರಕ್ಷಣೆಯು ಸಾಧ್ಯವಿಲ್ಲವೆಂಬ ಸಂಗತಿಯು ಮೇಲಿನ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ. ಪಾತಿವ್ರತ್ಯವೆಂಬುದು ಎಷ್ಟೇ ಉಚ್ಚಮಟ್ಟದ ಗುಣವೆನಿಸಿದರೂ ಅದರಿಂದ 'ಶೀಲರಕ್ಷಣೆ' ಸಾಧ್ಯವಿಲ್ಲ.

ತಾಪ-ವರಗಳ ಯೋಜನಾಚಾತುರ್ಯ
ಸೀತೆಯು ನಿರಾಧಾರೆ, ಅಸಹಾಯಕಳಾಗಿದ್ದಳು. ಅವಳ ಈ ಸ್ಥಿತಿಯನ್ನು ಗಮನಿಸಿ ವಾಲ್ಮೀಕಿ ಬಹುಕೌಶಲ್ಯಪೂರ್ಣವಾಗಿ ರಾವಣನಿಗೆ ಶಾಪಗಳನ್ನು ಯೋಚಿಸಿ ಸೀತೆಯ ಶೀಲರಕ್ಷಣೆಯನ್ನು ಸಾಧಿಸಿದ್ದಾನೆ. ರಾವಣನಿಗೆ ದೊರೆತ ಶಾಪವೆಂದರೆ, ಸೀತೆಯು ಭ್ರಷ್ಟಳಾಗದೇ ಉಳಿಯುವ ಪ್ರಭಾವಶಾಲೀ, ಸಹಜ ಸರಳ ಉಪಾಯವೆಂದು ವಾಲ್ಮೀಕಿಯು ಅರಿತುಕೊಂಡಿದ್ದನು. ವಾಲ್ಮೀಕಿಯ ಪೂರ್ವನಿಯೋಜನೆಯಿಂದ ರಾವಣನಿಗೆ ಶಾಪಗಳು ದೊರೆತಿವೆ. ಒಟ್ಟು ಏಳು ಶಾಪಗಳು ರಾವಣನಿಗೆ ದೊರೆತ ಉಲ್ಲೇಖವು ರಾಮಾಯಣದಲ್ಲಿ ಕಂಡುಬರುತ್ತದೆ. ಇವುಗಳಲ್ಲಿಯ ನಾಲ್ಕು ಶಾಪಗಳು ಪರಸ್ತ್ರೀ ಅಭಿಲಾಷೆ, ಬಲಾತ್ಕಾರ ಇವುಗಳಿಗೆ ಸಂಬಂಧಿತವಾಗಿವೆ.೭೩ ಮೇಲೆ ವಿವರಿಸಿದ ಹಲವು ಪತಿವ್ರತೆಯರ ಶಾಪಗಳ ಹೊರತಾಗಿ, ಬ್ರಹ್ಮ ಹಾಗೂ
——————
೭೧. ಯುದ್ಧಕಾಂಡ, ೧೧೧.
೭೨. ಉತ್ತರಕಾಂಡ, ೨೪.
೭೩. ಶಾಪ ಕ ೩೫, ೪೩, ೪೬.