ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಶಾಪಾದಪಿ ವರಾದಪಿ!
೯೯
 

ಮಹಾಭಾರತದಲ್ಲಿ ರಾಮಕಥೆಯು ವನಪರ್ವದ ಅಧ್ಯಾಯದಲ್ಲಿ (೨೭೩ರಿಂದ ೨೯೧) ಬಂದಿದೆ.

           ಕಾಮಮಂಗಾನಿ ಮೇ ಸೀತೇ ದುನೋತು ಮರಕಧ್ವಜ: |೨೭||
           ನ ತ್ವಾಮಕಾಮಾಂ ಸುಶ್ರೋಣಿ ಸಮೇಷ್ಯೇ ಚಾರುಹಾಸಿನೀಮ್ ||೨೮||

“ಹೇ ಸುಂದರಿ! ಎಲೈ ಸುಹಾಸಿನಿಯೆ! ಕಾಮನು ನನ್ನ ಶರೀರವನ್ನು ಷ್ಟೇ ಪೀಡಿಸಿದರೂ ನಾನು ನನ್ನ ಒಪ್ಪಿಗೆಯಿಲ್ಲದೆ ಸಮಾಗಮಿಸುವುದಿಲ್ಲ.” ಈ ರೀತಿ ರಾವಣನು ನಿಖರವಾಗಿ ಹೇಳಿದ್ದಾನೆ; ಆದ್ದರಿಂದ ಇನ್ನಿತರ ಪುರಾವೆಗಳ ಆವಶ್ಯಕತೆಯಿಲ್ಲ.
ತ್ರಿಜಟೆ ಎಂಬ ರಾಕ್ಷಸಿಯು ಸೀತೆಯಲ್ಲಿ ನೆಚ್ಚಿಕೆಯನ್ನುಂಟುಮಾಡಿ ಈ ರೀತಿ ಹೇಳಿದ್ದಾಳೆ:

           ಮಾ ಚ ತೇsಸ್ತು ಭಯಂ ಭೀರು ರಾವಣಾಲ್ಲೋಕಗರ್ಹಿತಾತ್ |
           ನಲಕೂಬರಶಾಪೇನ ರಕ್ಷಿತಾ ಹ್ಯಸಿ ನಂದಿನೀ ‖೫೯‖.
           ಶಪ್ತೋಹ್ಯೇಣ ಪುರಾ ಪಾಪೋ ವಧುಂ ರಂಭಾಂ ಪರಾಮೃಶನ್ |
           ನ ಶಕ್ನೋತ್ಯವಶಾರಂ ನಾರೀಮುಪೈತುವ ಜಿತೇಂದ್ರಿಯಃ ‖೬೦‖

“ಹೇ ನಂದಿನಿ! ಆತನಿಗೆ ಕುಬೇರಪುತ್ರನಾದ ನಲಕೂಬರನ ಶಾಪವು ದೊರಕಿದೆ. ಅದರಿಂದಲೇ ನಿನ್ನ ರಕ್ಷಣೆಯಾಗುತ್ತಿದೆ. ಪೂರ್ವದಲ್ಲಿ ಈ ದುಷ್ಟನು ಸೊಸೆಯಂತಿದ್ದ ರಂಭೆ ಎಂಬ ನಾರಿಯೊಡನೆ ಅತಿಪ್ರಸಂಗವನ್ನು ಮಾಡಿದನು. ಆ ಕಾರಣ ಆತನಿಗೆ ತಾನಾಗಿ ಶಾಪ ದೊರಕಿದೆ. ಈ ಅಜಿತೇಂದ್ರಿಯನಾದ ರಾವಣನು ಆತನಿಗೆ ತಾನಾಗಿ ವಶವಾಗದ ಸ್ತ್ರೀಯೊಡನೆ ಸಮಾಗಮವನ್ನು ನಡೆಸಲು ಅಸಮರ್ಥನಾಗಿದ್ದಾನೆ.”
ಶ್ರೀರಾಮನು ಸೀತೆಯ ಚಾರಿತ್ರ್ಯದ ಶುದ್ಧತೆಯ ಬಗ್ಗೆ ಸಂದೇಹವನ್ನು ತಳೆದು ಅವಳನ್ನು ತ್ಯಜಿಸಲು ಸಿದ್ಧನಾದಾಗ ಬ್ರಹ್ಮದೇವನು ಪ್ರಕಟನಾಗಿ ಇಂತೆಂದನು:

           ನಲಕೂಬರಶಾಪೇನ ರಕ್ಷಾ ಚಾಸ್ಯಾಃ ಕೃತ ಮಯಾ ‖೩೩‖

(ವನಪರ್ವ, ೨೯೧)

“ನಲಕೂಬರ ಶಾಪದಿಂದ ನಾನು ಅವಳ ರಕ್ಷಣೆಯನ್ನೇರ್ಪಡಿಸಿದ್ದೆನು.ಅದೇ ರೀತಿ