ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xiv


ಕಳುಹಿದರು. ಪ್ರಾಯದ ಎಪ್ಪತ್ತೈದು ವರ್ಷಗಳನ್ನು ದಾಟಿದ ಅವರ ವ್ಯಾಸಂಗ, ಉತ್ಸಾಹ, ಸಾಮರ್ಥ್ಯ ಹಾಗೂ ಕಾರ್ಯಾಸಕ್ತಿ ಇವುಗಳನ್ನು ಗಮನಿಸಿದರೆ ನಮ್ಮ ಶಿರ ತಾನಾಗಿ ಅವರತ್ತ ಬಾಗುತ್ತದೆ.
ಇದೇ ರೀತಿಯಲ್ಲಿ ಪೋದ್ದಾರ್ ಮಹಾವಿದ್ಯಾಲಯ, ಮುಂಬಯಿ, ಈ ಸಂಸ್ಥೆಯ ಹಿಂದೀ ವಿಭಾಗದ ಪ್ರಮುಖರಾಗಿ ನಿವೃತ್ತರಾದ ಮತ್ತು ಕಿರಿಯ ಮಹಾ ವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾದ ಡಾ॥ ಗ.ನ. ಸಾಠೆ ಇವರ ಪರಿಚಯ ವಂತೂ ಅಂಚೆಯ ಮೂಲಕವೇ ಆಯಿತು. ಅವರು ಬರೆದ ಪತ್ರದ ವೈಖರಿ, ಪ್ರತ್ಯಕ್ಷಭೇಟಿಯ ಸಂಭಾಷಣೆಯನ್ನು ಮೊಟಕುಗೊಳಿಸುವಂತಿತ್ತು. ಡಾ॥ ಸಾಠೇ ಅವರು ರಾಮಾಯಣದ ಗಾಢವ್ಯಾಸಂಗವನ್ನು ಮಾಡಿರುವರಲ್ಲದೆ ಭಾರತದ ಹಲವಾರು ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟ ರಾಮಾಯಣಗಳ ತುಲನಾತ್ಮಕ ಪರಿಶೀಲನೆಯನ್ನು ಮಾಡಿದ್ದಾರೆ. ಹಿಂದಿ ಭಾಷೆಯ ಮೇಲಿನ ಅವರ ಪ್ರಭುತ್ವ ಮಾತೃಭಾಷೆಯಷ್ಟೇ ಬಿಗಿಯಾಗಿದೆ. ಇಂಥ ಗಣ್ಯರ ಪರಿಚಯ ಮತ್ತು ನಂತರ ಬೆಳೆದುಬಂದ ಸ್ನೇಹ- ಇವು ನನಗೆ ವರಸ್ವರೂಪವಾಯಿತು. ನನ್ನ ಎಲ್ಲ ಲೇಖನಗಳನ್ನೂ ಆಳವಾಗಿ ಅಭ್ಯಸಿಸಿ, ಮಹತ್ವದ ಸೂಚನೆಗಳನ್ನು ಮಾಡಿದರು. ಇದಲ್ಲದೆ ನನ್ನ ವಾಸಸ್ಥಾನ ವಿಜಾಪುರದಲ್ಲಿದ್ದುದರಿಂದ, ಅಲ್ಲಿ ಇದ್ದುಕೊಂಡು ಮರಾಠಿ ಪುಸ್ತಕದ ಮುದ್ರಣವನ್ನು ನೋಡಿಕೊಳ್ಳುವದು ದುಸ್ತರವಿತ್ತು. ಈ ನನ್ನ ಅಡಚಣೆಯನ್ನು ಗಮನಿಸಿ ಡಾ॥ ಸಾಠೆ ಇವರು ತಾವಾಗಿ ನೆರವಿನ ಕೈ ಮುಂದೆ ಚಾಚಿ ಮುದ್ರಣ ವ್ಯವಸ್ಥೆ ಎಲ್ಲ ಕಾರ್ಯವನ್ನು ತಮ್ಮ ಸ್ವಂತದ ಕೆಲಸವೆಂಬಂತೆ ಪ್ರೀತಿಯಿಟ್ಟು ಪೂರೈಸಿದರು. ಅವರು ಪಟ ಪರಿಶ್ರಮ, ವ್ಯಯ ಮಾಡಿದ ಸಮಯಗಳಿಗೆ ಮಿತಿಯಿಲ್ಲ: ಬರೀ ಶಬದಗಳಿಂದ ಅದನ್ನು ತುಂಬಿಕೊಡಲು ಅಸಾಧ್ಯವಿದೆ. ಸದ್ಯ ಅವರು ಸಂತ ಏಕನಾಥ ಮಹಾರಾಜರ 'ಭಾವಾರ್ಥ ರಾಮಾಯಣ'ದ ಹಿಂದಿ ಅನುವಾದದಲ್ಲಿ ತೊಡಗಿದ್ದರೂ ಅದನ್ನು ಬದಿಗಿರಿಸಿ ತನ್ನ ಗ್ರಂಥದ ಮುದ್ರಣಕಾರ್ಯವನ್ನು ಸಾರ್ಥಕವಾಗಿ ಮಾಡಿಕೊಟ್ಟರು. ನನ್ನ ಈ ಗ್ರಂಥದ ಅಂತರಂಗವನ್ನು ಶುದ್ಧೀಕರಿಸಿ ಅದಕ್ಕೆ ಸೌಷ್ಠವವನ್ನು ನಿರ್ಮಿಸಿಕೊಟ್ಟ ಎಲ್ಲ ಶ್ರೇಯಸ್ಸು ಈ ಇಬ್ಬರು ಪ್ರಾಚಾರ್ಯರದೇ ಅಗಿದೆ.
ಕಾಂಟಿನೆಂಟಲ್ ಪ್ರಕಾಶನ ಸಂಸ್ಥೆ, ಪುಣೆ, ಈ ಖ್ಯಾತ ಸಂಸ್ಥೆಯವರು ನನ್ನ ಈ ಮರಾಠಿ ಗ್ರಂಥವನ್ನು ಪ್ರಕಟಿಸಿರುವ ಸಂಗತಿ ನನಗೆ ಗೌರವಾಸ್ಪದವಾಗಿದೆ. ಈ ಸಂಸ್ಥೆ ಹೊಂದಿರುವ ಸ್ಥಾನ, ಪ್ರತಿಷ್ಠೆ, ಸ್ಥಿರತೆ ಇವೆಲ್ಲವೂ ಮಿತ್ರವರ್ಯರಾದ ಶ್ರೀ ಅನಂತರಾವ ಕುಲಕರ್ಣಿ ಇವರಲ್ಲಿದ್ದ ಗ್ರಂಥಪ್ರೇಮ, ರಸಿಕತೆ, ಸೌಂದರ್ಯದೃಷ್ಟಿ, ಪ್ರಾಮಣಿಕತೆ, ಚಾಕಚಕ್ಯತೆ ಇವನ್ನು ಆಧರಿಸಿದ್ದ ಅವರ ಐವತ್ತು ವರ್ಷಗಳ ಪರಿಶ್ರಮವಿದೆ. ಈ ರೀತಿ ಹಲವು ಬಗೆಯಲ್ಲಿ ಈ ಗ್ರಂಥದ ಅಂತರ್ಬಾಹ್ಯಸೌಂದರ್ಯ ಸೌಷ್ಠವವು ಪೋಷಿತವಾಗಿದೆ.
ಜೊತೆಗೆ ನನ್ನ ಗೆಳೆಯನಾದ ಶ್ರೀ ವಿ.ವಾ. ಗೋಖಲೆ, ಧಾರವಾಡ,