ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೧೧


ವಿಶ್ವಾಮಿತ್ರನ ಆಜ್ಞೆಯನ್ನು ಪಿತ್ರಾಜ್ಞೆ ಎಂದು ಭಾವಿಸಿ, ರಾಮನು ತಾಟಕಿಯ ಸಂಹಾರಕ್ಕೆ ಸಜ್ಜಾದನು. ಮಾಯಾವೀ ತಾಟಕೀಯ ಅಜ್ಜಿಂಕ್ಯಳಾಗಿದ್ದಳು. ಅವಳು ರಾಮನ ಮೇಲೆ ಏರಿಹೋದ ಸಮಯದಲ್ಲಿ ಸ್ತ್ರೀವಧೆ ಸೂಕ್ತವಲ್ಲವೆಂದು ಬಗೆದು ರಾಮನು ಆಕೆಯನ್ನು ಬಲಹೀನಳನ್ನಾಗಿ ಮಾಡಬಯಸಿದನು. ಆಗ ಆ ರಕ್ಕಸಿಯು ಕಲ್ಲುಬಂಡೆಗಲ ಮೇಲೆ ಸುರಿಸ ಲಾರಂಭಿಸಿದಳು. ಆಗ ರಾಮನು ಬಾಣಗಳಿಂದ ಅವಳ ಕೈಗಳನ್ನು ತುಂಡರಿಸಿದನು. ಆಗ ಲಕ್ಷ್ಮಣನು ಬಾಣಗಳನ್ನು ಬಿಟ್ಟು ಆ ರಕ್ಕಸಿಯ ಕಿವಿ ಮೂಗುಗಳನ್ನು ಕತ್ತರಿಸಿದನು. ಬೇರೆ ರೂಪವನ್ನು ಧರಿಸುವದು ತಾಟಕಿಗೆ ಆಗ ಅಸಾಧ್ಯವಾಯಿತು. ಕೊನೆಗೆ ರಾಮನು ಮತ್ತೊಂದು ಬಾಣವನ್ನು ಅವಳ ಎದೆಗೆ ಗುರಿಯಿಟ್ಟು ಹೊಡೆದನು. ಆ ರಕ್ಕಸಿಯು ಸತ್ತುಹೋದಳು.
ತಾಟಕಿಯ ಸಂಹಾರದಿಂದ ಇಂದ್ರಾದಿ ದೇವತೆಗಳು ಹಾಗು ವಿಶ್ವಾಮಿತ್ರನು ಸಂತುಷ್ಟರಾದರು.


          ಉವಾಸ ರಜನೀಂ ತತ್ರ ತಾಟಕಾಯಾ ವನೇ ಸುಖಮ್ |
          ಮುಕ್ತಶಾಪಂ ವನಂ ತಚ್ಚ ತಸ್ಮಿನ್ನೇವ ತದಾಹನಿ |
          ರಮಣೀಯಂ ವಿಬಭ್ರಾಜ ಯಥಾ ಚೈತ್ರರಥಂ ವನಮ್ ‖೩೫‖


ಆ ರಾತ್ರಿಯನ್ನು ಅವರು ತಾಟಕಾವನದಲ್ಲಿ ಸುಖವಾಗಿ ಕಳೆದರು. ಶಾಪ ಮುಕ್ತವಾದ ಆ ಅರಣ್ಯವು ಇಂದ್ರನ ಚೈತ್ರವನದಂತ ರಮಣೀಯವಾಗಿ ಕಂಗೊಳಿಸಿತು.
ಶಾಪಗ್ರಸ್ತಳಾದ ತಾಟಕಿಯ ವಾಸ್ತವ್ಯದಿಂದ ತಾಟಕಾವನವೂ ಶಾಪಮುಕ್ತವಾಗಿರಬೇಕು. ಆದ್ದರಿಂದ ತಾಟಕಿಯ ವಧೆಯಿಂದ ಅದು ಶಾಪಮುಕ್ತವಾಯಿತೆಂದು ಹೇಳಲಾಗಿದೆ. ತಾಟಕಾವನಕ್ಕೆ ಯಾರಿಂದ ಶಾಪ ಬಂದಿತ್ತು? ಯಾವ ಬಗೆಯ ತಾಪವಿತ್ತು?- ಎಂಬುದು ಸ್ಪಷ್ಟವಾಗಿಲ್ಲ.

೮. ಕುಶಕನ್ಯೆಯರು < ವಾಯು

ಬಾಲಕಾಂಡ/೩೨

ಮಿಥಿಲಾಪಟ್ಟಣಕ್ಕೆ ಸಾಗುತ್ತಿದ್ದಾಗ ದಾರಿಯಲ್ಲಿ ಸಿಗುವ ಪ್ರದೇಶಗಳನ್ನು ಕುರಿತು ತಿಳಿದುಕೊಳ್ಳಬೇಕೆಂಬ ಇಚ್ಛೆಯನ್ನು ರಾಮನು ಪ್ರಕಟಿಸಿದನು. ಆಗ ವಿಶ್ವಾಮಿತ್ರನು ಕುಶಕನ್ಯೆಯರ ವೃತ್ತಾಂತವನ್ನು ಹೇಳುತ್ತಾನೆ:
ಕುಶನಾಭನಿಗೆ ಲಾವಣ್ಯವತಿಯರಾದ ನೂರು ಜನ ಕನ್ಯೆಯರಿದ್ದರು. ಒಮ್ಮೆ ಒಳ್ಳೆಯ ಅಲಂಕಾರಗಳನ್ನು ಧರಿಸಿ, ಒಂದು ಉಪವನದಲ್ಲಿ ಅವರೆಲ್ಲರೂ