ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೧೩


ಕುಶಕನ್ಯೆಯರ ಈ ವಚನಗಳನ್ನು ಕೇಳಿ ವಾಯುವು ಕೋಪಗೊಂಡನು. ಆ ಕನ್ಯೆಯರ ಗಾತ್ರಗಳಲ್ಲಿ ಪ್ರವೇಶಿಸಿ ಆತನು ಅವರ ಅಂಗಾಂಗಗಳನ್ನು ಭಂಗ ಗೊಳಿಸಿದನು. ಅವರು ಸೌಂದರ್ಯಹೀನರಾಗಿ ಕುಬ್ಜೆಯರಾದರು.
ಪ್ರತ್ಯಕ್ಷದಲ್ಲಿ ಶಾಪವನ್ನು ಕೊಟ್ಟಿಲ್ಲವಾದ್ದರಿಂದ ಶಾಪದ ಸ್ವರೂಪವು ಸ್ಪಷ್ಟವಾಗಿಲ್ಲ.

೯. ಉಮಾ < ದೇವತೆಗಳು

ಬಾಲಕಾಂಡ/೩೬

ದೇವಲೋಕ ಹಾಗೂ ಮನುಷ್ಯಲೋಕಸಂಬಂಧಿತ ಹಿಮಾಲಯಕನ್ಯೆಯಾದ ಉಮಾ ಇವಳ ಸವಿಸ್ತರ ಚರಿತ್ರೆಯನ್ನು ರಾಮನು ಅರಿಯಲು ಬಯಸಿದನು. ಆಗ ಅದನ್ನು ವಿಶ್ವಾಮಿತ್ರನು ನಿರೂಪಿಸಿದನು:

ಗೌರಿ ಮತ್ತು ಶಂಕರ ಇವರು ಸುದೀರ್ಘ ರತಿಕ್ರೀಡೆಯಲ್ಲಿ ತೊಡಗಿ ನೂರು ದಿವ್ಯ ಸಂವತ್ಸರಗಳು ಕಳೆದವು. ಉಮೆಗೆ ಪುತ್ರಪ್ರಾಪ್ತಿಯಾಗಲಿಲ್ಲ. ಇವರಿಬ್ಬರ ಸಂಯೋಗದಿಂದ ಹುಟ್ಟಲಿರುವ ಸಂತಾನವನ್ನು ಯಾರು ಸಹಿಸಿಕೊಳ್ಳಬಹುದೆಂಬ ಚಿಂತೆ ಬ್ರಹ್ಮಾದಿ ದೇವತೆಗಳಿಗಾಯಿತು. ಅವರು ಶಿವನ ಬಳಿಗೆ ಹೋಗಿ ಪ್ರಾರ್ಥಿಸಿದರು: “ಭೋ ಮಹಾದೇವನೇ! ಈ ಜಗತ್ತಿನ ಹಿತರಕ್ಷಣೆಯಲ್ಲಿ ನೀನು ಆಸಕ್ತನಾದವನು; ನಮಗೆ ದಯಪಾಲಿಸು. ನಿನ್ನ ತೇಜಸ್ಸು ಬ್ರಹ್ಮತೇಜಸ್ಸನ್ನೊಳಗೊಂಡಿದೆ. ಅದನ್ನು ಸಹಿಸುವ ಕ್ಷಮತೆ ಜನರಲ್ಲಿಲ್ಲ; ಕಾರಣ ನಿನ್ನ ತೇಜಸ್ಸನ್ನು ತೇಜೋಮಯವಾದ ದೇಹದಲ್ಲಿ ಧರಿಸಿ ಸಮಸ್ತ ಲೋಕವನ್ನು ಕಾಪಾಡು! ಈ ಜಗತ್ತನ್ನು ಶೂನ್ಯಗೊಳಿಸಬೇಡ.” ಶಂಕರನು ದೇವತೆಗಳ ಕೋರಿಕೆಯನ್ನು ಮನ್ನಿಸಿ ಇಂತೆಂದನು: “ನಾನು ತೇಜೋಬಲದಿಂದ ಉಮೆಯನ್ನೊಡಗೂಡಿ ತೇಜಸ್ಸನ್ನು ಧರಿಸುವೆ; ಆದರೆ, ಸ್ವಸ್ಥಾನದಿಂದ ಕದಲಿದ ಈ ತೇಜಸ್ಸನ್ನು (ವೀರ್ಯ) ಯಾರಾದರೂ ಧರಿಸುವದು ಆವಶ್ಯಕವಿದೆ.” ಆ ತೇಜಸ್ಸನ್ನು ಧರಿಸಲು ಪೃಥ್ವಿಯು ಒಪ್ಪಿಕೊಂಡಳು. ಶಂಕರನು ತನ್ನ ತೇಜಸ್ಸನ್ನು ಬಿಟ್ಟನು. ಪೃಥ್ವಿಯು ಈ ಕಾರಣದಿಂದ ವನ-ಪರ್ವತಗಳಿಂದ ತುಂಬಿಕೊಂಡಿತು. ಆಗ ದೇವತೆಗಳು ಅಗ್ನಿಗೆ ಈ ತೇಜಸ್ಸಿನಲ್ಲಿ ಪ್ರವೇಶಿಸಲು ಬಿನ್ನೈವಿಸಿದರು. ಅಗ್ನಿಯಿಂದ ಕೂಡಿದ ಆ ತೇಜಸ್ಸು ಶ್ವೇತಪರ್ವ ರೂಪವನ್ನು ತಾಳಿ ಯಾವ ಭೂಭಾಗದಲ್ಲಿ ಪ್ರವೇಶಿಸಿತೋ ಅದು ತೇಜಸ್ವಿಯಾದ ಶರಗಳ ದಿವ್ಯವನವಾಗಿ ರೂಪ ತಾಳಿತು. ಆ ವನದಲ್ಲಿ ಮಹಾತೇಜಸ್ವಿಯಾದ. ಅಗ್ನಿಸಂಭೂತನಾದ ಕಾರ್ತಿಕೇಯನು ಜನ್ಮತಾಳಿದನು. ಸಕಲ ದೇವತೆಗಳು ಉಮೆ