ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

XV

ಶ್ರೀ ಮಧು ಕೃಷ್ಣ ಜೋಶಿ, ವಿಜಾಪುರ, ಶ್ರೀ ಅಮರೇಂದ್ರ ಗಾಡಗೀಳ, ಪುಣೆ, ಮತ್ತು ಪ್ರಾಧ್ಯಾಪಕರಾದ ಗೋಪಾಲನ್, ವಿಜಾಪುರ- ಇವರು ಹಸ್ತಪ್ರತಿಯನ್ನು ಓದಿ ಅನೇಕ ಉಪಯುಕ್ತ ಸಲಹೆಗಳನ್ನು ಕೊಟ್ಟರು. ನನ್ನ ಕುಟುಂಬದಲ್ಲಿಯ ವ್ಯಕ್ತಿಗಳು ನನ್ನ ಬರವಣಿಗೆಗೆ ಪ್ರೋತ್ಸಾಹವನ್ನು ಕೊಟ್ಟರಲ್ಲದೆ ನನ್ನ ಕಣ್ಣು ತಪ್ಪಿ ಲಕ್ಷ್ಮಣರೇಖೆಯ ಅರಿವನ್ನು ಸತತ ಮಾಡಿಕೊಡುತ್ತಿದ್ದನು. ಗಾಯತ್ರಿ ಮುದ್ರಣಾಲಯದ ಶ್ರೀ ಶಾಂ.ದೇ. ಜೋಶಿಯವರು ಇದನ್ನು ಅಚ್ಚುಕಟ್ಟಾಗಿ ಮುದ್ರಿಸಿಕೊಟ್ಟರು.
ಓದುಗರ ಕೈಗೆ ಈ ಪುಸ್ತಕವನ್ನು ಕೊಡುವಾಗ ನಿಜವಾಗಿಯೂ 'ಇಂದು ನಾನು ಶಾಪಮುಕ್ತನಾದೆ' ಎನಿಸುತ್ತದೆ.

ವಿಜಾಪುರ
ಜನವರಿ ೧, ೧೯೮೭

ಶ್ರೀಪಾದ ರಘುನಾಥ ಭಿಡೆ